fbpx
ಸಮಾಚಾರ

‘ಪದ್ಮಾವತ್’ ಆಫರ್ ರಿಜೆಕ್ಟ್ ಮಾಡಿ ಕೈ ಕೈ ಹಿಸುಕಿಕೊಂಡ ಟಾಪ್ ನಟಿ ಇವಳೇ ನೋಡಿ

ತೀವ್ರ ಪ್ರತಿಭಟನೆ, ವಿವಾದಕ್ಕೆ ಕಾರಣವಾಗಿದ್ದ ‘ಪದ್ಮಾವತ್’ ಸಿನಿಮಾ ತೆರೆಗೆ ಬಂದು ಸೂಪರ್ ಹಿಟ್ ಆಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ‘ಪದ್ಮಾವತ್’ ಚಿತ್ರ ”ಸಂಜಯ್ ಲೀಲಾ ಬನ್ಸಾಲಿ ಅವರ ಮಾಸ್ಟರ್ ಪೀಸ್” ಎಂದು ಹಲವರು ಹಾಡಿ ಹೊಗಳಿದ್ದರು. ರಣವೀರ್, ದೀಪಿಕಾ, ಶಾಹಿದ್ ಕಪೂರ್ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದರು.

ಈ ಕಾಲದಲ್ಲಿ ಯುವ ಜನಾಂಗ ತಿಳಿದುಕೊಳ್ಳಬೇಕಾಗಿರುವ ಮಹತ್ವದವಾಗಿರುವ ಇತಿಹಾಸ ಪದ್ಮಾವತಿ. ರಜಪೂತರ ವೀರತ್ವವನ್ನು, ಹಿರಿಮೆಯನ್ನು ಸಾರುತ್ತಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತೆರೆಗೆ ತಂದ ಈ ಸಿನಿಮಾವನ್ನು ಅಭಿನಂದಿಸದೆ ಇರಲು ಸಾಧ್ಯವಿಲ್ಲ. ಈ ಚಿತ್ರದ ಬಗ್ಗೆ ಒಂದು ಕುತೂಹಲಕಾರಿ ವಿಷ್ಯ ಈಗ ಬಯಲಾಗಿದೆ. ಮುಂದೆ ಓದಿ

 

 

 

ಎಲ್ಲವೂ ಅಂದುಕೊಂಡ ರೀತಿಯಲ್ಲೇ ಆಗಿದ್ದರೆ ರಾಣಿ ಪದ್ಮಾವತಿ ಪಾತ್ರವನ್ನು ದೀಪಿಕಾ ಪಡುಕೋಣೆಯವರ ಜಾಗದಲ್ಲಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಬಚ್ಚನ್ ಅಭಿನಯ ಮಾಡಬೇಕಿತ್ತು. ಪದ್ಮಾವತಿ ಪಾತ್ರದ ಅಭಿನಯಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಮೊದಲು ಆಫರ್ ಕೊಟ್ಟಿದ್ದು ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ. ಆದರೆ ಖಿಲ್ಜಿಯಾಗಿ ತನ್ನ ಎದುರು ಸಮರ್ಥವಾಗಿ ನಟಿಸುವವರಿಲ್ಲ ಎನ್ನುವ ಕಾರಣಕ್ಕೆ ಐಶ್ವರ್ಯ ರೈ ಈ ಚಿತ್ರವನ್ನು ಒಪ್ಪಿಕೊಳ್ಳಲಿಲ್ಲವಂತೆ. ಆದ್ರೆ ಪದ್ಮಾವತ್ ಸಿನಿಮಾ ನೋಡಿದ ನಂತರ ಐಶ್ವರ್ಯ ಯಾಕಾದರೂ ಈ ಪಾತ್ರ ಕೈ ಬಿಟ್ಟೆ ಎನ್ನುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಐಶ್ವರ್ಯ ಕೈಬಿಟ್ಟಿದ್ದ ಆಫರ್ ದೀಪಿಕಾ ಪಡುಕೋಣೆ ಪಾಲಾಯಿತು. ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ದೀಪಿಕಾ ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top