ಸಮಾಚಾರ

ಬ್ಯಾಡ್ ಬಾಯ್ ಸಲ್ಲುಗೆ ಮತ್ತೊಂದು ಬಿಗ್ ಶಾಕ್ ಕೊಟ್ಟ ಕೋರ್ಟ್

ಬಾಲಿವುಡ್ ಸೂಪರ್ ಸ್ಟಾರ್ ಆಗಿರುವ ಸಲ್ಮಾನ್ ಖಾನ್ ಪ್ರತಿ ಸಾರಿಯೂ ವಿದೇಶ ಪ್ರವಾಸ ಕೈಗೊಂಡಾಗ ನ್ಯಾಯಾಲಯದ ಅನುಮತಿ ಅಗತ್ಯ ಎಂದು ಜೋದ್ ಪುರ್ ಸೆಶನ್ಸ್ ನ್ಯಾಯಾಲಯ ಇಂದು ಆದೇಶವನ್ನು ನೀಡಿದೆ ಎಂದು ತಿಳಿದು ಬಂದಿದೆ.

ಕೃಷ್ಣ ಮೃಗವನ್ನು ಬೇಟೆಮಾಡಿರುವ ಪ್ರಕರಣಕ್ಕೆ ಸಂಭಂದ ಪಟ್ಟಂತೆ ನ್ಯಾಯಾಲಯವು ಸಲ್ಮಾನ್ ಖಾನ್ ಗೆ ಈ ಆದೇಶವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಸಲ್ಮಾನ್​ ಖಾನ್ ​ಅವರ ಮುಂಬರುವ ಸಿನಿಮಾ ಚಿತ್ರಕರಣ​ ಮೇಲೆ ಇದು ಪ್ರಭಾವ ಬೀರುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.

 

 

ಈ ಹಿಂದೆ ಜೋಧಪುರ ಕಾಡಿನಲ್ಲಿ 2 ಕೃಷ್ಣಮೃಗಗಳನ್ನು ಬೇಟೆ ಆಡಿದ ಪ್ರಕರಣದಲ್ಲಿ ಸಲ್ಮಾನ್ ​ಗೆ 5 ವರ್ಷ ಜೈಲು ಶಿಕ್ಷೆ ನೀಡಿದರು. ಆದರೆ ರಾಜಸ್ಥಾನ ಹೈಕೋರ್ಟ್ ನಿಂದ ಜಾಮೀನು ಪಡೆದು ಸಲ್ಮಾನ್ ಖಾನ್ ಅವರು ಹೊರಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿದೇಶ ಪ್ರವಾಸದ ಮೇಲೆ ನಿರ್ಬಂಧ ಹೇರಿದ್ದರು. ಹೀಗಾಗಿ ಶೂಟಿಂಗ್ ಗಾಗಿ ವಿದೇಶಕ್ಕೆ ಹೋಗಲು ಅವಕಾಶ ನೀಡ ಬೇಕು, ಪ್ರತಿ ಬಾರಿ ಕೋರ್ಟ್ ಅನುಮತಿ ಪಡೆಯುವ ಅವಕಾಶದಿಂದ ವಿನಾಯಿತಿ ನೀಡಬೇಕು ಎಂದು ಸಲ್ಮಾನ್ ಅರ್ಜಿ ಸಲ್ಲಿಕೆ ಮಾಡಿದ್ದರು ಆದರೆ ಕೋರ್ಟ್ ಸಲ್ಲುಗೆ ಅನುಮತಿ ಕಡ್ಡಾಯ ಎಂದು ಆದೇಶ ಹೊರಡಿಸಿದೆ. ಇದು ಸಲ್ಮಾನ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಲ್ಮಾನ್​ ಖಾನ್​ ಅತಿ ಶೀಘ್ರದಲ್ಲೇ ಅಲೀ ಅಬ್ಬಾಸ್​ ಜಫರ್​ ನಿರ್ದೇಶನದ ಚಿತ್ರ ಭಾರತ್​ನಲ್ಲಿ ಅಭಿನಯ ಮಾಡಲಿದ್ದು, ಸದ್ಯ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಭಾರತ್ ಸಿನಿಮಾ ಬಿಗ್ ಬಜೆಟ್ ಚಿತ್ರವಾಗಿದ್ದು ಸಲ್ಲು ಅಭಿಮಾನಿಗಳಿಗೆ ಚಿತ್ರದ ಬಗ್ಗೆ ಅತೀವ ಕುತೂಹಲ ಮೂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top