fbpx
ಹೆಚ್ಚಿನ

ಅತ್ಯಂತ ಶುಭ ಮುಹೂರ್ತವಾದ ಅಮೃತ ಸಿದ್ಧಿಯೋಗ ಯಾವಾಗ ಹಾಗೂ ಹೇಗೆ ಬರುತ್ತದೆ ? ಅದರ ವಿಶೇಷತೆ ಬಗ್ಗೆ ನಿಮಗೆ ಗೊತ್ತಾ ,ತಿಳ್ಕೊಳ್ಳಿ ಈಗ

ನಾವು ಶುಭ ಕಾರ್ಯಗಳನ್ನು ಪ್ರಾರಂಭ ಮಾಡುವಾಗ ನಮ್ಮ ಇಂದೂ ಪಂಚಾಂಗದ ಪ್ರಕಾರ ಒಳ್ಳೆಯ ತಿಥಿ, ದಿನ, ನಕ್ಷತ್ರಗಳನ್ನು ನೋಡುತ್ತೇವೆ. ಅದರಲ್ಲಿ ಅಮೃತ ಸಿದ್ಧಿಯೋಗ ಜೊತೆಯಾದರೆ ಅವರ ಆ ಕಾರ್ಯಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹಾಗಾದರೆ ಅಮೃತ ಸಿದ್ಧಿಯೋಗ ಯಾವ ಯಾವ ನಕ್ಷತ್ರದ ಜೊತೆಯಲ್ಲಿ ಇರುವಾಗ ಬರುತ್ತದೆ ಎಂದು ಈಗ ನಾವು ತಿಳಿದುಕೊಳ್ಳೋಣ.
ಯಾವ ನಕ್ಷತ್ರಗಳು ? ಯಾವ ವಾರದಲ್ಲಿ ? ಬಂದಾಗ ಅದನ್ನು ಅಮೃತ ಸಿದ್ಧಿಯೋಗ ಎಂದು ಕರೆಯುತ್ತಾರೆ.
ಭಾನುವಾರ -ಹಸ್ತ ನಕ್ಷತ್ರ.
ಸೋಮವಾರ – ಮೃಗಶಿರ ನಕ್ಷತ್ರ .
ಮಂಗಳವಾರ -ಅಶ್ವಿನಿ ನಕ್ಷತ್ರ.
ಬುಧವಾರ – ಅನುರಾಧ ನಕ್ಷತ್ರ.
ಗುರುವಾರ – ಪುಬ್ಬಾ ನಕ್ಷತ್ರ.
ಶುಕ್ರವಾರ – ರೇವತಿ ನಕ್ಷತ್ರ.
ಶನಿವಾರ – ರೋಹಿಣಿ ನಕ್ಷತ್ರ.

 

 

 

ಈ ದಿನಗಳಲ್ಲಿ ,ಈ ನಕ್ಷತ್ರಗಳು ಬಂದರೆ ಇದನ್ನು ಅಮೃತ ಸಿದ್ಧಿಯೋಗ ಎಂದು ಕರೆಯುತ್ತಾರೆ . ಈ ದಿನಗಳಲ್ಲಿ ಯಾವ ಒಳ್ಳೆಯ ಕೆಲಸವಾದರೂ ಅದು ಶುಭವನ್ನು ತರುತ್ತದೆ.
ಕೆಲವೊಮ್ಮೆ ಈ ದಿನಗಳಲ್ಲಿ ಈ ನಕ್ಷತ್ರಗಳು ಬಂದರೂ ಸಹ ,ಕೆಲ ತಿಥಿಗಳ ಕಾರಣದಿಂದಾಗಿ ಅದು ಅಮೃತ ಸಿದ್ಧಿಯೋಗದ ಫಲವನ್ನು ನೀಡುವುದಿಲ್ಲ .ಹಾಗಾದರೆ ಅ ತಿಥಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಭಾನುವಾರ- ಹಸ್ತ ನಕ್ಷತ್ರ- ಪಂಚಮಿ ತಿಥಿ, ಸೋಮವಾರ – ಮೃಗಶಿರ ನಕ್ಷತ್ರ- ಷಷ್ಠಿ ತಿಥಿ, ಮಂಗಳವಾರ -ಅಶ್ವಿನಿ ನಕ್ಷತ್ರ- ಸಪ್ತಮಿ ತಿಥಿ, ಬುಧುವಾರ- ಅನುರಾಧ ನಕ್ಷತ್ರ -ಅಷ್ಟಮಿ ತಿಥಿ, ಗುರುವಾರ – ಪುಬ್ಬ ನಕ್ಷತ್ರ- ನವಮಿ ತಿಥಿ ,ಶುಕ್ರವಾರ -ರೇವತಿ ನಕ್ಷತ್ರ- ದಶಮಿ ತಿಥಿ, ಶನಿವಾರ – ರೋಹಿಣಿ ನಕ್ಷತ್ರ- ಏಕಾದಶಿ ತಿಥಿ.

ಹೀಗೆ ಈ ದಿನಗಳಲ್ಲಿ ಮತ್ತು ಈ ನಕ್ಷತ್ರಗಳಲ್ಲಿ ಈ ತಿಥಿ ಬಂದಾಗ ಆ ದಿನ ಅಮೃತ ಸಿದ್ಧಿಯೋಗ ಆಗುವುದಿಲ್ಲ ಹಾಲಾಹಲ ಯೋಗದಲ್ಲಿ ಶುಭ ಕಾರ್ಯಗಳನ್ನು ಹೊಸ ಕೆಲಸವನ್ನು ಪ್ರಾರಂಭ ಮಾಡಿದರೆ ಆ ಕೆಲಸ ಮುಂದೆ ಹೋಗುವುದೇ ಇಲ್ಲ.

ಈ ವಾರ, ತಿಥಿ , ನಕ್ಷತ್ರ, ಯೋಗದಿಂದ, ಹಾಲಹಲ ಯೋಗ ಆಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಸೋಮವಾರ -ಚಿತ್ತಾ ನಕ್ಷತ್ರ ಇದ್ದು, ದ್ವಿತೀಯ ತಿಥಿ ಆದರೆ ಅದು ಹಾಲಾಹಲ ಯೋಗ ಆಗುತ್ತದೆ.
ಮಂಗಳವಾರ – ರೋಹಿಣಿ ನಕ್ಷತ್ರ ಇದ್ದು, ಹುಣ್ಣಿಮೆ ಬಂದರೆ ಅದು ಹಾಲಹಲ ಯೋಗ ಆಗುತ್ತದೆ.
ಬುಧುವಾರ- ಭರಣಿ ನಕ್ಷತ್ರ ಇದ್ದು ಸಪ್ತಮಿ ತಿಥಿ ಇದ್ದರೆ ಹಾಲಾಹಲ ಯೋಗವಾಗುತ್ತದೆ.
ಗುರುವಾರ- ಅನುರಾಧ ನಕ್ಷತ್ರ ಇದ್ದು, ತ್ರಯೋದಶಿ ತಿಥಿ ಬಂದರೆ, ಅದು ಹಾಲಾಹಲ ಯೋಗವಾಗುತ್ತದೆ.
ಶುಕ್ರವಾರ – ಶ್ರವಣ ನಕ್ಷತ್ರ ಇದ್ದು, ಷಷ್ಟಿ ತಿಥಿ ಇದ್ದರೆ , ಹಾಲಾಹಲ ಯೋಗವಾಗುತ್ತದೆ.
ಶನಿವಾರ – ರೇವತಿ ನಕ್ಷತ್ರ ಇದ್ದು, ಅಷ್ಟಮಿ ತಿಥಿ ಇದ್ದರೆ, ಹಾಲಾಹಲ ಯೋಗವಾಗುವುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top