ಮನೋರಂಜನೆ

ಯಜಮಾನ ರಿಲೀಸ್ ಆಗೋದು ಯಾವಾಗ ಅಂತ ಹೇಳಿ ಫ್ಯಾನ್ಸ್’ಗೆ ಗುಡ್ ನ್ಯೂಸ್ ಕೊಟ್ಟ ರಶ್ಮಿಕಾ

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ `ಯಜಮಾನ ಮಾತಿನ ಭಾಗದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಕೊಂಡಿದೆ. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರ ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ಮೂಲಕ ತಾಕಿ ಪೋರ್ಷನ್’ಗೆ ತೆರೆ ಎಳೆದಿದೆ. ಉಳಿದಂತೆ ಬಾಕಿ ಇರುವ ಹಾಡುಗಳ ಚಿತ್ರೀಕರಣ ಆದಷ್ಟು ಬೇಗ ನಡೆಯಲಿದೆ. ಹೀಗಿರುವಾಗಲೇ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬ ವಿಚಾರವನ್ನು ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಬಾಯ್ಬಿಟ್ಟಿದ್ದಾರೆ.

 

 

ಹೌದು ರಶ್ಮಿಕಾ ಅಪರೂಪಕ್ಕೆ ನೆನ್ನೆ ಫೇಸ್ಬುಕ್ ಲೈವ್ ಬಂದಿದ್ದಳು. ಈ ವೇಳೆ ಕಿಕ್ಕಿರಿದು ಲೈವ್ ನೋಡುತ್ತಿದ್ದ ಅವರ ಅಭಿಮಾನಿಗಳು ಸರಣಿಯೋಪಾದಿಯಾಗಿ ನಾನಾ ರೀತಿಯಾ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಅಭಿಮಾನಿಗಳು ಯಜಮಾನ ಚಿತ್ರದ ಬಗ್ಗೆ ವಿಚಾರಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರಿಸಿದ ರಶ್ಮಿಕಾ “ಯಜಮಾನ ಸಿನಿಮಾ ಮುಕ್ತಾಯವಾಗಿದೆ, ಹಾಡಿನ ಚಿತ್ರೀಕರಣ ಮುಗಿದ್ದು ಇದೇ ವರ್ಷವೇ ಆದಷ್ಟು ಬೇಗ ಬಿಡುಗಡೆಯಾಗುತ್ತದೆ” ಎಂದು ಉತ್ತರಿಸಿದರು. ರಶ್ಮಿಕಾ ಮಾತುಗಳನ್ನು ಕೇಳಿದ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿದ್ದಾರೆ.

ಅಂದಹಾಗೆ ಸೆಪ್ಟೆಂಬರ್‌ನಲ್ಲಿ ದರ್ಶನ್ ತಮ್ಮ ಭಾಗದ ಡಬ್ಬಿಂಗ್ ಮುಗಿಸಲಿದ್ದಾರಂತೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರದ ಹಾಡುಗಳನ್ನು ಹೊರತರುವ ಯೋಜನಯಲ್ಲಿದೆ ಯಜಮಾನ ಚಿತ್ರತಂಡ. ಕಳೆದ ಫೆಬ್ರವರಿ 18ರಂದು ಶೂಟಿಂಗ್ ಆರಂಭಿಸಿದ್ದ ಚಿತ್ರತಂಡ ಅಚ್ಚುಕಟ್ಟಾಗಿ, ಬಿಡುವಿಲ್ಲದೆ ಚಿತ್ರೀಕರಣ ಮಾಡುವ ನೆನ್ನೆಗೆ ಮಾತಿನ ಭಾಗದ ಶೂಟಿಂಗ್ ಪೂರ್ಣಗೊಳಿಸಿದೆ.

ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್’ಗೆ ನಾಯಕಿಯರಾಗಿ, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿದ್ದು ಧನಂಜಯ್ ಮತ್ತು ಸಿಂಗಂ ಖ್ಯಾತಿಯ ಥಾಕುರ್ ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಯಜಮಾನ ಆಗುತ್ತಾ ದಚ್ಚು 50ನೇ ಸಿನಿಮಾ?
ಅಂದುಕೊಂಡಂತೆ ಆಗಿದ್ದರೆ ಕುರುಕ್ಷೇತ್ರ ಇಷ್ಟೊತ್ತಿಗೆಲ್ಲಾ ತೆರೆ ಕಾಣಬೇಕಿತ್ತು ಅನೇಕ ಕಾರಣಗಳಿಂದ ಬಹುತಾರಾಗಣದ ‘ಕುರುಕ್ಷೇತ್ರ’ ಸಿನಿಮಾ ತಡವಾಗುತ್ತಿದೆ. ಇದನ್ನು ಮನಗಂಡಿರುವ ದರ್ಶನ್ ಅವರು ಕುರುಕ್ಷೇತ್ರಕ್ಕಿಂತ ಮೊದಲೇ ಯಜಮಾನ ಚಿತ್ರವನ್ನು ರಿಲೀಸ್ ಮಾಡಲು ರೆಡಿ ಮಾಡಿಕೊಳ್ಳಿ ಎಂದು ನಿರ್ಮಾಪಕರಿಗೆ ಹೇಳಿದ್ದರಂತೆ.. “ಮುನಿರತ್ನ ಕುರುಕ್ಷೇತ್ರದ ಬಿಡುಗಡೆ ಬಗ್ಗೆ ನನಗೆ ನಿಖರವಾದ ಮಾಹಿತಿಯಿಲ್ಲ, ಆ ಚಿತ್ರ ಯಾವಾಗ ರಿಲೀಸ್ ಆಗಬಹುದು ಎಂದು ನಾನು ಹೇಳೋಕೆ ಬರೋದಿಲ್ಲ, ಈ ಹಿನ್ನಲೆಯಲ್ಲಿ ‘ಯಜಮಾನ’ ಚಿತ್ರದ ನಿರ್ಮಾಪಕರಿಗೆ ರಿಲೀಸ್’ಗೆ ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದೇನೆ” ಎಂದು ದರ್ಶನ್ ಖಾಸಗಿ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top