ಮನೋರಂಜನೆ

ಮತ್ತೆ ಮುಂದಕ್ಕೆ ಹೋಯ್ತು ‘ದಿ ವಿಲನ್’- ವರಮಹಾಲಕ್ಷ್ಮಿಯಿಂದ ಗೌರಿ ಗಣೇಶ ಹಬ್ಬಕ್ಕೆ ಶಿಫ್ಟ್.

ಸೆಟ್ಟೇರಿ ಎರಡು ವರ್ಷಗಳೇ ಕಳೆಯುತ್ತಾ ಬಂದಿದ್ದರೂ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಕ್ರಿಯೇಟ್ ಮೆಂಟೇನ್ ಮಾಡಿಕೊಂಡು ಬಂದಿರೋ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚಾಗುತ್ತಲೇ ಇದೇ. ಈಗಾಗಲೇ ಬಿಡುಗಡೆಯಾಗಿರೋ ಟೀಸರ್ ಮತ್ತು ಮೂರು ಹಾಡುಗಳ ಅಬ್ಬರವನ್ನು ಕಂಡು ಅನೇಕರು ಬೆಚ್ಚಿಬಿದ್ದಾರೆ.. ಸೆಟ್ಟೇರಿದಾಗಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದ ವಿಲನ್ ಚಿತ್ರಕ್ಕಾಗಿ ಪ್ರೇಕ್ಷಕರು ಕಾದು ಕಾದು ಸುಸ್ತೇದ್ದಿದ್ದಾದ್ದು ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳ ಕಾತರ ಮತ್ತು ತನ್ನ ವಿರುದ್ಧ ಹರಿದಾಡುತ್ತಿರುವ ಮೂದಲಿಕೆಯ ಮಾತುಗಳನ್ನೆಲ್ಲಾ ಥಂಡಾ ಹೊಡೆಸುವಂತೆ ಪ್ರೇಮ್ ಕೆಲಸ ಮಾಡುತ್ತಿದ್ದಾರೆ..

 

 

ಇಂಥಾ ‘ದಿ ವಿಲನ್’ ಸಿನಿಮಾವನ್ನು ಇದೇ ಆಗಸ್ಟ್ 24ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಗೆ ತರಲಾಗುವುದು ಎಂದು ಖುದ್ದು ನಿರ್ದೇಶಕ ಪ್ರೇಮ್ ಅವರೇ ಹೇಳಿಕೊಂಡಿದ್ದರು. ಅದಕ್ಕೆ ಪೂರಕವಾಗಿ ಚಿತ್ರಕ್ಕೆ ಸಂಭಂದಿಸಿದ ಕೆಲಸಗಳನ್ನು ಭೀರುಸಿನಿಂದ ನಡೆಸುತ್ತಿದ್ದರು ಆದರೆ ಕಾರಣಾಂತರಗಳಿಂದ ಚಿತ್ರದ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಈ ಹಬ್ಬದ ಬದಲಾಗಿ ಮುಂದಿನ ತಿಂಗಳು ಸೆಪ್ಟೆಂಬರ್ 13ರಂದು ಗೌರಿಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ..

ಸದ್ಯ ಶೂಟಿಂಗ್ ಅನ್ನು ಸಂಪೂರ್ಣವಾಗಿ ಮುಗಿಸಿಕೊಂಡಿರುವ ದಿ ವಿಲನ್ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ. ಅದಾಗಲೇ ಯೂಟ್ಯೂಬ ನಲ್ಲಿ ಮೂರು ಹಾಡುಗಳು ಲಾಂಚ್ ಆಗಿದ್ದು ಇದೀಗ ಪ್ರೇಮ್ ಅವರು ಹುಬ್ಬಳ್ಳಿ ಮತ್ತು ದೂರದ ದುಬೈ ಎರಡೂ ಕಡೆ ದೊಡ್ಡ ಮಟ್ಟದ ಆಡಿಯೋ ಸಮಾರಂಭಗಳನ್ನು ಆಯೋಜಿಸುವ ಪ್ಲಾನ್ ನಲ್ಲಿದ್ದಾರೆ. ಈ ಹಿಂದೆ ತಮಿಳಿನ ರಜಿನಿಕಾಂತ್ ಅವರ 2.0 ಚಿತ್ರದ ಆಡಿಯೊ ಬಿಡುಗಡೆಯಾದ ಸ್ಥಳದಲ್ಲಿಯೇ ದಿ ವಿಲನ್ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆಯಂತೆ.,ಈ ಸಂಭಂದ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಕೂಡ ನಡೆಸಿದ್ದು ಆದಷ್ಟು ಬೇಗ ಸಮಾರಂಭಗಳ ದಿನಾಂಕವನ್ನು ಘೋಷಿಸುತ್ತಾರಂತೆ.

 

 

ದಿ ವಿಲನ್ ಬಗ್ಗೆ ಹೇಳ್ಬೇಕಂದ್ರೆ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ಶಿವಣ್ಣನಿಗೆ ನಾಯಕಿಯಾಗಿ ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸುತ್ತಿದ್ದಾರೆ,,ಚಿತ್ರಕ್ಕೆ ಸಿ.ಮನೋಹರ್ ಬಂಡವಾಳ ಹಾಕಿದ್ದು ಅರ್ಜುನ್ಯ ಜನ್ಯರವರು ಸಂಗೀತ ಸಂಯೋಜನೆ ಮಾಡಿದ್ದಾರೆ…ಉಳಿದಂತೆ ಗಿರಿಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top