ಹೆಚ್ಚಿನ

ಮೈಸೂರು ದಸರಾ ಅಂಬಾರಿಯ ನಿಜವಾದ ತೂಕ ಎಷ್ಟು ಗೊತ್ತಾ ,ಗೊತ್ತಾದ್ರೆ ಖಂಡಿತಾ ಆಶ್ಚರ್ಯ ಪಡ್ತಿರಾ.

ಮೈಸೂರು ದಸರಾ ಎಂದ ತಕ್ಷಣ ಮೊದಲು ನೆನಪಿಗೆ ಬರುವುದು ಚಿನ್ನದ ಅಂಬಾರಿ. ಈ ಚಿನ್ನದ ಅಂಬಾರಿಯನ್ನು ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರು ದಸರಾ ನಡೆಯುವ ಸಂದರ್ಭದಲ್ಲಿ ಭೇಟಿಯನ್ನು ನೀಡುತ್ತಾರೆ. ಜಯಚಾಮರಾಜೇಂದ್ರ ಒಡೆಯರ್ ಅವರು ನಿಧನರಾಗುವುದಕ್ಕೂ ಮೊದಲು ಅಂಬಾರಿಯ ಮೇಲೆ ರಾಜರುಗಳೇ ಕುಳಿತುಕೊಳ್ಳುತ್ತಿದ್ದರು. ಆದರೆ ಅವರು ನಿಧನರಾದ ನಂತರ ದೇವಿ ಚಾಮುಂಡೇಶ್ವರಿಯ ವಿಗ್ರಹವನ್ನು ಅದರೊಳಗೆ ಇಟ್ಟು ಮೆರವಣಿಗೆ ಮಾಡುತ್ತಾರೆ.

 

 

 

ಆದರೆ ಅಂಬಾರಿಯ ನಿಜವಾದ ತೂಕ ಎಷ್ಟು ? ಎಂದು ಯಾರಿಗೂ ಸಹ ಸರಿಯಾಗಿ ನಿಖರವಾದ ಮಾಹಿತಿ ಇಲ್ಲ .ಒಬ್ಬೊಬ್ಬರು ಒಂದೊಂದು ಉತ್ತರವನ್ನು ನೀಡುತ್ತಾರೆ. ಕೆಲವರು 750 ಕೆಜಿ ಎಂದು ಹೇಳಿದರೆ, ಇನ್ನು ಕೆಲವರು 500 ಕೆಜಿ ಎಂದು, ಮತ್ತಷ್ಟು ಕೆಲವರು 600 ಕೆಜಿ,ಆದರೆ ಅರಮನೆಯವರು 80 ಕೆಜಿ ಮಾತ್ರ ಇದೆ ಎಂದು ಹೇಳುತ್ತಾರೆ .ತುಂಬಾ ಜನರಿಗೆ ಈ ವಿಷಯ ಗೊತ್ತಿಲ್ಲ. ಮೈಸೂರು ಅರಮನೆ ಆವರಣದಲ್ಲಿ ಮಂಡಳಿಯ ವತಿಯಿಂದ ಕೆಲವು ಪುಸ್ತಕಗಳು ಸಿಗುತ್ತವೆ. ಅದನ್ನು ನೀವು ತೆಗೆದು ನೋಡಿದರೆ ಅದರೊಳಗೆ ಬರೀ 80 ಕೆಜಿ ಮಾತ್ರ ಚಿನ್ನ ಈ ಅಂಬಾರಿಯಲ್ಲಿ ಬಳಸಲಾಗಿದೆ ಎಂದು ಅದರಲ್ಲಿ ಉಲ್ಲೇಖವಿದೆ.
ಆದರೆ ಅದನ್ನು ಆ ಪುಸ್ತಕವನ್ನು ಮೈಸೂರು ಅರಮನೆ ಮಂಡಳಿಯವರೇ ಮುದ್ರಣ ಮಾಡಿರುವುದು, ಆ ಪುಸ್ತಕದಲ್ಲಿ ನಿಮಗೆ ಕೇವಲ 80 ಕೆಜಿ ಚಿನ್ನವನ್ನು ಮಾತ್ರ ಬಳಸಲಾಗಿದೆ ಎಂದು ಹೇಳಲಾಗಿದೆ. ಅಂದರೆ ಅಂಬಾರಿಯನ್ನು ಮರದಲ್ಲಿ ಮಾಡಿರುವುದು ಅದಕ್ಕೆ ಚಿನ್ನದ ಲೇಪನವನ್ನು ಮಾತ್ರ ಮಾಡಲಾಗಿದೆ ಎಂದು ಅದರಲ್ಲಿ ಉಲ್ಲೇಖ ಮಾಡಲಾಗಿದೆ. ವಿದೇಶಿ ಪ್ರವಾಸಿಗರಿಗೆ ಮಾಡಿರುವ ಆಡಿಯೋ ಗೈಡ್ ಅದರಲ್ಲೂ ಕೂಡ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಪ್ರೊಫೆಸರ್ ನಂಜರಾಜು ಅರಸುರವರು ಮಾತ್ರ ಯಾವುದೇ ಕಾರಣಕ್ಕೂ ಇದನ್ನು ಒಪ್ಪುವುದಿಲ್ಲ. ಅಂಬಾರಿಯನ್ನು 750 ಕೆಜಿ ಚಿನ್ನದಿಂದಲೇ ಮಾಡಿದ್ದಾರೆ. ಇದರಲ್ಲಿ ಯಾವುದೇ ಮರವನ್ನು ಉಪಯೋಗ ಮಾಡಿಲ್ಲ ಎಂದು ಹೇಳುತ್ತಾರೆ. ಇದು ಸಂಪೂರ್ಣ ಚಿನ್ನದ್ದು ಎಂದು ಅವರು ಹೇಳುತ್ತಾರೆ . ಅವರು ಕೊಟ್ಟಿರುವ ಮಾಹಿತಿ ಸಂಪೂರ್ಣ ತಪ್ಪಾಗಿದೆ. 750 ಕೆಜಿ ಮೈಸೂರಿನ ಇತಿಹಾಸವನ್ನು ಅವರಷ್ಟು ಚೆನ್ನಾಗಿ ಬಲ್ಲವರು ಇಲ್ಲ ಹೇಳಬಹುದು.ಹೌದು ಇದನ್ನು ನಂಬಲೇಬೇಕು.

ಅಂಬಾರಿಯ ಒಳಗೆ ಇರುವ ದೇವಿ ಕುಳಿತುಕೊಳ್ಳುವ ಜಾಗ ಮಾಡಿರುವುದು ಕುಷನ್ ನಿಂದ ಮಾಡಲಾಗಿದೆ. ಮಿಕ್ಕಿದೆಲ್ಲವನ್ನು ಕೂಡ ಚಿನ್ನದಿಂದಲೇ ಮಾಡಿರುವುದು ಎಂದು ಹೇಳುತ್ತಾರೆ. ಅವರು ಹೇಳಿರುವ ಪ್ರಕಾರ ಬರೀ80 ಕೆಜಿ ಚಿನ್ನವನ್ನು ಮಾತ್ರ ಬಳಕೆ ಮಾಡಿದರೆ ಉಳಿದ 670 ಕೆಜಿ ಎಲ್ಲಿ ಇದೆ ಎಂದು ತೋರಿಸಿ ಎಂದು ಅರಮನೆ ಮಂಡಳಿಯವರನ್ನು ಕೇಳುತ್ತಾರೆ. ಸವಾಲನ್ನು ಕೂಡ ಹಾಕುತ್ತಾರೆ . ಅಂಬಾರಿಯನ್ನು ಜಂಬೂ ಸವಾರಿಯ ಸಂದರ್ಭದಲ್ಲಿ ಮಾತ್ರ ಹೊರಗೆ ತೆಗೆಯುತ್ತಾರೆ.

ಬೇರೆ ಸಮಯದಲ್ಲಿ ಅಂಬಾವಿಲಾಸ ಅರಮನೆಯಲ್ಲಿ ಗೊಂಬೆ ತೊಟ್ಟಿಯ ಉತ್ತರ ಭಾಗದಲ್ಲಿ ಸಾರ್ವಜನಿಕರ ವೀಕ್ಷಣೆಗೆಂದು ಇಡಲಾಗುತ್ತದೆ. ಆದರೆ ಅಂಬಾರಿಯ ನಿಜವಾದ ತೂಕ 750 ಕೆಜಿ ಚಿನ್ನ ಎಂದು ಪ್ರೊಫೆಸರ್ ನಂಜರಾಜ ಅರಸು ಅವರು ಹೇಳಿದರೆ. ಅರಮನೆಯ ಆಡಳಿತ ಮಂಡಳಿ ಕೇವಲ 80 ಕೆಜಿ ಇದೆ ಅದಕ್ಕೆ ಮರದಲ್ಲಿ ಮಾಡಿರುವ ಅಂಬಾರಿಗೆ ಚಿನ್ನದ ಲೇಪನ ಮಾಡಲಾಗಿದೆ ಎಂದು ಹೇಳುತ್ತಾರೆ. ಇದರಲ್ಲಿ ಯಾವುದು ಸರಿ ? ಯಾವುದು ತಪ್ಪು ? ಎನ್ನುವುದು ಚಾಮುಂಡೇಶ್ವರಿಗೆ ಮಾತ್ರ ಗೊತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top