fbpx
ಮನೋರಂಜನೆ

ವಂಚನೆ ಪ್ರಕರಣ- ದರ್ಶನ್ ಸಿನಿಮಾ ನಿರ್ಮಾಪಕನ ವಿರುದ್ಧ ಸಿಐಡಿ ತನಿಖೆ ಆರಂಭ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವನ್ನು ನಿರ್ಮಿಸಿ ರಾಜ್ಯಪ್ರಶಸ್ತಿಯನ್ನು ಮುಡಿಗೇರಿಕೊಂಡಿದ್ದ ಆನಂದ್ ಅಪ್ಪುಗೋಳ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು ಅವರ ವಿರುದ್ಧ ಈಗ ಸಿಐಡಿ ತನಿಖೆ ಆರಂಭಗೊಂಡಿದೆ. ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಆರಂಭಿಸಿದ್ದು, ಈಗಾಗಲೇ ತನಿಖೆಗೆ ಬೇಕಾಗ ದಾಖಲೆಗಳನ್ನು ಪಡೆದಿಕೊಂಡಿದ್ದು, ಮುಂದಿನ ವಾರ ಬೆಳಗಾವಿಗೆ ಆಗಮಿಸಿ ವಿಚಾರಣೆ ಆರಂಭಿಸಿಲಿದ್ದಾರೆ.

 

 

ಕಳೆದ ಕೆಲವು ತಿಂಗಳ ಹಿಂದೆ ಆನಂದ್ ಅಪ್ಪುಗೋಳ್ ಒಡೆತನದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆ ದಿವಾಳಿಯಾಗಿತ್ತು. ಈ ವಿಷಯ ತಿಳಿದ ಸಾವಿರಾರು ಗ್ರಾಹಕರು ಸಂಸ್ಥೆಯಲ್ಲಿ ತಾವು ಹೂಡಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದ್ದರು.. ಕೊನೆಗೆ ಹಣ ವಾಪಸ್ ಸಿಗದಿದ್ದಕ್ಕಾಗ ಆನಂದ್ ಅಪ್ಪುಗೊಳ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಬಹುತೇಕವಾಗಿ ದಿವಾಳಿಯಾಗಿದ್ದ ಆನಂದ್ ಅಪ್ಪುಗೋಳ್ ದೂರು ದಾಖಲಾದಾಗಿನಿಂದ ಬೆಳಗಾವಿಯಿಂದ ಹೋಡಿಹೋಗಿ ತಲೆಮಾರಿಸಿಕೊಂಡಿದ್ದರು. ನಂತರ ಪೋಲೀಸರ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿತ್ತು.

ಸಂಗೊಳ್ಳಿ ರಾಯಣ್ಣ ಕೋ ಆಪರೇಟಿವ್ ಸೊಸೈಟಿ ಗ್ರಾಹಕರಿಗೆ 300 ಕೋಟಿಗೂ ಹೆಚ್ಚು ಹಣ ವಂಚಿಸಿರೋ ಆರೋಪದಡಿ ಆನಂದ್ ಅಪ್ಪುಗೋಳ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಜಮೀನಿನ ಮೇಲೆ ಇತ್ತೀಚಿಗೆ ಹೊರಬಂದಿದ್ದಾರೆ. ಕೇವಲ ಆನಂದ ಅಪ್ಪುಗೋಳ ಒಡೆತನದ ಸೊಸೈಟಿ ಮಾತ್ರವಲ್ಲದೆ ಅವರ ಪತ್ನಿ ಆರಂಭಿಸಿದ್ದ ಭೀಮಾಂಬಿಕಾ ಮಹಿಳಾ ಸೊಸೈಟಿ ಹಾಗೂ ಗಜರಾಜ ಎಂಬ ಸಹಕಾರಿ ಸೊಸೈಟಿಗಳೂ ಕೂಡ ದಿವಾಳಿಯಾಗಿ ವ್ಯವಹಾರ ಸ್ಥಗಿತಗೊಳಿಸಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top