fbpx
ಹೆಚ್ಚಿನ

ನಾಳೆ ಸ್ನೇಹಿತರ ದಿನ, ಇದು ಹೇಗೆ ಪ್ರಾರಂಭವಾಯಿತು, ಇದರ ಹಿಂದೆ ಇರುವ ಕಥೆ ಏನು ಅಂತ ಗೊತ್ತಾ ನಿಮಗೆ ,ತಿಳ್ಕೊಳ್ಳಿ ಈಗ .

ಆಗಸ್ಟ್ 5 ನೇ ತಾರೀಖು ಭಾನುವಾರ ನಾಳೆ , ಈ ದಿನ ಸ್ನೇಹಿತರ ದಿನ ಶುರುವಾಗಿದ್ದು ಹೇಗೆ ಎಂದು ನಿಮಗೆ ಗೊತ್ತೇ ?
ನಾಳೆ ಆಗಸ್ಟ್ ಐದನೇ ತಾರೀಖು ಮೊದಲನೇ ಭಾನುವಾರವನ್ನು ಸ್ನೇಹಿತರ ದಿನ ಎಂದು ಆಚರಿಸಲಾಗುತ್ತದೆ . ಆದರೆ ಇದು ಹೇಗೆ ಪ್ರಾರಂಭವಾಯಿತು ? ಇದರ ಹಿಂದೆ ಇರುವ ಕಥೆ ಏನು ?ಎಂದು ನಿಮಗೆ ಗೊತ್ತೇ ? ಬನ್ನಿ ಇಂದು ನಾವು ಇದರ ಬಗ್ಗೆ ತಿಳಿದುಕೊಳ್ಳೋಣ.

 

 

 

ಆಗಸ್ಟ್ ತಿಂಗಳು ಬಂತೆಂದರೆ ಹಳೆಯ ಸ್ನೇಹಿತರೆಲ್ಲಾ ಒಂದಾಗುತ್ತಾರೆ. ಸ್ನೇಹಿತರ ದಿನಾಚರಣೆಗೆ ಸಿದ್ಧರಾಗುತ್ತಾರೆ. ಅಂತಹ ನಿಷ್ಕಲ್ಮಶ ಸ್ನೇಹಕ್ಕೆ ಕೊನೆಯಿಲ್ಲ. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.ಈ ಭಾರಿ ಅಗಸ್ಟ್ 5 ನೇ ತಾರೀಖಿನಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ .
ಅನೇಕ ಅನೇಕ ವರ್ಷಗಳಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ನೇಹಿತರ ದಿನವನ್ನು ಆಚರಿಸುತ್ತಾ ಬರಲಾಗಿದೆ. ಸ್ನೇಹಿತರ ದಿನಾಚರಣೆ ಹೇಗೆ ಶುರುವಾಯಿತು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರವಿಲ್ಲ.
ಮೊದಲ ವಿಶ್ವಯುದ್ಧದ ನಂತರ ಎಲ್ಲಾ ದೇಶಗಳ ಮಧ್ಯೆ ದ್ವೇಷ ಹೊಗೆಯಾಡುತ್ತಿತ್ತು . ಒಬ್ಬರನ್ನೊಬ್ಬರು ನಂಬುತ್ತಿರಲಿಲ್ಲ ಹಗೆತನವನ್ನು ದೂರ ಮಾಡಲು ಅಮೆರಿಕ ಸರ್ಕಾರ 1935 ರಲ್ಲಿ ಫ್ರೆಂಡ್ಶಿಪ್ ದಿನವನ್ನು ಶುರು ಮಾಡಲಾಗಿದೆ .

ಇನ್ನೊಂದು ಮಾಹಿತಿಯ ಪ್ರಕಾರ ಆಗಸ್ಟ್ ಮೊದಲ ಭಾನುವಾರ ಅಮೇರಿಕ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದರಂತೆ. ಇದರಿಂದ ಬೇಸರಗೊಂಡ ಆತನ ಸ್ನೇಹಿತ ,ಆತ್ಮಹತ್ಯೆಗೆ ಶರಣಾಗಿದ್ದನಂತೆ. ಇದು ಸ್ಥಳೀಯರ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತಂತೆ.

ಅಮೆರಿಕ ಸರ್ಕಾರ ಜನರ ಮಾತಿಗೆ ಮನ್ನಣೆ ನೀಡಿ, ಇಪ್ಪತ್ತೊಂದು ವರ್ಷಗಳ ನಂತರ 1958 ರಲ್ಲಿ ಪ್ರಸ್ತಾವನೆಯನ್ನು ಅಂಗೀಕರಿಸಿತ್ತಂತೆ. ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನಾಚರಣೆಯನ್ನಾಗಿ ಮಾಡಬೇಕೆಂದು ಘೋಷಣೆ ಮಾಡಿದ್ದರಂತೆ.
ಭಾನುವಾರ ಬಹುತೇಕರಿಗೆ ರಜೆ ಇರುವ ಕಾರಣ ಸ್ನೇಹಿತರ ಜೊತೆ ಖುಷಿಯಾಗಿ ಕಳೆಯಬಹುದು ಎಂದು ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನವನ್ನಾಗಿ ಆಯ್ಕೆ ಮಾಡಲಾಗಿದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top