ಸಮಾಚಾರ

ಇದು ಮೇಕಪ್ ಜಾದು- ಹಂಗಿರೋಳು ಹಿಂಗಾಗೋ ಈ ವೈರಲ್ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತಿರಾ.

ಇದು ಮೇಕಪ್ ಮಾಯೆಯ ಅಸಲಿ ಚಮತ್ಕಾರ., ಅದೆಷ್ಟೇ ಕುರೂಪಿಯಾಗಿದ್ದರೂ ಸರಿ ಮೇಕಪ್ ಮಾಡಿಕೊಳ್ಳೋ ಮೂಲಕ ತಾವೂ ಸುಂದರವಾಗಿದ್ದೇವೆ ಎಂದು ಸಮಾಧಾನ ಪಟ್ಟಿಕೊಳ್ಳೋ ಮಂದಿಯ ಸಂಖ್ಯೆ ಹೆಚ್ಚಾಗಿಯೇ ಇದೇ. ಇದುವರೆಗೆ ಮೇಕಪ್’ಗೆ ಸಂಭಂದಿಸಿದಂತೆ ಅನೇಕ ಬ್ಯುಟಿ ಟಿಪ್ಸ್, ಬ್ಯುಟಿ ಟ್ರಿಕ್ಸ್ ವಿಡಿಯೋಗಳನ್ನು ನೋಡಿರುತ್ತೀರಾ ಆದರೆ ಚೀನಾದ ಈ ಹುಡುಗಿ ಮೇಕಪ್ ಮಾಡಿಕೊಳ್ಳೋ ವಿಡಿಯೋವನ್ನ ನೀವು ನೋಡಿದ್ರೆ ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬೀಳೋದು ಗ್ಯಾರಂಟೀ.

 

 

ಸಾಮಾನ್ಯವಾಗಿ ಚೀನಾ ಪ್ರಾಡಕ್ಟ್ ಎಂದರೆ ಅವು ಗುಣಮಟ್ಟ ಕಡಿಮೆಯಾಗಿರುತ್ತವೆ ಎಂಬ ವಾದ ಸದಾ ಚಾಲ್ತಿಯಲ್ಲಿವೆ. ಇದೀಗ ಚೀನಾ ಹುಡುಗಿಯರ ಸೌಂದರ್ಯ ಕೂಡ ಫೇಕ್ ಎನ್ನುವ ಮನಸ್ಥಿತಿಗೆ ನೆಟ್ಟಿಗರು ತಲುಪಿದ್ದಾರೆ. ಏಕೆಂದರೆ ಚೀನಾ ದೇಶದ ಯುವತಿಯೊಬ್ಬಳು ಆಧುನಿಕ ಮೇಕಪ್ ಸಲಕರಣೆಗಳಿಂದ ಏನೇನೋ ಟ್ರಿಕ್ಸ್ ಬಳಸಿ ತನ್ನ ರೂಪವನ್ನೇ ಬದಲಾಯಿಸಿಕೊಳ್ಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈವರೆಗೂ ಆ ವಿಡಿಯೋ ನಲವತ್ತು ಲಕ್ಷ ಮಂದಿ ವೀಕ್ಷಿಸಿದ್ದಾರೆ. ಕೃತಕ​​ ಮೂಗು ಅಂಟಿಸಿಕೊಂಡು, ಹಣೆ ಮತ್ತು ಕೆನ್ನೆಗೆ ಎಂಥದೋ ಟೇಪ್​ ಅಂಟಿಸಿಕೊಳ್ಳೋ ಮೂಲಕ ತನ್ನ ಮುಖದ ಆಕಾರವನ್ನೇ ಸಂಪೂರ್ಣವಾಗಿ ಬದಲಾಯಿಸಿಕೊಳ್ಳುತ್ತಾಳೆ. ನಂತರ ಮೂರ್ನಾಲ್ಕು ರೀತಿಯ ಕ್ರೀಮು ಪೌಡರುಗಳನ್ನು ಮುಖಕ್ಕೆ ಮೆತ್ತಿಕೊಂಡು ಉಜ್ಜುತ್ತಾಳೆ.

ನಂತರ ಕಣ್ಣಿಗೆ ಕಾಜಲ್, ತುಟಿಗೆ ಲಿಪ್ ಸ್ಟಿಕ್ ಹಾಕಿಕೊಂಡು ಮೇಕಪ್ ನಿಂದ ಒಂದು ಹುಡುಗಿಯ ಆಕಾರವನ್ನೇ ಬದಲಾಯಿಸಬಹುದು ಎಂದು ತೋರಿಸುತ್ತಾಳೆ. ಬಳಿಕ ಮೇಕಪ್​ನಿಂದ ಇದೇ ಹುಡುಗಿಯೇ ಹೇಗೆ ಸಂಪೂರ್ಣ ತನ್ನ ಆಕಾರವನ್ನು ಬದಲಾಯಿಸಿಕೊಂಡಳು ಎಂಬುದನ್ನು ಸಾಬೀತು ಪಡಿಸಲು ತಾನು ಮಾಡಿಕೊಂಡಿದ್ದ ಮೇಕಪ್’ನೆಲ್ಲಾ ​ಒಂದೊಂದಾಗಿ ತೆಗೆದು, ಅಂಟಿಸಿಕೊಂಡಿದ್ದ ಮೂಗನ್ನು ಕತ್ತರಿಯಿಂದ ಕಳಚಿ ತೋರಿಸುತ್ತಾಳೆ.

ಈ ಮೇಕಪ್ ಮಾಯಾಂಗನೆಯ ವಿಡಿಯೋವನ್ನು ನೀವು ಒಮ್ಮೆ ನೋಡಿ ಬಿಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top