ಎಲ್ಲರಿಗೂ ಗೊತ್ತಿರೋ ಹಾಗೆ ಇಂದು ಸ್ನೇಹಿತರ ದಿನಾಚರಣೆ.. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಪ್ರೀತಿಯ ಗೆಳೆಯ-ಗೆಳತಿಯರಿಗೆ ಸಾಮಾಜಿಕ ಜಲತಾಣಗಳ ಮೂಲಕ ಭಿನ್ನ ವಿಭಿನ್ನವಾಗಿ ಈ ವಿಶೇಷ ದಿನದ ಶುಭಕಾಮನೆಗಳನ್ನು ತಿಳಿಸುತ್ತಿದ್ದಾರೆ. ಅಂತೆಯೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಧರ್ಮಪತ್ನಿ ಪ್ರಿಯಾಸುದೀಪ್ ಕೂಡ ತಮ್ಮ ಕಿಚ್ಚನಿಗೆ ವಿಶೇಷವಾಗಿ ವಿಷಸ್ ತಿಳಿಸಿದ್ದಾರೆ.
ಸುದೀಪ್ ಮತ್ತು ಪ್ರಿಯಾ ಅವರು ತಮ್ಮಿಬ್ಬರ 25ನೇ ವರ್ಷದ ಸ್ನೇಹದ ಸಂಭ್ರಮದಲ್ಲಿದ್ದು, ಟ್ವಿಟರ್ ನಲ್ಲಿ ಟ್ವೀಟ್ ಮಾಡೋ ಮುಖೇನ ಕಿಚ್ಚನಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಅವರೇ ಹೇಳೋ ಪ್ರಕಾರ ಅಖಂಡ ಇಪ್ಪತೈದು ವರ್ಷಗಳ ಹಿಂದೆ ಪರಿಚಯವಾಗಿದ್ದ ಇವರು ನಂತರ ಸ್ನೇಹಿತರಾಗಿ, ಬಳಿಕ ಪ್ರೇಮಿಗಳಾಗಿ ಬಡ್ತಿ ಪಡೆದು ಅಂತಿಮವಾಗಿ ಜೊತೆಯಲ್ಲಿ ಸಮಾಸರೀಕ ಜೀವನಕ್ಕೆ ಕಾಲಿಡುವ ಮೂಲಕ ದಂಪತಿಗಳಾಗಿದ್ದಾರೆ. ಇಪ್ಪತ್ತೈದು ವರ್ಷಗಳ ಹಿಂದೆ ಎಷ್ಟು ಅನ್ಯೋನ್ಯವಾಗಿದ್ದರೋ ಈಗಲೂ ಹಾಗೆಯೇ ಇಬ್ಬರು ಇದ್ದಾರಂತೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾ ಸುದೀಪ್ “ಗೆಳೆಯ ಸುದೀಪ್ ಮತ್ತು ನನ್ನ ಗೆಳೆತನ ಇಂದಿಗೆ 25 ವರ್ಷವನ್ನು ಪೂರೈಸಿದೆ. ನಾವಿಬ್ಬರು ಮದುವೆಯಾಗಿದ್ದರು ಸಹ ನಮ್ಮ ಗೆಳೆತನ ಹಾಗೆಯೇ ಕಾಪಾಡಿಕೊಂಡು ಬಂದಿದ್ದೇವೆ. ಮದುವೆ ನಮ್ಮಿಬ್ಬರ ಸ್ನೇಹವನ್ನು ಹಾಳು ಮಾಡಿಲ್ಲ. ಇದು ನನಗೆ ತುಂಬಾ ಸಂತೊಷ ತಂದಿದೆ” ಎಂದು ಬರೆದುಕೊಂಡಿದ್ದಾರೆ. ಸುದೀಪ್ ಮತ್ತು ಪ್ರಿಯ ಹೀಗೆ ತೀವ್ರವಾಗಿ ಪ್ರೀತಿಸುತ್ತಾ ನೂರ್ಕಾಲ ಬಳಲಿ ಎಂಬುದೇ ಅವರ ಅಭಿಮಾನಿಗಳ ಬಯಕೆ.
To my buddy @KicchaSudeep !This year marks 25 years of our friendship and I’m glad even marriage didn’t ruin that 💖😄😝 pic.twitter.com/T7RcxwLyLf
— Priya Radhakrishnan (@iampriya06) August 5, 2018
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
