fbpx
ಭವಿಷ್ಯ

ವಾರ ಭವಿಷ್ಯ ಅಗಸ್ಟ್ 6 ನೇ ತಾರೀಖಿನಿಂದ 12 ನೇ ತಾರೀಖಿನವರೆಗೆ.

ಮೇಷ ರಾಶಿ 

 

 

ಪ್ರತಿಯೊಂದು ವಿಷಯದಲ್ಲಿಯೂ ಸಹ ಎಚ್ಚರ ವಹಿಸಬೇಕು. ರಾಜ ಸನ್ಮಾನದ ಯೋಗವಿದೆ, ಶತ್ರುಗಳ ಬಾಧೆ ,ಶತ್ರುಗಳು ಮಾಡುವ ಷಡ್ಯಂತ್ರಕ್ಕೆ ಬಲಿಯಾಗಬೇಕಾಗುತ್ತದೆ , ಮಾತಿನ ಚಕಮಕಿಯಿಂದ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ, ರಿಯಲ್ ಎಸ್ಟೇಟ್ ವ್ಯಾಪಾರ  ಮಾಡುತ್ತಿರುವವರಿಗೆ ಕಾರ್ಯ ಕ್ಷೇತ್ರದಲ್ಲಿ ಅಧಿಕ ಒತ್ತಡ ಕಾಣುತ್ತದೆ.

ಪರಿಹಾರ 

“ಓಂ ವಿಜಯ ಗಣಪತಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಮಂಗಳವಾರ ಗಣೇಶನಿಗೆ ಕಡಲೆಕಾಳನ್ನು ನೈವೇದ್ಯವಾಗಿ ಅರ್ಪಿಸಿ.

ವೃಷಭ ರಾಶಿ 

 

 

ಮೈಮರೆತು ಆಡಿದ ಮಾತಿಗೆ ಪಶ್ಚಾತ್ತಾಪವನ್ನು ಪಡಬೇಕಾಗುತ್ತದೆ, ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಪ್ರಗತಿ ,ನಂಬಿದ ಜನರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ, ರೋಗಭಾದೆ ,ಶರೀರದಲ್ಲಿ ಉಷ್ಣಾಂಶ ಮತ್ತು ಶೀತಾಂಶದ  ಸಮತೋಲನವನ್ನು ಕಾಪಾಡಿಕೊಳ್ಳಲು ಆಗುವುದಿಲ್ಲ, ತೀರ್ಥಯಾತ್ರೆ ದರ್ಶನ ಮಾಡುವ ಶುಭಯೋಗ.

ಪರಿಹಾರ 

“ಓಂ ನಮಃ ಶಿವಾಯ”ಎನ್ನುವ ಈ ಪಂಚಾಕ್ಷರಿ ಮಂತ್ರವನ್ನು ಪ್ರತಿನಿತ್ಯ 108 ಬಾರಿ ಜಪಿಸಿ , ಸೋಮವಾರ ಶಿವಾಲಯಕ್ಕೆ ಭೇಟಿ ನೀಡಿ ಬಿಲ್ವಾರ್ಚನೆಯನ್ನು ಮಾಡಿಸಿ.

ಮಿಥುನ ರಾಶಿ 

 

 

ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮಾನಸಿಕ ನೆಮ್ಮದಿ, ವಿವಿಧ ಮೂಲಗಳಿಂದ ಧನಾಗಮನವಾಗುತ್ತದೆ ,ಮನೆಯಲ್ಲಿ ಸಂತಸದ ವಾತಾವರಣ ಮೂಡುತ್ತದೆ,ಅನ್ಯರಲ್ಲಿ  ವೈಮನಸ್ಯ ಮಾಡಿಕೊಳ್ಳಬೇಕಾಗುತ್ತದೆ, ಅದ್ದರಿಂದ ಸ್ವಲ್ಪ ಎಚ್ಚರಿಕೆ ವಹಿಸಿ.

ಪರಿಹಾರ 

ಪ್ರತಿ ನಿತ್ಯ ಗೋ ಪೂಜೆಯನ್ನು ಮಾಡಿ , ಹಸು ಮತ್ತು ಕರುವಿಗೆ   ಬೆಲ್ಲ ಮತ್ತು ಬಾಳೆಹಣ್ಣನ್ನು ತಿನ್ನಿಸಿ, ದೀರ್ಘದಂಡ ನಮಸ್ಕಾರ ಮಾಡಿ .

ಕಟಕ ರಾಶಿ

 

 

ಗುರು ಹಿರಿಯರಲ್ಲಿ ಭಕ್ತಿ ಹೆಚ್ಚಾಗುತ್ತದೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ, ದುಷ್ಟರ ಸಹವಾಸ ಮಾಡಬೇಕಾಗುತ್ತದೆ, ಆದ್ದರಿಂದ ಸ್ವಲ್ಪ ಎಚ್ಚರಿಕೆ ವಹಿಸಿ, ಮಹಿಳೆಯರಿಗೆ ಶುಭ ,ಎಲ್ಲಿಯೇ ಹೋದರೂ ಅಶಾಂತಿ ನಿಮ್ಮನ್ನು ಕಾಡುತ್ತದೆ, ದೈವಿಕ ಚಿಂತನೆಯನ್ನು ಮಾಡುವ ವಾರವಾಗುತ್ತದೆ, ವಸ್ತ್ರಾಭರಣಗಳನ್ನು ಖರೀದಿ ಮಾಡುವಿರಿ.

ಪರಿಹಾರ 

“ಓಂ ಸರ್ವಸಿದ್ಧಿಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಅಂಧ ಮಕ್ಕಳಿಗೆ ಅನ್ನದಾನ ಮಾಡಿ .

ಸಿಂಹ ರಾಶಿ

 

 

ಸ್ಥಗಿತ ಕಾರ್ಯಗಳು ಮುನ್ನಡೆಯಾಗಲಿವೆ, ಸ್ಥಳ ಬದಲಾವಣೆಯನ್ನು ಮಾಡುವುದಕ್ಕೆ ಬಹಳಷ್ಟು ಓಡಾಟವನ್ನು ಮಾಡುತ್ತೀರ, ಉತ್ತಮ ಆದಾಯ ಆದರೂ ಕೂಡ ಮನಸ್ಸಿಗೆ ಏನೋ ಒಂದು ರೀತಿಯ ಬೇಸರ, ವಿರೋಧಿಗಳಿಂದ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಗಳಿವೆ, ಅಕಾಲ ಭೋಜನ ,ಕೆಲಸದಲ್ಲಿ ಒತ್ತಡ ಜಾಸ್ತಿಯಾಗಲಿದೆ.

ಪರಿಹಾರ 

“ಓಂ ನಮೋ ನಾರಾಯಣಾಯ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಿ.

ಕನ್ಯಾ ರಾಶಿ

 

 

ಈ ವಾರ ಯಾರು ದಿನಸಿ ವ್ಯಾಪಾರವನ್ನು ಮಾಡುತ್ತಿದ್ದೀರಾ ಅವರಿಗೆ ಬಹಳಷ್ಟು ಲಾಭ, ಹಿತ ಶತ್ರುಗಳ ಕಾಟ, ಯಾರನ್ನು ಒಳ್ಳೆಯವರು ಎಂದು ತಿಳಿದುಕೊಂಡಿರುತ್ತೀರಿ ಅವರಿಂದಲೇ ತೊಂದರೆಗೆ ಒಳಗಾಗುತ್ತೀರ, ಮಹಿಳೆಯರಿಗೆ ಬಹಳಷ್ಟು ಅನುಕೂಲವಾಗುವ ವಾರವಾಗಲಿದೆ, ಕೃಷಿಕರಿಗೆ ಲಾಭ, ಕುಟುಂಬ ಸೌಖ್ಯ, ಅನಿರೀಕ್ಷಿತ ಧನಾಗಮನ, ತೀರ್ಥಕ್ಷೇತ್ರಕ್ಕೆ ಪ್ರಯಾಣ ಮಾಡುವ ಶುಭಯೋಗ .

ಪರಿಹಾರ 

ಹನುಮಾನ್ ಚಾಲೀಸವನ್ನು ಪ್ರತಿನಿತ್ಯ ಪಾರಾಯಣವನ್ನು ಮಾಡಿ, ನಾಟಿ ತುಳಸಿಯಿಂದ ಮಂಗಳವಾರ ಆಂಜನೇಯನಿಗೆ ಅರ್ಚನೆಯನ್ನು ಮಾಡಿ, ದೀರ್ಘದಂಡ ನಮಸ್ಕಾರವನ್ನು ಮಾಡಿ.

ತುಲಾ ರಾಶಿ 

 

 

ಈ ವಾರ ವೈವಾಹಿಕ ಜೀವನದಲ್ಲಿ ನೆಮ್ಮದಿ ಸಿಗಲಿದೆ, ಅವಿವಾಹಿತರಿಗೆ ವಿವಾಹ ಯೋಗ ,ವಿಪರೀತ ಖರ್ಚು, ಮನಸ್ಸಿನಲ್ಲಿ ಕೆಟ್ಟ ಕೆಟ್ಟ ಅಲೋಚನೆಯನ್ನು ಮಾಡುವಿರಿ, ಇಲ್ಲಸಲ್ಲದ ಅಪವಾದಗಳು ನಿಮ್ಮ ಮೇಲೆ ಬರಲಿವೆ, ಉದ್ಯೋಗದಲ್ಲಿ ತೊಂದರೆ, ಶತ್ರುಗಳ ನಾಶ ಕಂಡುಬರಲಿದೆ.

ಪರಿಹಾರ

ಪ್ರತಿನಿತ್ಯ ಲಲಿತ ಸಹಸ್ರನಾಮವನ್ನು ಪಾರಾಯಣ ಮಾಡಿ, ಶುಕ್ರವಾರ 8 ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮವನ್ನು ಕೊಟ್ಟು ನಮಸ್ಕಾರವನ್ನು ಮಾಡಿ.

ವೃಶ್ಚಿಕ ರಾಶಿ 

 

 

ನೀವಾಡುವ ಮಾತಿನಿಂದ ಕಲಹಗಳು ಉಂಟಾಗಲಿವೆ, ಪರಸ್ಥಳ ವಾಸ ,ಯಾರ್ಯಾರು ವಾಹನ ಚಾಲನೆಯನ್ನು ಮಾಡುತ್ತಿದ್ದೀರ ಅವರಿಗೆ ಅಪಘಾತಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ, ಆದ್ದರಿಂದ ಎಚ್ಚರಿಕೆಯಿಂದ ವಾಹನವನ್ನು ಚಾಲನೆ ಮಾಡಿ, ವ್ಯವಹಾರದಲ್ಲಿ ಮೋಸದ ಜಾಲದಲ್ಲಿ ಬೀಳುವ ಸಾಧ್ಯತೆಗಳು ಹೆಚ್ಚಾಗಿವೆ, ಯಾರ ಬಳಿಯೂ ಕೂಡ ವ್ಯವಹಾರವನ್ನು ಮಾಡಬೇಡಿ, ದಾಂಪತ್ಯದಲ್ಲಿ ಪ್ರೀತಿ, ವಾತ್ಸಲ್ಯ ಅಧಿಕವಾಗಲಿದೆ.

ಪರಿಹಾರ 

ಪ್ರತಿನಿತ್ಯ ಸೂರ್ಯ ನಮಸ್ಕಾರವನ್ನು ಮಾಡಿ ಪಕ್ಷಿಗಳಿಗೆ ಧಾನ್ಯವನ್ನು ಹಾಕಿ .

ಧನಸ್ಸು ರಾಶಿ

 

 

ಬೆಲೆಬಾಳುವ ವಸ್ತುಗಳ ಖರೀದಿಯನ್ನು ಮಾಡುವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿಯನ್ನು ಮಾಡುವಿರಿ, ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಲಭಿಸಲಿದೆ, ಮಂಗಳ ಕಾರ್ಯದಲ್ಲಿ ಭಾಗಿಯಾಗುವ ಶುಭಯೋಗ ಹೆಚ್ಚಾಗಿ ಕಂಡುಬರುತ್ತದೆ, ಉತ್ತಮ ಬುದ್ಧಿಶಕ್ತಿ ನಿಮ್ಮ ಶರೀರದಲ್ಲಿ ಉತ್ಪತ್ತಿಯಾಗುತ್ತದೆ, ಅದನ್ನು ಸದುಪಯೋಗವನ್ನು ಪಡಿಸಿಕೊಳ್ಳಿ.

ಪರಿಹಾರ 

ಪ್ರತಿನಿತ್ಯ “ ಓಂ ಗಂ ಗಣಪತಯೇ ನಮಃ”ಈ ಮಂತ್ರವನ್ನು 54 ಬಾರಿ ಜಪಿಸಿ, ಮಂಗಳವಾರ ಗಣೇಶನಿಗೆ 21 ನಮಸ್ಕಾರಗಳನ್ನು ಮಾಡಿ.

ಮಕರ ರಾಶಿ

 

 

ಈ ವಾರ ಮಾತಾ ಪಿತೃವಿನಲ್ಲಿ ಕಲಹಗಳನ್ನು ಮಾಡಿಕೊಳ್ಳುವ ಸಾಧ್ಯತೆಗಳಿವೆ, ಸ್ವಲ್ಪ ಜಾಗರೂಕತೆಯನ್ನು ವಹಿಸಿ, ತಾಳ್ಮೆ ಅತ್ಯಗತ್ಯ , ಪರ ಸ್ತ್ರೀಯರಿಂದ ತೊಂದರೆಗೆ ಒಳಗಾಗಬೇಕಾಗುತ್ತದೆ, ಎಲ್ಲೋ ಒಂದು ಕಡೆ ದಂಡವನ್ನು ಕಟ್ಟಬೇಕಾಗುತ್ತದೆ, ಜಾಗ್ರತೆಯನ್ನು ವಹಿಸಿ ,ಪಿತ್ರಾರ್ಜಿತ ಆಸ್ತಿ ಗಳಿಕೆ ಮಾಡುವ ವಾರವಾಗುತ್ತದೆ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವಿಜ್ಞಗಳನ್ನು ಅನುಭವಿಸಬೇಕಾಗುತ್ತದೆ, ಅಧಿಕ ತಿರುಗಾಟವನ್ನು ಮಾಡುತ್ತೀರ.

ಪರಿಹಾರ

“ಓಂ ನಮೋ ನಾರಾಯಣಾಯ ನಮಃ ” ಈ ಮಂತ್ರವನ್ನು 21 ಬಾರಿ ಜಪಿಸಿ, ಮಂಗಳವಾರ ಸುಬ್ರಮಣ್ಯನಿಗೆ  ದೀರ್ಘದಂಡ ನಮಸ್ಕಾರವನ್ನು ಮಾಡಿ.

ಕುಂಭ ರಾಶಿ

 

 

ಈ ವಾರ ಪಾಲುದಾರಿಕೆಯ  ವ್ಯವಹಾರದ ಬಗ್ಗೆ ಮಾತುಕತೆ, ಮಾನಸಿಕ ಒತ್ತಡ ಉಂಟಾಗಲಿದೆ ,ಮಿತ್ರರಿಂದ ಸಹಾಯವನ್ನು ಪಡೆಯುವಿರಿ, ಮಾಡುವ ಕೆಲಸ ಕಾರ್ಯಗಳಲ್ಲಿ ವಿಜ್ಞವನ್ನು ಅನುಭವಿಸಬೇಕಾಗುತ್ತದೆ, ಅನ್ಯ ಜನರಲ್ಲಿ ವೈಮನಸ್ಯ,ನಿಮ್ಮ ಸ್ನೇಹಿತರಿಂದ ಸಲಹೆಯನ್ನು ಪಡೆದುಕೊಳ್ಳಿ ಮತ್ತು ಅದನ್ನು ಸ್ವೀಕರಿಸುವುದು ಉತ್ತಮ.

ಪರಿಹಾರ

“ಓಂ ದುರ್ಗಾಯೇ ನಮಃ” ಈ ಮಂತ್ರವನ್ನು 108 ಬಾರಿ ಜಪಿಸಿ, ಶುಕ್ರವಾರ ದುರ್ಗಾದೇವಿಗೆ ರಾಹುಕಾಲದಲ್ಲಿ 21 ನಿಂಬೆಹಣ್ಣಿನ ದೀಪವನ್ನು ಹಚ್ಚಿ ,ನಮಸ್ಕಾರವನ್ನು ಮಾಡಿ.

ಮೀನ ರಾಶಿ

 

 

ಹೊಗಳಿಕೆಯ ಮಾತಿಗೆ ಮರುಳಾಗಬೇಡಿ, ಸ್ವಲ್ಪ ಜಾಗ್ರತೆಯನ್ನು ವಹಿಸಿರಿ, ಹಿರಿಯರ ಭಾವನೆಗಳಿಗೆ ಸ್ಪಂದಿಸುವುದು ಅಗತ್ಯ, ಅನವಶ್ಯಕ ದ್ವೇಷ ಸಾಧನೆಯನ್ನು ಮಾಡುವಿರಿ, ಇದರಿಂದ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ,  ದಾಂಪತ್ಯದಲ್ಲಿ ಪ್ರೀತಿ ವಾತ್ಸಲ್ಯ ಅಧಿಕವಾಗುತ್ತದೆ, ಸುಖ ಭೋಜನ ಪ್ರಾಪ್ತಿ.

ಪರಿಹಾರ

ವೃದ್ಧರಿಗೆ  ಪಾದಪೂಜೆಯನ್ನು ಮಾಡಿ ಸ್ವಯಂ ಪಾಕವನ್ನು ನೀಡಿ ಆಶೀರ್ವಾದವನ್ನು ಪಡೆಯಿರಿ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top