ಮನೋರಂಜನೆ

ಯಶ್ ಫ್ಯಾನ್ಸ್’ಗೆ ಬೊಂಬಾಟ್ ನ್ಯೂಸ್- ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರುತ್ತೆ ಅಣ್ತಮ್ಮನ ಹೊಸ ಸಿನಿಮಾ.

ಎರಡು ವರ್ಷಗಳಿಂದಲೂ ತಮ್ಮ ನೆಚ್ಚಿನ ನಟನ ಯಾವ ಸಿನಿಮಾವನ್ನೂ ನೋಡದೆ ಕಂಗಾಲಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಇದು ಪಕ್ಕಾ ಬೊಂಬಾಟ್ ಸುದ್ದಿ. ಏಕೆಂದರೆ ಇದೆ ಆಗಸ್ಟ್ 24ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಸೆಟ್ಟೇರುತ್ತಿದೆ. ಸದ್ಯ ಕಳೆದೆರಡು ಬಹುನಿರೀಕ್ಷಿತ ಕೆಜಿಎಫ್ ಚಿತ್ರದಲ್ಲಿಯೇ ಬ್ಯುಸಿಯಾಗಿರುವ ಯಶ್ ಅದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳತ್ತ ಮುಖಮಾಡಿಲ್ಲ. ಆದರೆ ಕೆಜಿಎಫ್ ಮುಗಿದ ಕೂಡಲೇ ಸಾಲು ಸಾಲು ಚಿತ್ರಗಲ್ಲಿ ಬ್ಯುಸಿಯಾಗಲಿದ್ದು ಈ ಮೂಲಕ ಕಳೆದೆರಡು ವರ್ಷಗಳಿಂದ ಯಾವುದೇ ಚಿತ್ರಗಳಿಲ್ಲದೆ ನಿರಾಸೆಗೊಂಡಿದ್ದ ತಮ್ಮ ಅಭಿಮಾನಿಗಳಿಗೆ ಸುಗ್ಗಿ ಸಂಭ್ರಮ ನೀಡುತ್ತಿದ್ದಾರೆ.

 

 

ಕೆಜಿಎಫ್ ಮುಗಿದ ಕೂಡಲೇ ಯಶ್ ಅವರು ಹರ್ಷ ನಿರ್ದೇಶನದ ‘ರಾಣಾ’, ಹಾಗೇ ರ್ಯಾಂಬೋ-2 ಖ್ಯಾತಿಯ ಅನಿಲ್ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ಮತ್ತು ಮಫ್ತಿ ಖ್ಯಾತಿಯ ನರ್ತನ್ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸುತ್ತಾರೆ ಎಂಬ ಸುದ್ದಿಯಂತೂ ನಿಕ್ಕಿಯಾಗಿರುವ ವಿಚಾರ ಎಲ್ಲರಿಗೂ ಗೊತ್ತು. ಆದರೆ ಈ ಮೂರು ಚಿತ್ರಗಳಲ್ಲಿ ಮೊದಲು ಯಾವ ಚಿತ್ರ ಪ್ರಾರಂಭವಾಗುತ್ತದೆ ಎಂಬುದರ ಬಗ್ಗೆ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದರು.

ಆದರೆ ಈ ಗೊಂದಲಕ್ಕೆ ಇದೀಗ ತೆರೆ ಬಿದ್ದಿದ್ದು ಕೆಜಿಎಫ್ ನಂತರ ಅನಿಲ್ ಕುಮಾರ್ ನಿರ್ದೇಶನದ ಚಿತ್ರದಲ್ಲಿ ಯಶ್ ತೊಡಗಿಸಿಕೊಳ್ಳಲಿದ್ದಾರಂತೆ. ಈ ಹೊಸ ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸೆಟ್ಟೇರಲಿದೆ ಎನ್ನಲಾಗಿದ್ದು ಮುಹೂರ್ತದಂದೇ ಟೈಟಲ್ ಲಾಂಚ್ ಆಗಲಿದೆಯಂತೆ. ಚಿತ್ರಕ್ಕೆ ‘ಕಿರಾತಕ-2’ ಎಂದು ಹೆಸರಿಡುವ ಸಾಧ್ಯತೆಗಳಿವೆ. ಅಧಿಕೃತವಾಗಿ ಟೈಟಲ್ ಘೋಷಣೆಯಾಗಲು ಕಾಯಲಾಗುತ್ತಿದೆ. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ..

ಅಂದಹಾಗೆ ಯಶ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದೆ ಕಿರಾತಕ, ರಾಜಾಹುಲಿ, ಡ್ರಾಮಾದಂತಹ ಪಾತ್ರಗಳು. ಹಾಗಾಗಿ ಅದೇ ರೀತಿಯ ಪಾತ್ರದಲ್ಲಿ ಮತ್ತೊಮ್ಮೆ ಅವರು ಕಾಣಿಸಿಕೊಳ್ಳಬೇಕು ಎಂಬುದು ಅಭಿಮಾನಿಗಳ ಆಸೆಯಾಗಿತ್ತು. ಇದೀಗ ಐದು ವರ್ಷಗಳ ಅಭಿಮಾನಿಗಳ ಆಸೆ ಈಡೇರುತ್ತಿದೆ. ಹರ್ಷ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದು ನರ್ತನ್ ಕೂಡ ಈಗಿನ್ನು ಕಥೆ ಸಿದ್ದಪಡಿಸುಪತ್ತಿರುವ ಹಿನ್ನೆಲೆಯಲ್ಲಿ ಯಶ್ ಅವರು ಅನಿಲ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top