ಅರೋಗ್ಯ

ಸಕ್ಕರೆ ಖಾಯಿಲೆ ದೂರ ತಳ್ಬೇಕು ಅಂದ್ರೆ ಈ 6 ಸುಲಭವಾದ ಮನೆ ಮದ್ದುಗಳನ್ನ ಬಳಸಿ .

ಮಧುಮೇಹಕ್ಕೆ  ಮನೆ  ಮದ್ದುಗಳು.

ಭಾರತದಲ್ಲಿ  ಮಧುಮೇಹಿಗಳ ಸಂಖ್ಯೆ  ಏರಿಕೆಯಾಗುತ್ತಲೇ ಇದೆ. ಇದಕ್ಕೆ  ಕಾರಣ  ನಮಗೆಲ್ಲರಿಗೂ ಗೊತ್ತಿರುವ  ಹಾಗೆ   ನಮ್ಮ ದಿನನಿತ್ಯದ  ಜೀವನ  ಶೈಲಿ ಮತ್ತು ನಾವು  ತಿನ್ನುವ  ಸಕ್ಕರೆ  ಅದರ ಬದಲು  ಬೆಲ್ಲವನ್ನು  ತಿಂದರೆ ಒಳ್ಳೆಯದು,ದೇಹಕ್ಕೂ  ಆರೋಗ್ಯಕರ .

ಮಧುಮೇಹವನ್ನು ನಿಯಂತ್ರಣದಲ್ಲಿಡಲು  ಪ್ರತಿನಿತ್ಯ ಮಾತ್ರೆಗಳನ್ನು  ಸೇವಿಸಬೇಕೆಂದಿಲ್ಲ.

 

ಆಹಾರ  ಸೇವನೆಯಲ್ಲಿ    ಸ್ವಲ್ಪ ಬದಲಾವಣೆ  ಮಾಡಿಕೊಂಡರೆ ಸಾಕು  ಅಪಾಯವನ್ನು  ಖಂಡಿತ ತಡೆಗಟ್ಟಲು ಸಾಧ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡಲು   ಮನೆ ಮದ್ದನ್ನು  ಮಾಡಬಹುದು.

1. ಬೆಳಗ್ಗೆ ಖಾಲಿ   ಹೊಟ್ಟೆಗೆ ಹಾಗಲಕಾಯಿ  ಜ್ಯೂಸ್ ಸೇವಿಸಿದರೆ ಮಧುಮೇಹವನ್ನು ತಡೆಗಟ್ಟಬಹುದು  ಎಂದು ಸಾಬೀತಾಗಿದೆ.

 

 

ಇದು ಬಹಳ  ಕಹಿ ರುಚಿಯನ್ನು ಹೊಂದಿರುವುದರಿಂದ ಕೆಲವರಿಗೆ  ಇದರ  ಹಸಿ ಸೇವನೆ  ಕಷ್ಟ  ಆದ್ದರಿಂದ ಜ್ಯೂಸ್  ಸೇವಿಸವ  ಬದಲು ಪಲ್ಯ  ಅಥವಾ  ಸಾರು ಮಾಡಿ ಸೇವಿಸಬಹುದು.ಇದನ್ನು ಪ್ರತಿನಿತ್ಯ  ಆಹಾರದಲ್ಲಿ ಸೇರಿಸಿದರೆ  ಆರೋಗ್ಯಕ್ಕೆ ಕೂಡ  ಒಳ್ಳೆಯದು.

2. ರಾತ್ರಿಯ ಸಮಯದಲ್ಲಿ ಒಂದು  ಚಮಚ  ಮೆಂತ್ಯ ನೀರಿನಲ್ಲಿ  ನೆನೆ  ಹಾಕಿ,ಬೆಳಗ್ಗೆ ಎದ್ದ  ತಕ್ಷಣ  ಹಲ್ಲುಜ್ಜಿ ನೆನೆಸಿಟ್ಟ  ಮೆಂತ್ಯ  ಮತ್ತು ಅದರ  ನೀರು  ಎರಡನ್ನು ಕುಡಿಯಿರಿ.

3. ಜಂಬು ನೇರಳೆಹಣ್ಣು ಕೂಡ  ಮಧುಮೇಹಕ್ಕೆ ಉತ್ತಮ   ಔಷಧಿಯಾಗಿ ಕೆಲಸ  ಮಾಡುತ್ತದೆ. ಇದು ಮೇದೋಜೀರಕ  ಗ್ರಂಥಿಗಳ ಮೇಲೆ  ಕೂಡ  ಉತ್ತಮ ಪರಿಣಾಮ   ಬೀರುತ್ತದೆ.

ಜಂಬು ನೇರಳೆಹಣ್ಣಿನ ಬೀಜವನ್ನು  ಒಣಗಿಸಿ  ಪುಡಿ ಮಾಡಿ  ಇಟ್ಟುಕೊಳ್ಳಿ.ಇದನ್ನು ನೀರಿನಲ್ಲಿ  ಕಲೆಸಿ  ದಿನಕ್ಕೆ ಎರಡು  ಬಾರಿ   ಕುಡಿಯಿರಿ.

4. ಸೀಬೇಕಾಯಿ ಅಥವಾ ಬಿಕ್ಕೆಹಣ್ಣು   ಮಧುಮೇಹಕ್ಕೆ ರಾಮಬಾಣ.  ಇದರಲ್ಲಿ ವಿಟಮಿನ್-ಸಿ   ಮತ್ತು ನಾರಿನಂಶವು    ಅಧಿಕವಾಗಿರುವುದರಿಂದ ಮಧುಮೇಹಿಗಳು ಭಯವಿಲ್ಲದೆ ಸೇವಿಸಬಹುದು.

 

 

ಆದರೆ ಇದರಲ್ಲಿ  ಗಮನವಿಡಿ  ಸೀಬೇಕಾಯಿ ಯನ್ನು  ಸಿಪ್ಪೆ  ಸಮೇತ ತಿಂದರೆ  ಸಕ್ಕರೆ  ಮಟ್ಟವನ್ನು ಹೆಚ್ಚಿಸುತ್ತದೆ  ಆದ್ದರಿಂದ  ಸಿಪ್ಪೆ  ತೆಗೆದು  ತಿನ್ನಿ.

5. ಬೆಂಡೆಕಾಯಿಯಲ್ಲೂ ಕೂಡ ಮಧುಮೇಹವನ್ನು ನಿಯಂತ್ರಿಸುವ  ಶಕ್ತಿ  ಇದೆ ಹೇಗೆಂದರೆ  ಒಂದು  ಲೋಟ ನೀರಿಗೆ  ಒಂದು  ಅಥವಾ ಎರಡು   ಬೆಂಡೆಕಾಯಿಯನ್ನು ಸಣ್ಣದಾಗಿ  ಹಚ್ಚಿ  ರಾತ್ರಿಯೇ ನೀರಿಗೆ  ಹಾಕಿ  ಬಿಟ್ಟುಬಿಡಿ ಬೆಳಗ್ಗೆ  ಎದ್ದ  ತಕ್ಷಣ ಖಾಲಿಹೊಟ್ಟೆಯಲ್ಲಿ  ಬೆಂಡೆಕಾಯಿಯನ್ನು ತೆಗೆದುಹಾಕಿ  ಆ  ನೀರನ್ನು ಮಾತ್ರ  ಸೇವಿಸಿ.

6. ಲೋಳೆಸರ ಕೂಡ ಮಧುಮೇಹಿಗಳಿಗೆ ಒಳ್ಳೆಯದು.ಇದನ್ನು ಪ್ರತಿನಿತ್ಯ ಜ್ಯೂಸ್ನ  ಜೊತೆ ಬೆರೆಸಿ  ಕುಡಿಯಿರಿ.

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top