ಸಮಾಚಾರ

ನಿಮಗೆ ಮೈಮೇಲೆ ಈ 8 ಸ್ಥಳಗಳಲ್ಲಿ ಮಚ್ಚೆ ಇದ್ದೀಯ ನೋಡ್ಕೊಳ್ಳಿ ,ಇದ್ರೆ ನಿಮಗೆ ಸ್ವಲ್ಪ ಹಣದ ಸಮಸ್ಯೆ ಕಾಡುತ್ತದೆಯಂತೆ

ಕೆಲವು ಮಚ್ಚೆಗಳ ಆಧಾರದಲ್ಲಿ ನಿಮಗೆ ಸ್ವಲ್ಪ ಹಣದ ಸಮಸ್ಯೆ ಕಾಡುತ್ತದೆ ಎಂಬುದನ್ನು ತಿಳಿಯಬಹುದು. ಹುಟ್ಟಿದ ಮನುಷ್ಯನಿಗೆ ಅವರ ದೇಹದಲ್ಲಿ ಇರುವ ಮಚ್ಚೆಗಳು ಅನನ್ಯವಾದ ಗುರುತಿನ ಸಂಕೇತವಾಗಿ ಕಾರ್ಯನಿರ್ವಹಿಸುತ್ತವೆ. ದೇಹದ ಯಾವ ಯಾವ ಭಾಗಗಳಲ್ಲಿ ಮಚ್ಚೆಗಳಿರುವುದರಿಂದ ಯಾವ ಯಾವ ಅರ್ಥ ನೀಡುತ್ತದೆ ಎಂದು ತಿಳಿದುಕೊಳ್ಳೊಣ ಬನ್ನಿ

 

 

 

ಎಡ ಪಾದದ ಮೇಲೆ ಇರುವ ಮಚ್ಚೆ

ಎಡ ಪಾದದ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಬಾಲ್ಯಾವಸ್ಥೆ ಮುಗಿಸಿ ಪ್ರೌಢಾವಸ್ಥೆಗೆ ಬಂದಾಗ ಹಣಕಾಸಿನ ವಿಚಾರವಾಗಿ ಬಿಕ್ಕಟ್ಟು ಎದುರಿಸುವ ಸಾಧ್ಯತೆ ಇರುತ್ತದೆ. ಖರ್ಚಿನ ಹೊಣೆಗಾರಿಗೆ ನಿರ್ವಹಿಸುವಲ್ಲಿ ಕೆಲವು ಸಮಸ್ಯೆ ಎದುರಿಸಬಹುದು.

 

ಎಡ ಕಾಲಿನ ಮೇಲೆ ಇರುವ ಮಚ್ಚೆ

ಎಡ ಕಾಲಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಕೆಲವು ಬಾರಿ ಉಳಿತಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಸಾಧ್ಯತೆ ಇರುತ್ತದೆ. ಎಷ್ಟೇ ಉಳಿತಾಯ ಮಾಡಲು ಪ್ರಯತ್ನ ಪಟ್ಟರು ಕೆಲವು ಬಾರಿ ಉಳಿತಾಯ ಸಾಧ್ಯ ಆಗುವುದಿಲ್ಲ.

 

ಎಡ ಕೆನ್ನೆಯ ಮೇಲಿನ ಮಚ್ಚೆ

ಎಡ ಕೆನ್ನೆಯ ಮೇಲಿನ ಮಚ್ಚೆ ಹೊಂದಿರುವ ವ್ಯಕ್ತಿಗಳು ಹೆಚ್ಚಿನ ಆದಾಯ ಹೊಂದದೆ ಇರಬಹುದು, ಅವರಿಗೆ ಹಣ ಉಳಿಸಲು ಕಷ್ಟ ಎದುರಾಗಬಹುದು.

 

 

ತೋರು ಬೆರಳಿನ ಮೇಲೆ ಇರುವ ಮಚ್ಚೆ
ತೋರು ಬೆರಳಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಹಣದ ವಿಚಾರವಾಗಿ ಕೆಲವು ಬಾರಿ ನಿರಾಶೆ ಅನುಭವಿಸುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಕೈಗೆ ಬಂದ ತುತ್ತು ಬಾಯಿಗೆ ಬರೋದಿಲ್ಲ. ಆಂತರಿಕ ಹಣಕಾಸು ಸಮಸ್ಯೆ ಕೂಡ ಎದುರಾಗುತ್ತೆ.

 

 

 

 

 

ತುಟಿಯ ಕೆಳಗೆ ಇರುವ ಮಚ್ಚೆ

ತುಟಿಯ ಕೆಳಗೆ ಮಚ್ಚೆ ಇವರು ವ್ಯಕ್ತಿಗಳು ಆರ್ಥಿಕ ಮುಗ್ಗಟ್ಟು ಎದುರಿಸುವ ಸಾಧ್ಯತೆ ಇರುತ್ತದೆ.

 

ಎಡತೋಳಿನ ಮೇಲೆ ಇರುವ ಮಚ್ಚೆ
ಎಡತೋಳಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳಿಗೆ ಅನಾರೋಗ್ಯದ ಚಿಕಿತ್ಸೆಗಾಗಿ ಹೆಚ್ಚು ಹಣ ವ್ಯಯಿಸಬೇಕಾದ ಅನುವಾರ್ಯತೆ ಎದುರಾಗುತ್ತೆ. ಈ ನಿಟ್ಟಿನಲ್ಲಿ ಅರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.

 

 

 

ಅಂಗೈಯಲ್ಲಿರುವ ಗುರು ಪರ್ವದ ಮೇಲಿರುವ ಮಚ್ಚೆ

ಅಂಗೈಯಲ್ಲಿರುವ ಗುರು ಪರ್ವದ ಮಚ್ಚೆ ಇರುವ ವ್ಯಕ್ತಿಗಳಿಗೆ ಸಂಕಷ್ಟದ ಪರಿಸ್ಥಿತಿ ಎದುರಾದಾಗ ಹಣದ ಸಮಸ್ಯೆ ಕಾಡುತ್ತೆ. ಶ್ರೀಮಂತ ಇದ್ದರು ಹಣದ ಅಭಾವ ಎದುರಾಗುತ್ತೆ.

 

 

 

 

ಎಡ ಹುಬ್ಬಿನ ಮೇಲಿರುವ ಮಚ್ಚೆ

ಎಡ ಹುಬ್ಬಿನ ಮೇಲೆ ಮಚ್ಚೆ ಇರುವ ವ್ಯಕ್ತಿಗಳು ಅನಗತ್ಯವಾಗಿರುವ ಕೆಲವು ಸುಖವನ್ನು ಪಡೆಯಲು ಹಾತೊರೆದು ಅದರಿಂದ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top