ಸಮಾಚಾರ

5 ಭಾಷೆಗಳಲ್ಲಿ ಕಾಣಿಸಿಕೊಳ್ಳಲು ರೆಡಿ ಆಗೇ ಬಿಟ್ಲು ‘ರಾಣಿ ಶಿವಗಾಮಿ ದೇವಿ ‘,ಏನ್ ಇದು ರಾಣಿ ಶಿವಗಾಮಿ ದೇವಿ ಕಥೆ ಅಂತೀರಾ,ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.

ಬಾಹುಬಲಿ ಸಿನೆಮಾದಲ್ಲಿದ್ದ ಶಿವಗಾಮಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಬಾಹುಬಲಿಯ ತಾಯಿಯಾಗಿದ್ದ ಶಿವಗಾಮಿ ಪಾತ್ರಕ್ಕೆ ನಟಿ ರಮ್ಯಾ ಕೃಷ್ಣನ್ ಬಣ್ಣ ಹಚ್ಚಿದ್ದರು. ಬಾಹುಬಲಿ ಸಿನೆದೊಡನೆ ಶಿವಗಾಮಿ ಪಾತ್ರವೂ ಕೂಡಾ ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಆ ಪಾತ್ರದ ಹೆಸರನ್ನೇ ಟೈಟಲ್ ಮಾಡಿಕೊಂಡು ಸಿನಿಮಾ ತಯಾರಾಗುತ್ತಿದೆ. ನಟಿ ರಮ್ಯಾ ಕೃಷ್ಣನ್ ಅವರು ‘ರಾಣಿ ಶಿವಗಾಮಿ’ ಸಿನಿಮಾದ ಮೂಲಕ ಮತ್ತೆ ಶಿವಗಾಮಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.

 

 

‘ರಾಣಿ ಶಿವಗಾಮಿ’ ಎನ್ನುವ ಟೈಟಲ್ ನೊಂದಿಗೆ ರಮ್ಯಕೃಷ್ಣ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ವಿಶೇಷವೆಂದರೆ ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿ ಪಂಚಭಾಷೆಗಳಲ್ಲಿ ಒಂದೇ ಸಾರಿ ರಿಲೀಸ್ ಆಗಿದೆ ಎಂದು ಸಿನಿಮಾ ಮೂಲಗಳು ತಿಳಿಸಿವೆ. ‘ರಾಣಿ ಶಿವಗಾಮಿ’ ಚಿತ್ರಕಥೆಯೂ 9ನೇ ಶತಮಾನದಿಂದ ಶುರು ಆಗಿ 21ನೇ ಶತಮಾನದಲ್ಲಿ ಕೊನೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಯುದ್ಧದಂತಹ ದೃಶ್ಯಗಳು ಚಿತ್ರದಲ್ಲಿ ಇರಲಿದ್ದು ಸಾಕಷ್ಟು ಗ್ರಾಫಿಕ್ಸ್ ಮಾಡಲಾಗಿದೆಯಂತೆ.

‘ಶ್ರೀ ವೆಂಕಟೇಶ್ವರ ಪಿಕ್ಚರ್ಸ್’ ರವರ ಬ್ಯಾನರ್ ಅಡಿಯಲ್ಲಿ ಮುರುಳಿ ಕೃಷ್ಣ ದಬ್ಬುಗುಡಿ ನಿರ್ಮಾಣ ಮಾಡುತ್ತಿರುವ ಈ ಸಿನೆಮಾವನ್ನು ಮಧು ಮಿಣಿಕನ್ ನಿರ್ದೇಶನ ಮಾಡುತ್ತಿದ್ದಾರೆ. ವೀರ ಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದು, ತಾರಾಗಣದಲ್ಲಿ ರವಿಕಾಳೆ, ಗೋಲಿಸೋಡ ಮಧು, ಅವಿನಾಶ್, ಪ್ರವೀಣ್, ಪಾಯಲ್ ರಾಧಾಕೃಷ್ಣ, ರಮೇಶ್ ಪಂಡಿತ್, ರಘು ಕರುಮಂಚಿ ಹಾಗೂ ಇನ್ನಿತರರು ಇರಲಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top