ಸಮಾಚಾರ

ಈ ಕಾರಣಕ್ಕಾಗಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದ ನಟ ಪ್ರಕಾಶ್ ರೈ

ಗೌರಿ ಲಂಕೇಶ್ ಅವರ ಹತ್ಯೆ ನಡೆದ ನಂತರದಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ನಿರ್ಬಿಢೆಯಿಂದ ಧ್ವನಿಯೆತ್ತುತ್ತಾ ಒಂದು ಪಂಥದವರ ವಿರೋಧವನ್ನೂ ಕಟ್ಟಿಕೊಂಡಿರುವವರು ನಟ ಪ್ರಕಾಶ್ ರೈ. ಧರ್ಮಾಧಾರಿತ ರಾಜಕಾರಣ ಮತ್ತು ಆ ಭೂಮಿಕೆಯಲ್ಲಿ ಬಿಜೆಪಿ ಅಜೆಂಡಾಗಳನ್ನು ವಿರೋಧಿಸುತ್ತಾ ಬಂದಿರುವ ರೈ ಎಲ್ಲಾ ವಿರೋಧಿಸುತ್ತಾ ಕೋಮು ಸೌಹಾರ್ದ ಕದಡುವವರನ್ನು ಗುರಿಯಾಗಿಟ್ಟುಕೊಂಡು ಪ್ರಶ್ನಿಸುತ್ತಲೇ ಬಂದಿದ್ದರು. ಇಂಥಾ ರೈ ಎಲ್ಲರಿಗಿಂತ ಹೆಚ್ಚಾಗಿ ಪ್ರಧಾನಿ ಮೋದಿ, ಮತ್ತು ಕೇಂದ್ರ ಸರ್ಕಾರವನ್ನೇ ಹೆಚ್ಚಾಗಿ ಟೀಕಿಸುತ್ತಾ ಬಂದಿದ್ದರು.

 

 

ಹಾಗೆ ನೋಡಿದರೆ ಈ ಮುಂಚೆ ಪ್ರಕಾಶ್ ರೈ ಬಿಜೆಪಿಯನ್ನು ಹೊರತುಪಡಿಸಿ ಬೇರೆ ಪಕ್ಷಗಳನ್ನು ಹೆಚ್ಚಾಗಿ ಟೀಕಿಸುತ್ತಿರಲಿಲ್ಲ.. ಆದರೀಗ ಕರ್ನಾಟಕದದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ನಿರಂತರವಾಗಿ ಗುಡುಗುತ್ತಿದ್ದಾರೆ… ಇದೀಗ ಪ್ರಕಾಶ್ ಅವರ ಕಣ್ಣು ಮೈತ್ರಿ ಸರ್ಕಾರದ ಮೇಲೆ ಮತ್ತೊಮ್ಮೆ ಕೆಂಪಗಾಗಿದ್ದು ತಮ್ಮ ಟ್ವಿಟರ್ ನಲ್ಲೆ ಅಸಮಾಧಾನ ಹೊರಹಾಕಿದ್ದಾರೆ. ಸಾವಿರಾರು ಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆಯುತ್ತಿರುವುದು ಮತ್ತು ಸುಮಾರು 30 ಸಾವಿರ ಗುತ್ತಿಗೆ ನೌಕರರಿಗೆ ಹಲವು ತಿಂಗಳುಗಳಿಂದ ಸಂಬಳ ನೀಡದಿರುವುದರ ವಿರುದ್ಧ ನಾಳೆ ಹಮ್ಮಿಕೊಂಡಿರುವ ಪ್ರತಿಭಟನಾ ಸತ್ಯಾಗ್ರಹದಲ್ಲಿಯೂ ಪ್ರಕಾಶ್ ರೈ ಭಾಗವಹಿಸಿ ಸರ್ಕಾರದ ವಿರುದ್ಧ ಧ್ವನಿಯೆತ್ತಲಿದ್ದಾರಂತೆ.

ನಿರುದ್ಯೋಗದ ಸಮಸ್ಯೆಯನ್ನು ಕಳೆಯಲು ಸೂಕ್ತವಾದ ಯಾವುದೇ ಹೆಜ್ಜೆಯನ್ನು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತೆಗೆದುಕೊಳ್ಳಲಾದ ಕಾರಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಕಾಶ್ ರೈ ಉದ್ಯೋಗ ಸೃಷ್ಟಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ತಮ್ಮ ಟ್ವಿಟರ್ ನಲ್ಲಿಯೂ ಪ್ರಕಾಶ್ ರೈ ಟೀಕಿಸಿದ್ದು “ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರದ ಕರ್ನಾಟಕ ಸರ್ಕಾರವೇ ನೀವು ಕೂಡ ತಾವು ಉದ್ಯೋಗ ಸೃಷ್ಟಿಯ ಮೇಲೆ ನೀಡಿದ್ದ ಭರವಸೆಯನ್ನು ಈಡೇರಿಸಲು ಯಾವ ರೀತಿ ಯೋಜನೆಗಳನ್ನು ಜಾರಿಗೆ ತರಬಹುದು ಎನ್ನುವ ಕಡೆಗೆ ಗಮನ ಕೊಡಿ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top