ಸಮಾಚಾರ

ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರಬೇಕು ಅಂದ್ರೆ ತಪ್ಪದೆ ಹೀಗೆ ಮಾಡಿ ಆಮೇಲೆ ನೋಡಿ

ಅದೃಷ್ಟ ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗು ಅದೃಷ್ಟ ಸಿಗುತ್ತದೆ. ನಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತೇವೆ. ಆದರೆ ಎಲ್ಲ ಸಮಸ್ಯೆಗೂ ಪಾರಿರಾ ಇದ್ದೆ ಇದೆ ಎಂಬುದನ್ನು ನಾವು ಅರಿತು ಯಾವತ್ತೂ ಪ್ರಯತ್ನವನ್ನು ಕೈಬಿಡಬಾರದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಈ ಕೆಳಗಿನ ಕ್ರಮ ಅನುಸರಿಸಿದರೆ ಅದೃಷ್ಟ ಫಲಿಸುತ್ತೆ ಎಂದು ಹೇಳಲಾಗಿದೆ.

 

ಶುಭ ಕಾರ್ಯಕ್ಕೆ ಮುನ್ನ ಸಕ್ಕರೆ:
ನೀವು ಶುಭ ಕಾರ್ಯಕ್ಕೆ ಹೋಗುವ ಮುನ್ನ ಸಕ್ಕರೆ ಅಥವಾ ಬೆಲ್ಲ ತಿನ್ನಿ. ನಿಮಗೆ ಒಳಿತಾಗುತ್ತೆ.

 

 

 

 

ನಿಮ್ಮ ಬಳಿ ಬೆಳ್ಳಿ ನಾಣ್ಯ ಇರಲಿ:
ನಿಮ್ಮ ಬಳಿ ಯಾವಾಗಲು ಒಂದು ಬೆಳ್ಳಿ ನಾಣ್ಯ ಇಟ್ಟುಕೊಳ್ಳಿ. ಇದು ನಿಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

 

ನಾಯಿಗಳಿಗೆ ಊಟ ಹಾಕಿ:
ನಾಯಿಗಳಿಗೆ ಅಥವಾ ಪ್ರಾಣಿಗಳಿಗೆ ಆಹಾರ ನೀಡುವುದನ್ನು ರೂಢಿಸಿಕೊಳ್ಳಿ.

 

ತಂದೆ ತಾಯಿಯ ಆಶೀರ್ವಾದ:
ದಿನಾಲೂ ತಂದೆ ತಾಯಿಯ, ಹಿರಿಯರ ಆಶೀರ್ವಾದ ಪಡೆಯಿರಿ ಇದರಿಂದ ನಿಮ್ಮ ಕೆಲಸಗಳು ಫಲಿಸುತ್ತದೆ.

 

ಕೆಂಪು ಬಣ್ಣ:
ಸ್ವಲ್ಪ ಕೆಂಪು ಬಣ್ಣವನ್ನು ಕೆಂಪು ವಸ್ತ್ರದಲ್ಲಿ ಹೋಳಿ ಹಬ್ಬದ ದಿನದಂದು ಕಟ್ಟಿ, ಇದನ್ನು ನಿಮ್ಮ ವ್ಯಾಪಾರದ ಸ್ಥಳದಲ್ಲಿ ಅಥವಾ ಮನೆಯ ಲಾಕರ ನಲ್ಲಿ ಇಡಬೇಕು. ವ್ಯಾಪಾರದಲ್ಲಿ ಏಳಿಗೆ ಕಾಣುವಿರಿ

 

 

ಇಷ್ಟ ದೇವರನ್ನು ಮನದಲ್ಲಿ ಭಕ್ತಿಯಿಂದ ನೆನೆಯಿರಿ:
ಮನೆಯಿಂದ ಕೆಲಸಕ್ಕೆ ಹೊರಡುವ ಮುನ್ನ ನಿಮ್ಮ ಇಷ್ಟ ದೇವರನ್ನು ಮನದಲ್ಲಿ ಭಕ್ತಿಯಿಂದ ನೆನೆಯಿರಿ. ಹೊರಡುವಾಗ ಸುಮಧುರ ಸುಗಂಧ ದ್ರವ್ಯ ಸಿಂಪಡಿಸಿಕೊಳ್ಳಿ.

 

ಪೊರಕೆಯನ್ನು ಜನರಿಗೆ ಕಾಣದಂತಿಡಿ:

ಮನೆಯಲ್ಲಿ ಹಾಗೂ ವ್ಯಾಪಾರದ ಸ್ಥಳದಲ್ಲಿ ಪೊರಕೆ ಜನರಿಗೆ ಕಾಣದಂತೆ ದೂರ ಇಡಬೇಕು. ನಿಮ್ಮ ವ್ಯಾಪಾರದಲ್ಲಿ ಧನಾತ್ಮಕ ಪರಿಣಾಮ ಬೀರುತ್ತದೆ.

 

ಸೂರ್ಯ ಮುಳುಗುವ ಹೊತ್ತಿನಲ್ಲಿ ಮಲಗಬಾರದು:
ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ಆ ಹೊತ್ತಿನಲ್ಲಿ ಮನೆಯಲ್ಲಿ ದೀಪವನ್ನು ಬೆಳಗಿಸಬೇಕು.

 

 

 

 

ತೆಂಗಿನಕಾಯಿ:
ವ್ಯಾಪಾರ ಸ್ಥಳದಲ್ಲಿ ಏಕಾಕ್ಷಿ ತೆಂಗಿನಕಾಯಿಯನ್ನು ಇಟ್ಟು ಪ್ರತಿನಿತ್ಯ ಶ್ರದ್ಧೆಯಿಂದ ಪೂಜೆಯನ್ನು ಮಾಡಬೇಕು .

 

ರವಿವಾರ ಗಾಯತ್ರಿ ಮಂತ್ರ ಜಪಿಸಿ:
ಪ್ರತಿ ರವಿವಾರ ಪಾತ್ರೆಯೊಂದರಲ್ಲಿ ಗಂಗಾಜಲ ತುಂಬಿಸಿ ಅದನ್ನು ಕೈಯಲ್ಲಿ ಹಿಡಿದು 12 ಬಾರಿ ಗಾಯತ್ರಿ ಮಂತ್ರ ಜಪಿಸಬೇಕು..

 

ಗೋವಿಗೆ ಬಾಳೆ ಹಣ್ಣನ್ನು ತಿನ್ನಿಸಿ:
ಗುರುವಾರ ತಪ್ಪದೆ ಗೋವಿಗೆ ಬಾಳೆ ಹಣ್ಣನ್ನು ತಿನ್ನಿಸಿ ಇದರಿಂದ ಗೋಮಾತೆಯ ಆಶೀರ್ವಾದ ನಿಮಗೆ ಸಿಗುತ್ತದೆ.

 

ಪಕ್ಷಿಗಳಿಗೆ ಧಾನ್ಯ:
ವಿವಿಧ ಬಗೆಯ ಧಾನ್ಯಗಳನ್ನು ಪಕ್ಷಿಗಳಿಗೆ ತಿನ್ನಿಸಿ ಇದರಿಂದ ನಿಮ್ಮ ಆರ್ಥಿಕ ಸಂಕಷ್ಟ ದೂರವಾಗುತ್ತದೆ.

 

ತುಪ್ಪದ ದೀಪ:
ನೀವು ಪೂಜಿಸುವ ದೇವತೆಗೆ ತುಪ್ಪದ ದೀಪವನ್ನು ಬೆಳಗಿ. ಇದರಿಂದ ನಿಮ್ಮ ವ್ಯಾಪಾರ ಸ್ಥಳದಲ್ಲಿ ಧನಾತ್ಮಕ ಶಕ್ತಿ ಪಸರಿಸುತ್ತದೆ.

 

ಶ್ರಮ:
ನಾವು ಮಾಡುವ ಕೆಲಸದಲ್ಲಿ ಶೃದ್ದೆ ಇರಬೇಕು, ಕೆಲಸ ಕಷ್ಟ ವೆನಿಸಿದರೆ ಆಲಸ್ಯ ಮಾಡದೇ ಕಠಿಣ ಶ್ರಮ ವಹಿಸಿ ಕೆಲಸ ಮಾಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top