fbpx
ಸಮಾಚಾರ

ಈ ಕಾರಣಕ್ಕಾಗಿ ತಮ್ಮ ರೂಲ್ಸ್ ಬ್ರೇಕ್ ಮಾಡ್ತಾರಂತೆ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್.

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. ಚಿತ್ರರಂಗದಲ್ಲಿ ಬರೋಬ್ಬರಿ 120ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವ ಶಿವಣ್ಣ ಈವರೆಗೂ ಬಹತೇಕ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ವರ್ಷವೊಂದಕ್ಕೆ ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸುವ, ಒಂದು ಚಿತ್ರ ಮುಕ್ತಾಯವಾಗೋ ಮುನ್ನವೇ ಮತ್ತೊಂದು ಚಿತ್ರಕ್ಕೆ ಅಣಿಗೊಳ್ಳುವ ಅವರ ಕೈಲಿರೋ ಹೊಸಾ ಚಿತ್ರಗಳ ಪಟ್ಟಿ ನೋಡಿದರೇನೇ ಎಂಥವರೂ ಕಂಗಾಲಾಗುವಂತಿದೆ.. ಬಹುಶಃ ಈಗ ಶಿವಣ್ಣನ ಕೈಲಿರೋ ಚಿತ್ರಗಳ ಪಟ್ಟಿ ನೋಡಿದರೆ ಅವರ ಉತ್ಸಾಹದ ಬಗ್ಗೆ ಎಂಥವರಿಗಾದರೂ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ..

 

 

ಇಂಥಾ ಶಿವರಾಜಕುಮಾರ್ ರಿಮೇಕ್ ಸಿನಿಮಾಗಳತ್ತ ಒಲವು ತೋರಿದ್ದು ಅತೀ ಕಡಿಮೆ. ಏನೇ ಆದರೂ ರಿಮೇಕ್ ಸಿನಿಮಾದಲ್ಲಿ ನಟಿಸಬಾರದು ಎಂದು ತೀರ್ಮಾನಿಸಿಕೊಂಡು, ಒಂದೆರೆಡು ಭಾರಿ ತಾವೇ ಮಾಧ್ಯಮಗಳ ಮುಂದೆ ರಿಮೇಕ್ ಸಿನಿಮಾ ಮಾಡೋಲ್ಲ ಎಂದು ಹೇಳಿಕೊಂಡಿದ್ದ ಶಿವಣ್ಣ ಇದೀಗ ಇದ್ದಕ್ಕಿದ್ದಹಾಗೆ ರಿಮೇಕ್ ಸಿನಿಮಾವಾದ ‘ಕವಚ’ ದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೊದಲು ತಾವು ರಿಮೇಕ್ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದ ಶಿವಣ್ಣ ಈಗ ಇದ್ದಕ್ಕಿದ್ದಂತೆ ಈ ಚಿತ್ರವನ್ನು ಮಾಡಲು ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡಿತ್ತು. ಈಗ ಆ ಪ್ರಶ್ನೆಗೆ ಸ್ವತಃ ಶಿವಣ್ಣ ಅವರೇ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದಾರೆ.

ಶಿವಣ್ಣನೇ ಬಹಿರಂಗಪಡಿಸಿರೋ ಪ್ರಕಾರವೇ ಹೇಳೋದಾದರೇ ಒಪ್ಪಂ ಸಿನಿಮಾ ನೋಡಿ ಅವರು ಸ್ಟನ್ ಆಗಿದ್ದರಂತೆ. ಚಿತ್ರದಲ್ಲಿನ ಕತೆ, ಪಾತ್ರ ಎಲ್ಲವೂ ಶಿವಣ್ಣನನ್ನು ಫಿದಾ ಮಾಡಿದ್ದವಂತೆ. ಹಾಗಾಗಿ ಈ ಸಿನಿಮಾವನ್ನು ಮಾಡಬೇಕು ಎಂದು ನಿರ್ಧಾರ ಮಾಡಿದ್ದರಂತೆ. ಚಿತ್ರದಲ್ಲಿ ಸಾಕಷ್ಟು ಎಮೋಷನ್ಸ್‌ ಇದೆ. ಆ್ಯಕ್ಷನ್‌ ಇದೆಯಾದರೂ, ಆ ಪಾತ್ರ ಶಬ್ಧ ಮತ್ತು ವಾಸನೆ ಗ್ರಹಿಸಿ ಹೊಡೆದಾಡುತ್ತೆ. ಇಂಥಾ ಸಿನಿಮಾಗಳಿಗಾಗಿ ನಾನು ರಿಮೇಕ್ ಮಾಡಿದ್ದಕ್ಕೆ ಬೇಸರವಿಲ್ಲ, ಮುಂದೆಯೂ ಇಂಥಾ ಕತೆಗಳು ಸಿಕ್ಕರೆ ನನ್ನ ರೂಲ್ಸ್ ಬ್ರೇಕ್ ಮಾಡಿಕೊಂಡು ರಿಮೇಕ್ ಚಿತ್ರಗಳಲ್ಲಿ ನಟಿಸುತ್ತೇನೆ” ಎಂದು ಶಿವಣ್ಣ ಹೇಳಿದರು.
.
ಅಂದಹಾಗೆ ‘ಕವಚ’ ಸಿನಿಮಾ ಮಲೆಯಾಳಂನ ಸೂಪರ್ ಹಿಟ್ ‘ಒಪ್ಪಮ್’ ಚಿತ್ರದ ರಿಮೇಕ್ ಆಗಿದ್ದು ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆಯಂತೆ. ಉಳಿದಂತೆ ಇಶಾ ಕೊಪ್ಪಿಕರ್, ರವಿ ಕಾಳೆ, ತಬಲಾ ನಾಣಿ, ವಸಿಷ್ಠ ಸಿಂಹ, ಸುಧಾ ಬೆಳವಾಡಿ, ಜಯಪ್ರಕಾಶ್, ಲಯೇಂದ್ರ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ರಾಹುಲ್ ಶ್ರೀವಾತ್ಸವ್ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಜನ್ಯ ಅವರ ಸಂಗೀತ ಈ ಸಿನೆಮಾಗೆ ಇದೆ. ಶಿವಣ್ಣ ಅವರು ಇಷ್ಟೂ ದಿನ ನಟಿಸಿದ ಎಲ್ಲಾ ಸಿನೆಮದಲ್ಲೂ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಕವಚ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡು ಹೇಗೆ ಮಿಂಚಲಿದ್ದಾರೆ ಕಾದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top