fbpx
ಸಮಾಚಾರ

ಈ ದೇಶದಲ್ಲಿ ಕಾಗೆಗಳಿಗೆ ಕಂಡಲ್ಲಿ ಗುಂಡು ಆದೇಶವಿದೆಯಂತೆ, ಯಾಕಂತ ನೀವೇ ನೋಡಿ

ಕೆಲವು ಜನರು ಕಾಗೆಯನ್ನು ನೀವು ಅಪಶಕುನ, ಅನಿಷ್ಟ, ಅಂತೆಲ್ಲಾ ಬೈಕೊಂಡು ಕುಳಿತುಕೊಳ್ಳುತ್ತಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ರಿಪಬ್ಲಿಕ್‌ ಆಫ್ ಸಿಂಗಾಪುರ್‌ ಕಾಗೆಗಳ ಪ್ರವೇಶಕ್ಕೆ ನಿಷೇದ ಹೇರಿದೆಯಂತೆ. ಅಕ್ರಮ ಪ್ರವೇಶಕ್ಕೂ ನಿಷೇದ ಇದೆ ಹಾಗು, ಹೀಗೂ ಏನೋ ಮಾಡಿ ಕಾಗೆ ಕಷ್ಟಪಟ್ಟು ನುಸುಳಿತೋ, ಮುಗೀತು ಕಥೆ. ಕಾಗೆಗಳ ಪಾಲಿಗೆ ಇಲ್ಲಿ ಕಂಡಲ್ಲಿ ಗುಂಡು ಒಂದೇ ಮಂತ್ರ. ಕಾಗೆಗಳು ಎಷ್ಟೇ ಹಾರಾಡಲಿ, ಸಿಂಗಾಪುರದಲ್ಲಿ ಮಾತ್ರ ಅವುಗಳಿಗೆ ಅವಕಾಶವಿಲ್ಲ ಎಂದು ತಿಳಿದು ಬಂದಿದೆ.

ಸಿಂಗಪೂರ್ ಜನರ ಪ್ರಕಾರ, ಕಾಗೆಗಳ ಒರಟು ಸ್ವರ ಹೊಂದಿದ್ದು, ಅಶಿಸ್ತು, ಗಲೀಜು ಮಾಡುವ ಬುದ್ಧಿ ಹೊಂದಿವೆಯಂತೆ. ಅದಲ್ಲದೆ, ಇಲ್ಲಿನ ಕಾಗೆಗಳು ಮನುಷ್ಯರ ಮೇಲೂ ದಾಳಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೆ ಕಾರಣಕ್ಕೆ ಕಾಗೆಗಳ ನಿರ್ನಾಮಕ್ಕೆ ತಂಡಗಳೇ ರಚನೆಯಾಗಿವೆ ಎಂದು ತಿಳಿದು ಬಂದಿದೆ.

 

 

ಕಾಗೆಗಳ ನಿರ್ಮಾಣಮಕ್ಕಾಗಿಯೇ ವಿಶೇಷ ತಂಡ ರಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ತಂಡದವರು ಸಮವಸ್ತ್ರ ಧರಿಸಿ ಕಾಲಲ್ಲಿ ಬೂಟ್‌, ಹೆಗಲಲ್ಲಿ ಗನ್‌ ಏರಿಸಿಕೊಂಡು ಸಿದ್ಧರಾಗುತ್ತಾರೆ. ಇನ್ನು ಒಂಸ್ಡ್ ವಿಚಿತ್ರವೆಂದರೆ ಕ್ರೋ ಶೂಟಿಂಗ್‌ ಇನ್‌ ಪ್ರೋಗ್ರೆಸ್‌ ಪ್ಲೀಸ್‌ ಕೀಪ್‌ ಅವೇ(ಕಾಗೆಗಳ ಶೂಟ್ ಮಾಡುವುದು ಪ್ರಗತಿಯಲ್ಲಿದೆ ಈ ಸ್ಥಳದಿಂದ ದೂರವಿರಿ) ಎನ್ನುವ ನಾಮಫಲಕಗಳು ಕೆಲವೊಮ್ಮೆ ಕಾಣಸಿಗುತ್ತವೆ. ವಿಶೇಷ ಎಂದರೆ, ಈ ಕಾಗೆಗಳಿಗೆ ಗುಂಡಿನ ಶಬ್ದಗಳು ಚಿರಪರಿಚಿತ. ಹಾಗಾಗಿ, ತಮ್ಮಿಂದ ಸಾಧ್ಯವಾಗುವ ರೀತಿಯಲ್ಲಿ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮುಂದೆ ವರೆಸುತ್ತವೆ ಎನ್ನಲಾಗಿದೆ.

ಪಾಪ ತಮ್ಮ ಪಾಡಿಗೆ ತಾವು ಇರುವ ಕಾಗೆಗಳನ್ನು ಕೊಲ್ಲುತ್ತಿರುವ ಇವರ ಕ್ರಮಕ್ಕೆ ಕೆಲವೆಡೆ ವಿರೋಧ ಕೂಡ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top