ಮನೋರಂಜನೆ

ಭುಗಿಲೇಳುವ ಮುನ್ನವೇ ಬಗೆಹರಿಯಿತು ಯಶ್ ಸಿನಿಮಾ ಟೈಟಲ್ ವಿವಾದ- ಬದಲಾಯ್ತು ‘ಕಿರಾತಕ2’ ಚಿತ್ರದ ಟೈಟಲ್.

ಎರಡು ವರ್ಷಗಳಿಂದಲೂ ತಮ್ಮ ನೆಚ್ಚಿನ ನಟನ ಯಾವ ಸಿನಿಮಾವನ್ನೂ ನೋಡದೆ ಕಂಗಾಲಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇದು ಪಕ್ಕಾ ಬೊಂಬಾಟ್ ಸುದ್ದಿ. ಏಕೆಂದರೆ ಇದೆ ಆಗಸ್ಟ್ 24ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಸೆಟ್ಟೇರುತ್ತಿದೆ. ಸದ್ಯ ಕಳೆದೆರಡು ಬಹುನಿರೀಕ್ಷಿತ ಕೆಜಿಎಫ್ ಚಿತ್ರದಲ್ಲಿಯೇ ಬ್ಯುಸಿಯಾಗಿರುವ ಯಶ್ ಅದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳತ್ತ ಮುಖಮಾಡಿಲ್ಲ. ಆದರೆ ಕೆಜಿಎಫ್ ಮುಗಿದ ಕೂಡಲೇ ಸಾಲು ಸಾಲು ಚಿತ್ರಗಲ್ಲಿ ಬ್ಯುಸಿಯಾಗಲಿದ್ದು ಈ ಮೂಲಕ ಕಳೆದೆರಡು ವರ್ಷಗಳಿಂದ ಯಾವುದೇ ಚಿತ್ರಗಳಿಲ್ಲದೆ ನಿರಾಸೆಗೊಂಡಿದ್ದ ತಮ್ಮ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ ನೀಡುತ್ತಿದ್ದಾರೆ.

 

 

ಕೆಜಿಎಫ್ ನಂತರ ಅನಿಲ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಯಶ್ ತೊಡಗಿಸಿಕೊಳ್ಳಲಿದ್ದಾರಂತೆ. ಈ ಹೊಸ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೆಟ್ಟೇರಲಿದೆ ಎನ್ನಲಾಗಿದ್ದು. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ… ಆರಂಭದಲ್ಲಿ ಈ ಚಿತ್ರಕ್ಕೆ ಕಿರಾತಕ-2 ಚಿತ್ರ ಇಡಲಾಗಿದೆ ಎಂದು ಸುದ್ದಿಯಾಗಿತ್ತು ಆದರೆ ಆ ಟೈಟಲ್ ಕಿರಾತಕ ಸಿನಿಮಾ ನಿರ್ದೇಶಿಸಿದ್ದ ಪ್ರದೀಪ್ ರಾಜ್ ಅವರ ಬಳಿ ಇರುವುದರಿಂದ ಯಶ್ ಚಿತ್ರಕ್ಕೆ “ಮೈ ನೇಮ್ ಇಸ್ ಕಿರಾತಕ” ಎಂದು ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಪ್ರದೀಪ್ ರಾಜ್ ‘ಕಿರಾತಕ 2′ ಟೈಟಲ್ ನಮ್ಮ ಬ್ಯಾನರ್’ನಲ್ಲಿ ರಿಜಿಸ್ಟರ್ ಆಗಿದೆ ಎಂದು ‘ಬೇರೊಬ್ಬ ನಟನನ್ನು ಹಾಕಿಕೊಂಡು ನಾನೇ ಕಿರಾತಕ-2 ಸಿನಿಮಾವನ್ನು ತೆಗೆಯುತ್ತಿದ್ದೇನೆ ಎಂದು ಹೇಳಿದ್ದರು. ಇದೀಗ ಯಶ್ ಅವರ ಸಿನಿಮಾ ಕೂಡ ‘ಕಿರಾತಕ-2’ ಎಂದು ಸುದ್ದಿಯಾಗಿದ್ದರಿಂದ ಟೈಟಲ್ ವಿಚಾರವಾಗಿ ವಿವಾದವಾಗೋ ಲಕ್ಷಣ ಗೋಚರಿಸಿತ್ತು. ಈ ವಿವಾದವನ್ನು ಭುಗಿಲೇಳುವ ಮುಂಚೆಯೇ ಎಚ್ಚೆತ್ತುಕೊಂಡಿರುವ ಚಿತ್ರತಾಣದ ತಮ್ಮ ಚಿತ್ರಕ್ಕೆ ‘ಮೈ ನೇಮ್ ಇಸ್ ಕಿರಾತಕ’ ಎಂದು ನಾಮಕರಣ ಮಾಡಿದ್ದಾರೆ. ಎಂಬುದಾಗಿ ದೂರಿದ್ದರು. ಜಯಣ್ಣ ಫಿಲಂಸ್‍ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಯಶ್ ಜೊತೆಗೆ ಇಬ್ಬರು ನಾಯಕಿಯರಿರಲಿದ್ದು ಅವರ ಆಯ್ಕೆಯೂ ಅದಾಗಲೇ ಫೈನಲ್ ಆಗಿದೆ. ಮೈಸೂರು ಸುತ್ತ ಮುತ್ತ ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಯಲಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top