ಸಮಾಚಾರ

ತನ್ನ ಜೊತೆ ನಟಿಸಿದ ಈ ಖ್ಯಾತ ನಟಿಯನ್ನು “ನೋಡಿ ಇದ್ಯಾವ ನಟಿ “ಎಂದು ಹೇಳಿ ಟ್ರೋಲ್ ಗೆ ಗುರಿಯಾದ ನಟ,ಯಾರ್ ಆ ನಟಿ ಗೊತ್ತಾ

ಮರೆಗುಳಿ ಸರ್ವೇ ಸಾಮಾನ್ಯವಾಗಿದ್ದು. ಅರವತ್ತು ವರ್ಷಕ್ಕೆ ಅರಳು ಮರಳು ಅನ್ನುವುದು ಸಹಜ. 60 ದಾಟುತ್ತಿದ್ದಂತೆ ತಾವೇನು ಮಾಡಬೇಕು? ಎಲ್ಲಿ ಹೋಗಬೇಕು? ಏನನ್ನ ಎಲ್ಲಿ ಇಟ್ಟಿದ್ದೇವೆ? ಹೀಗೆ ದಿನನಿತ್ಯದ ಕೆಲಸಗಳಲ್ಲಿ ಮರೆಗುಳಿಗಳಾಗಿ ಬದುಕುವುದು ಸರ್ವೇ ಸಾಮಾನ್ಯವಾಗಿದೆ. ಕೆಲವೊಬ್ಬರಿಗೆ ತಮ್ಮ ಜೀವನಕ್ಕೆ ತಿರುವು ಕೊಟ್ಟವರೇ ಅರವತ್ತಾದರೆ ಮರೆತು ಹೋಗುತ್ತಾರೆ ಎನ್ನುವುದು ಸ್ವಲ್ಪ ಕೇಳೊಕು ನೋಡೋಕು ಕಷ್ಟ ಎನಿಸುತ್ತದೆ. ಅದರಲ್ಲೂ ತಮ್ಮ ಜತೆ ನಾಯಕಿಯಾಗಿ ಅಭಿನಯ ಮಾಡಿದವರನ್ನೇ ಮರೆತೋಗುತ್ತಾರೆ ಎಂದರೆ ಅದೆಲ್ಲೂ ಅತಿಶಯೋಕ್ತಿ ಎನಿಸುತ್ತದೆ.

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್‌ ಈಗ ತನ್ನ ‘ಕೌನ್ ಸಾಚಾ ಕೌನ್ ಜೂಟಾ’ ಸಿನಿಮಾ ಹಾಡಿನ ವೀಡಿಯೋ ತುಣುಕುವೊಂದರಲ್ಲಿ ಅವರ ಜತೆ ಡಾನ್ಸ್ ಮಾಡಿದ ಶ್ರೀದೇವಿಯನ್ನು ಗುರುತಿಸದೆ ‘ಇದು ಯಾರು’ ಎಂದು ಕೇಳುವ ಮೂಲಕ ಸಿಕ್ಕಾಪಟ್ಟೆ ಟ್ರೊಲ್ ಗೆ ಒಳಗಾಗಿದ್ದಾರೆ.

 

 

 

 

ಕೆಲವು ದಿನಗಳ ಹಿಂದೆ ಅಭಿಮಾನಿ ಒಬ್ಬರು ಶ್ರೀದೇವಿ ಮತ್ತು ರಿಷಿ ಕಪೂರ್‌ನ ಸಿನಿಮಾ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ರಿಷಿ ಕಪೂರ್ ಗೆ ಟ್ಯಾಗ್ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸಿದ ರಿಷಿ ಕಪೂರ್‌ ಯಾವ ಸಿನಿಮಾ ಇದು, ನನ್ನ ಜತೆ ಇರುವ ನಟಿಯ ಗುರುತು ಸಿಕ್ಕಿಲ್ಲ’ ಎಂದು ಪ್ರತಿಕ್ರಿಯಿಸಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.

ಬಾಲಿವುಡ್ ನಲ್ಲಿ ರಿಷಿ ಕಪೂರ್‌ಗೆ ನೆಲೆ ಸಿಗಲು ಕಾರಣ ಶ್ರೀದೇವಿಯವರೇ. ‘ನಾಗಿನ’, ‘ಚಾಂದಿನಿ’ ಸಿನಿಮಾಗಳು ಸೂಪರ್ ಹಿಟ್ ಆಗಲಿಕ್ಕೆ ಶ್ರೀದೇವಿಯವರೇ ಕಾರಣ. ನಾಲ್ಕೈದು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದ ಶ್ರೀದೇವಿಯವರನ್ನೇ ರಿಷಿ ಕಪೂರ್ ಗುರುತಿಸದಿರುವುದನ್ನು ನೋಡಿ ಶ್ರೀದೇವಿ ಅಭಿಮಾನಿಗಳಿಗೆ ಸಹಜವಾಗಿಯೇ ಕೋಪ ತರಿಸಿದೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top