fbpx
ಮನೋರಂಜನೆ

ಯುವಕರಿಂದ ತೀವ್ರ ಹಲ್ಲೆಗೊಂಡು ಆಸ್ಪತ್ರೆಗೆ ದಾಖಲಾದ ಖ್ಯಾತ ಕಿರುತೆರೆಯ ನಟಿ.

ಸಾರ್ವಜನಿಕ ಪ್ರದೇಶಗಳಲ್ಲಿಯೂ ಹೆಂಗಳೆಯರ ಮೇಲಿನ ದೈಹಿಕ ಹಲ್ಲೆ ಮಾಡಿ ವಿಕೃತಾನಂದ ಪಡೋ ಅಪಾಪೋಲಿಗಳ ಸಂಖ್ಯೆ dine ಹೆಚ್ಚುತ್ತಲೇ ಇದೆ. ಆದರೆ ಇಂಥಾದ್ದರ ವಿರುದ್ಧ ಸ್ಥಳದಲ್ಲಿಯೇ ರೆಬೆಲ್ ಆಗಿ ಪೊರ್ಕಿಗಳಿಗೆ ಬುದ್ಧಿ ಕಲಿಸುವ ಹೆಣ್ಮಕ್ಕಳ ಸಂಖ್ಯೆ ಕಡಿಮೆ ಇದೆ.. ಸಾಮಾನ್ಯ ಹುಡುಗಿಯರಾದಿಯಾಗಿ ಸಿನಿಮಾ ಮತ್ತು ಧಾರಾವಾಹಿಗಳ ನಟಿಯರೂ ಇಂತಾ ದೌರ್ಜನ್ಯಕ್ಕೆ ಒಳಗಾಗುತ್ತಿರುತ್ತಾರೆ.,ಇದೀಗ ಇಂತದ್ದೇ ಘಟನೆ ಮತ್ತೊಂದು ಬೆಳಕಿಗೆ ಬಂದಿದೆ. ‘ಕಹಾನಿ ಘರ್ ಘರ್ ಕಿ’, ‘ಸಾರಾಭಾಯಿ ವರ್ಸಸ್ ಸಾರಾಭಾಯಿ 2’ ಮತ್ತು ಬಿಗ್ ಬಾಸ್ ಷೋ ಮೂಲಕವೇ ಅಗಾಧ ಖ್ಯಾತಿ ಗಳಿಸಿದ್ದ ಹಿಂದಿ ಕಿರುತೆರೆ ನಟಿ ರೂಪಾಲಿ ಗಂಗೂಲಿ ದುಷ್ಕರ್ಮಿಗಳಿಂದ ಹಲ್ಲೆಗೊಳಲಾಗಿ ಆಸ್ಪತ್ರೆಗೆ ಸೇರಿದ್ದಾರೆ.

 

 

ಮುಂಬೈ ನಗರದ ವರ್ಸಾವಾ ಪ್ರದೇಶದಲ್ಲಿ ಕಾರಿನಲ್ಲಿ ಸಂಚರಿಸುವ ವೇಳೆ ಬೈಕ್ ನಲ್ಲಿ ಹಿಂದಿನಿಂದ ಫಾಲೋ ಮಾಡಿಕೊಂಡು ಬರುತ್ತಿದ್ದ ಇಬ್ಬರು ಯುವಕರು ನಟಿಯ ಕಾರಿನ ಮುಂದೆ ಬಂದು ಅಸಭ್ಯವಾಗಿ ಕೈ ಕೋರಿಸುತ್ತಾ ವರ್ತಿಸಿದ್ದಾರೆ. ಇದನ್ನು ಪ್ರಶ್ನಿಸಿದ ಪ್ರಶ್ನಿಸಿದ ರುಪಾಲಿಯ ವಿರುದ್ಧ ಬೈಗುಳದ ಸುರಿಮಳೆಗೈದಿದ್ದಾರೆ., ನಂತರ ಮಾತಿಗೆ ಮಾತು ಬೆಳೆದು ಅಂತಿಮವಾಗಿ ರೊಚ್ಚಿಗೆದ್ದ ಯುವಕರು ರುಫಾಲಿಯ ಕಾರಿನ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ನಡೆದ ದಾಳಿಯಿಂದ ನಟಿ ಗಂಭೀರವಾಗಿ ಗಾಯಗೊಂಡಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಘಟನೆಯ ಸ್ಥಳಕ್ಕಾಗಮಿಸಿ ಹಲ್ಲೆಯ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಶೀಘ್ರವಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಹನು ಮತ್ತು ಪರೇಶ್ ಎಂಬ ಪೋಲಿ ಯುವಕರು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top