ಮನೋರಂಜನೆ

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಮತ್ತೊಬ್ಬ ಖ್ಯಾತ ತಮಿಳು ನಟ.

ಪರಭಾಷಾ ನಟರು ಕನ್ನಡ ಸಿನಿಮಾಗಳ ವಿಶೇಷ ಪಾತ್ರಗಳಲ್ಲಿ ನಟಿಸುವುದು ಈ ಹಿಂದಿನಿಂದಲೂ ನಡೆದುಕೊಂಡಿರುವ ಪದ್ಧತಿ. ಅಂತ ಸಿನಿಮಾಗಳ ಸಾಲಿಗೆ ಇದೀಗ ಮತ್ತೊಂದು ಸೇರ್ಪಡೆಯಾಗುತ್ತಿದೆ. ಪಾರ್ವತಮ್ಮ ರಾಜ್‌ಕುಮಾರ್ ಅವರ ತಮ್ಮನ ಮಗ ಸೂರಜ್ ‘ಅಖಿಲ್’ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರಲ್ಲಾ, ಆ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಲು ತಮಿಳು ನಟ ಭರತ್ ಬರುತ್ತಿದ್ದಾರೆ..

 

 

ಬಾಯ್ಸ್ ಹಾಗೂ ಕಾದಲ್ ಚಿತ್ರದ ಮೂಲಕ ಬಹಳಷ್ಟು ಖ್ಯಾತಿ ಗಳಿಸಿಕೊಂಡಿರುವ ಭರತ್ ‘ಅಖಿಲ್’ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡಲಿದ್ದಾರಂತೆ.. ಈಗಾಗಲೆ ಚಿತ್ರತಂಡ ಭರತ್ ಅವರನ್ನು ಭೇಟಿಯಾಗಿ ಒಪ್ಪಿಗೆ ಪಡೆದುಕೊಂಡಿದ್ದು ಅಧಿಕೃತವಾಗಿ ಅಷ್ಟೇ ಸುದ್ದಿ ಹೊರಬೀಳಬೇಕಾಗಿದೆ. ಉಳಿದಂತೆ ಶಾನ್ವಿ ಶ್ರೀವಾತ್ಸವ್ ನಾಯಕಿಯಾಗಿದ್ದಾರೆ. ಶಾನ್ವಿಗೆ ಇದು ಹೊಸ ರೀತಿಯ ಪಾತ್ರವಾಗರೀಲಿದ್ದು ಅದರ ಜೊತೆ ಎಂದಿನಂತೆ ಮುದ್ದುಮುದ್ದಾಗಿ ಕಾಣಿಸಿಕೊಳ್ಳಲಿದ್ದಾಳಂತೆ. ಈ ಚಿತ್ರದಲ್ಲಿ ಶಾನ್ವಿಗೆ ಹೊಸ ಲುಕ್ ಇರಲಿದೆಯಂತೆ.

ಅಂದಹಾಗೆ ಈ ಹಿಂದೆ ಕಥಾ ವಿಚಿತ್ರ ಚಿತ್ರದ ಮೂಲಕ ಗಮನ ಸೆಳೆದಿದ್ದ ಅನೂಪ್ ನಿರ್ದೇಶನ ಮಾಡುತ್ತಿದ್ದು ಇತ್ತೀಚಿಗಷ್ಟೇ ಮುಹೂರ್ತ ನೆರವೇರಿಸಿಕೊಂಡಿತ್ತು.. ಅಖಾಡಕ್ಕೆ ಇಳಿಯುವ ಮುನ್ನ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಚಿತ್ರತಂಡ ಆದಷ್ಟು ಬೇಗ ಟೀಮ್ ಸಮೇತ ಚಿತ್ರೀಕರಣಕ್ಕಿಳಿಯಲಿದೆಯಂತೆ. ಸದ್ಯ ನಾಯಕಿಯ ಪಾತ್ರ ಮಾತ್ರ ಫೈನಲ್ ಆಗಿದ್ದು ಉಳಿದಂತೆ ಚಿತ್ರದ ತಾರಾಗಣ ಮತ್ತು ತಾಂತ್ರಿಕ ಬಳಗದ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top