fbpx
ಸಮಾಚಾರ

ಈ ವಿಚಿತ್ರ ಕಾರಣಕ್ಕಾಗಿ ವಿಚ್ಚೇದನ ಕೋರಿದ ಪತಿರಾಯ,ಏನ್ ಆ ವಿಚಿತ್ರ ಕಾರಣ ನೋಡಿ ನೀವೇ

ಇತ್ತೀಚಿನ ವರ್ಷಗಳಲ್ಲಿ ದಂಪತಿಗಳು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುವುದು ಸಾಮಾನ್ಯವಾಗಿಬಿಟ್ಟಿದೆ. ಹೀಗೆ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಕೋರ್ಟ್ ಕಾರಣ ಕೇಳುತ್ತದೆ. ಆಗ ದಂಪತಿಗಳು ವಿಚ್ಛೇದನಕ್ಕೆ ಕಾರಣ ಹೇಳುವುದು ಅನಿವಾರ್ಯವಾಗುತ್ತೆ. ಹೀಗೆ ದಂಪತಿ ಅಹ್ಮದಾಬಾದ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆಗ ಪತಿ ನೀಡಿದ್ದು ವಿಚಿತ್ರ ಕಾರಣ. ಏನದು ವಿಚಿತ್ರ ಕಾರಣ ಅಂತೀರಾ ಮುಂದೆ ಓದಿ.

ತನ್ನ ಹೆಂಡತಿಗೆ ಗಡ್ಡ ಹಾಗು ಮೀಸೆ ಬೆಳೆಯುತ್ತಿದೆ. ಅವಳ ಧ್ವನಿ ಗಂಡಸರ ಧ್ವನಿಯಂತಿದೆ ಎಂದು ಆರೋಪ ಮಾಡಿ ಪತಿಯೊಬ್ಬ ಸಲ್ಲಿಕೆ ಮಾಡಿದ್ದ ವಿಚ್ಛೇದನ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ ಎಂದು ತಿಳಿದು ಬಂದಿದೆ. ವಿವಾಹಕ್ಕೂ ಪೂರ್ವ ನಾನು ನನ್ನ ಹೆಂಡತಿಯಾಗುವಳ ಮುಖವೇ ನೋಡಿರಲಿಲ್ಲ. ಧಾರ್ಮಿಕ ಆಚರಣೆಯ ನೆಪವೊಡ್ಡಿ ವಧುವಿನ ಮನೆಯವರು ಮೋಸ ಮಾಡಿದ್ದಾರೆ.

 

 

 

ಮುಖವನ್ನು ಮರೆಮಾಚಿ ವಿವಾಹ ಮಾಡಲಾಗಿತ್ತು. ಮದುವೆಯ ಬಳಿಕ ಮೊದಲ ಬಾರಿ ಆಕೆಯ ಮುಖ ನೋಡಿದಾಗ ಮೇಕ್ಅಪ್ ಮಾಡಿದ್ದರು. ನಂತ್ರ ನನಗೆ ವಿಷ್ಯ ಗೊತ್ತಾಯಿತು. ಮೋಸದಿಂದಾದ ಮದುವೆಯನ್ನು ರದ್ದುಗೊಳಿಸುವಂತೆ ಕೋರಿ ಈತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪತಿ ಸಲ್ಲಿಸಿದ ಅರ್ಜಿ ಕೋರ್ಟ್ ಸಾರಾಸಗಟಾಗಿ ತಳ್ಳಿ ಹಾಕಿದೆ.

ತನ್ನ ಮೇಲೆ ಪತಿ ಹೊರಿಸಿರುವ ಆರೋಪವನ್ನು ಪತ್ನಿ ಅಲ್ಲಗಳೆದಿದ್ದು ಹಾರ್ಮೋನ್ ಸಮಸ್ಯೆಯಿಂದ ಹೀಗೆ ಆಗುತ್ತಿದ್ದು. ಗಂಡನ ಮನೆಯವರು ನನ್ನನು ಹೊರಗೆ ಹಾಕಲು ಈ ರೀತಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ನ್ಯಾಯಾಲಕ್ಕೆ ಮಾನವರಿಗೆ ಮಾಡಿಕೊಟ್ಟಿದ್ದಾರೆ. ಪತ್ನಿಯ ವಾದಕ್ಕೆ ಸಮ್ಮತಿಸಿರುವ ನ್ಯಾಯಾಲಯ ಈ ಅರ್ಜಿ ತಿರಸ್ಕಾರ ಮಾಡಿದೆ ಎಂದು ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top