ಸಮಾಚಾರ

ನಿಮ್ಮ ದೇಹದ ಕೊಬ್ಬನ್ನು ಇಳಿಸಿಕೊಳ್ಳಲು ಇಲ್ಲಿದೆ ನೋಡಿ ಹಸಿರು ಜ್ಯೂಸ್‌ಗಳು,ನೋಡ್ಕೊಳ್ಳಿ ಹೇಗೇ ಮಾಡದು ಅಂತ

1.  ಸೌತೆಕಾಯಿ ನಿಂಬೆರಸ ಜ್ಯೂಸ್:

8 ಗ್ಲಾಸ್ ನೀರು
1 ಟೇಬಲ್ ಸ್ಪೂನ್ ತುರಿದ ಶುಂಠಿ
1 ತಾಜಾ ಸಿಪ್ಪೆ ಸುಲಿದ ಸೌತೆಕಾಯಿ, ಕತ್ತರಿಸಿದ ನಿಂಬೆ ಪೀಸ್‌ಗಳು
ಪುದೀನಾ 12 ಎಲೆಗಳು

 

 

 

ತಯಾರಿಸುವ ವಿಧಾನ
ಪಾತ್ರೆಯಲ್ಲಿ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ ರುಬ್ಬಿಕೊಳ್ಳಿ. ಇದರಿಂದ ಬಂದ ಜ್ಯೂಸ್ ತೆಗೆದುಕೊಂಡು ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದರ ಫಲಿತಾಂಶ 4 ದಿನದಲ್ಲೇ ನಿಮಗೆ ಗೊತ್ತಾಗಲಿದೆ.

 

2. ಕ್ಯಾರೆಟ್. ಸೌತೆಕಾಯಿ ಜ್ಯೂಸ್ :

 

 

ಕ್ಯಾರೆಟ್ 3, ಮಧ್ಯಮ ಗಾತ್ರದ ಸೌತೆಕಾಯಿ 1, ಅರ್ಧ ನಿಂಬೆ ಹಣ್ಣಿನ ರಸ ಹಾಗು ಒಂದು ಸೇಬಿನ ಹನ್ನಿ. ಇವೆಲ್ಲವನ್ನೂ ಚೆನ್ನಾಗಿ ತೊಳೆದುಕೊಂಡು ರುಬ್ಬಿ, ಜ್ಯೂಸ್ ಮಾಡಿಕೊಂಡು ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ. ಬೆಳಗಿನ ತಿಂಡಿಗೆ ಬದಲಾಗಿ ಇದನ್ನು ಸೇವಿಸಿ.

 

3. ನಿಂಬೆ ಕಲ್ಲಂಗಡಿ ಜ್ಯೂಸ್

1 ನಿಂಬೆ
1 ಕಪ್ ಕಲ್ಲಂಗಡಿ (ಬೀಜ ಸಹಿತ)
1 ಟೀ ಚಮಚ ಪುದಿನ ಎಲೆ

ಮಾಡುವವಿಧಾನ:

ಕಲ್ಲಂಗಡಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ , ಬೇಕಾದಷ್ಟು ನಿಂಬೆ ರಸವನ್ನು ಬೆರೆಸಿ ಹಾಗು ಪುದಿನ ಎಲೆಗಳನ್ನು ಬೆರೆಸಿ ಕುಡಿಯಿರಿ .
ನಿಮ್ಮ ತೂಕ ನಷ್ಟ ಪೌಷ್ಟಿಕ ಪಾನೀಯ ಸಿದ್ಧವಾಗಿದೆ. ಕಲ್ಲಂಗಡಿಯಲ್ಲಿ ನೀರಿನ ಅಂಶ ಹೆಚ್ಚಾಗಿದ್ದು , ದಿನ ಪೂರ್ತಿ ಹೊಟ್ಟೆಯನ್ನು ತುಂಬಿದ ಹಾಗೆ ಇರಿಸುತ್ತದೆ .
ದಿನಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ,ಹೀಗೆ ಒಂದು ತಿಂಗಳು ಮುಂದುವರಿಸಿ

 

4. ಲಿಂಬೆ, ಕೊತ್ತಂಬರಿ, ಪಾಲಕ್ ಜ್ಯೂಸ್

 

 

ಈ ಜ್ಯೂಸ್ ಮೂತ್ರವರ್ಧಕವಾಗಿದ್ದು, ಶುದ್ಧೀಕರಿಸುವ ಮತ್ತು ಉರಿಯೂತ ಶಮನ ಮಾಡುವ ಗುಣ ಹೊಂದಿದೆ ಹಾಗು ತೂಕ ಕಳೆದುಕೊಳ್ಳಲು ಇದು ಪರಿಣಾಮಕಾರಿ ಆಗಿದೆ. ಲಿಂಬೆಯು ಕ್ಯಾಲರಿ ಕಡಿಮೆ ಮಾಡುವುದು ಹಾಗು ತೂಕ ಕಳೆದುಕೊಳ್ಳಲು ಸಹಕಾರಿ ಮತ್ತು ಕೊತ್ತಂಬರಿ ಜತೆಗೆ ಇದು ಚಯಾಪಚಯ ಕ್ರಿಯೆ ವೃದ್ಧಿಸುವುದು. ಈ 3 ಸಾಮಗ್ರಿಗಳು ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತಯಾರಿಸುವ ವಿಧಾನ:

ಐದು ಕೊತ್ತಂಬರಿ ಗಿಡ, 6 ಪಾಲಕ ಎಲೆಗಳು, 1 ಸೆಲೆರಿ ದಳ, ½ ಕಪ್ ಸೌತೆಕಾಯಿ, 1 ಚಮಚ ತುರಿದ ಶುಂಠಿ(ರುಚಿಗೋಸ್ಕರ) ಮತ್ತು ಒಂದು ಲಿಂಬೆಯ ರಸ. ಇದನ್ನು ಒಂದು ಕಪ್ ನೀರಿನೊಂದಿಗೆ ಜ್ಯೂಸರ್ ಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ. ಖಾಲಿ ಹೊಟ್ಟೆಯಲ್ಲಿ ವಾರದಲ್ಲಿ ಮೂರು ಸಲ ಇದನ್ನು ಕುಡಿಯಿರಿ.

 

5. ಸೌತೆಕಾಯಿ, ಸೆಲರಿ ಹಾಗು ಹಸಿರು ಸೇಬಿನ ಜ್ಯೂಸ್

1 ಕಪ್ ಸೌತೆಕಾಯಿಯಲ್ಲಿ 16 ಕ್ಯಾಲರಿ, ವಿಟಮಿನ್ ಕೆ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ ಮತ್ತು ಇತರ ಪ್ರಮುಖ ಪೋಷಕಾಂಶಗಳು ಇವೆ. ಹಸಿರುವ ಸೇಬಿನಲ್ಲಿ ಜೀರ್ಣಗೊಳ್ಳದ ಅಂಶಗಳು ಇವೆ. ಇದು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾ ನಿರ್ಮಾಣ ಮಾಡಿ ತೂಕ ಕಳೆದುಕೊಳ್ಳಲು ಸಹಕರಿಸುವುದು. ಕರುಳು ಕೊಬ್ಬನ್ನು ಹೀರಿಕೊಳ್ಳುವುದನ್ನು ಈ ಜ್ಯೂಸ್ ತಗ್ಗಿಸಲಿದೆ ಮತ್ತು ಚಯಾಪಚಯ ಕ್ರಿಯೆ ಉತ್ತೇಜಿಸಿ, ಸುಲಭವಾಗಿ ತೂಕ ಕಡಿಮೆ ಮಾಡಬಹುದು. ತಯಾರಿಸುವುದು ಹೇಗೆ 0.5 ಕಪ್ ಸೌತೆಕಾಯಿ ಕತ್ತರಿಸಿಕೊಳ್ಳಿ, 3 ಸೆಲೆರಿ ದಳಗಳು, 1 ಹಸಿರು ಸೇಬನ್ನು ಒಂದು ಕಪ್ ನೀರಿನೊಂದಿಗೆ ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ತಯಾರಿಸಿ. ಈ ಜ್ಯೂಸ್ ನ್ನು ಬೆಳಗ್ಗೆ ಖಾಲಿ ಹೊಟ್ಟೆ ಮತ್ತು ಮಧ್ಯಾಹ್ನ ಕುಡಿಯಬೇಕು. ವಾರದಲ್ಲಿ ಎರಡು ಸಲ ಕುಡಿಯಿರಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top