ಸಮಾಚಾರ

ವಿಷ್ಣು ಸಾವಿನ ದಿನ ಅಂಬಿ ಆಡಿದ ಆ ಮಾತನ್ನ ಸಾಧುಕೋಕಿಲ ಇನ್ನೂ ಮರೆತಿಲ್ಲ

ಡಾ.ವಿಷ್ಣುವರ್ಧನ್ ಅವರು ಕನ್ನಡ ಸಿನಿಮಾ ರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಹಸ ಸಿಂಹ, ಅಭಿನಯ ಬಾರ್ಗವ, ಮೈಸೂರು ರತ್ನ ಎಂಬ ಬಿರುದು ಪಡೆದಿದ್ದಾರೆ.

ಸಾಹಸ ಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಸುಮಾರು ಏಳು ವರ್ಷಗಳಾಗಿವೆ. ಸಾಹಸ ಸಿಂಹ ಡಾ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಇಬ್ಬರು ಆಪ್ತ ಸ್ನೇಹಿತರಾಗಿದ್ದರು. ಆದರೆ ವಿಧಿಯ ಆಟ ವಿಷ್ಣುವರ್ಧನ್ ಅವರನ್ನು ಬೇಗ ಕರೆಸಿಕೊಂಡು ಬಿಟ್ಟಿತು. ಆ ಸಮಯದಲ್ಲಿ ಅಂಬರೀಷ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ಸಮಯದಲ್ಲಿ ಅಂಬರೀಶ್ ಅವರನ್ನ ಹತ್ತಿರದಿಂದ ಕಂಡಿದ್ದ ಸಾಧು ಕೋಕಿಲ ಅವರು ಡಾ ವಿಷ್ಣುವರ್ಧನ್ ಮತ್ತು ಅಂಬರೀಶ್ ರವರದ್ದು ಎಂತಹ ಸ್ನೇಹ ಎಂಬುದನ್ನು ಇತ್ತೀಚಿಗೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಬಹಿರಂಗ ಮಾಡಿದ್ದಾರೆ.

 

 

ಇತ್ತೀಚಿಗೆ ನಡೆದ ‘ಕನ್ನಡ ಕೋಗಿಲೆ’ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಅವರು ದಿಗ್ಗಜರು ಸಿನಿಮಾ ಹಾಡು ಹಾಡಿದರು, ನಂತರ ಮಾತನಾಡಿ ಇದು ಬರೀ ಹಾಡಲ್ಲ ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಗೆಳೆತನದ ಮೇಲೆ ನಿಂತಿರುವ ಹಾಡು ಎಂದು ಬಣ್ಣಿಸಿದರು. ಅಂಬರೀಶ್ ರವರು ವಿಷ್ಣುವರ್ಧನ ಅವರಿಗೆ ಒಂದು ರೀತಿಯ ಬಾಡಿಗಾರ್ಡ್ ಹೌದು, ಪ್ರಾಣ ಸ್ನೇಹಿತನೂ ಹೌದು ಎಂದು ಸಾಧು ಕೇಳಿದ್ದಾರೆ.

ಕೆಂಗೇರಿ ಸಮೀಪದ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಭಾವುಕರಾಗಿದ್ದ ಅಂಬರೀಷ್ ಅವರು ಆ ಸ್ಥಳದಿಂದ ನೂರು ಅಡಿ ಹಿಂದೆ ಒಂದು ಮಾತನ್ನು ಹೇಳಿದ್ದರು. ”ಏನೋ ನನ್ನ ಬಿಟ್ಟು ಹೋಗ್ತಿದ್ದೀಯಾ ನೀನು, ಹೆಂಗೋ ಬಿಟ್ಟೋಗ್ತೀಯಾ ನೀನು. ನಡಿ ನಾನು ಬರ್ತೀನಿ, ನಿನ್ನ ಬಿಟ್ಟು ಇರಲ್ಲ” ಅಂತ ಹೇಳಿದರು ಎಂದು ಸಾಧು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top