ಸಮಾಚಾರ

ಟಿ-20 ಹೊಸ ದಾಖಲೆ- ಕೇವಲ 16ಓವರ್’ಗಳಲ್ಲೇ ಹರಿದುಬಂತು 222 ರನ್ನು

ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಆರೋನ್ ಫಿಂಚ್ ಅವರು ಇಂಗ್ಲೆಂಡ್ ಟಿ20 ಬ್ಲಾಸ್ಟ್ ಲೀಗ್ ನಲ್ಲಿ ಸ್ಪೋಟಕ ಶತಕ ಸಿಡಿಸಿ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ. ಇತ್ತೀಚಿಗೆ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಕೇವಲ 76 ಎಸೆತಗಳಲ್ಲಿ 172 ರನ್ ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

 

 

ಆರೋನ್ ಫಿಂಚ್ ರವರು ಟಿ20 ಬ್ಲಾಸ್ಟ್ ನಲ್ಲಿ ಸರ್ರೆ ಪರ ಆಡುತ್ತಿದ್ದು, ಈ ಲೀಗ್ ನಲ್ಲಿ ಈಗಾಗಲೇ 2 ಶತಕ ಸಿಡಿಸಿದ್ದಾರೆ. ಮಿಡ್ಲ್  ವಿರುದ್ಧದ ಪಂದ್ಯದಲ್ಲಿ 45 ಎಸೆತಗಳಲ್ಲಿ ಶತಕ ಪೂರೈಸಿದ ಫಿಂಚ್, 52 ಎಸೆತಗಳಲ್ಲಿ 117 ರನ್ ಬಾರಿಸಿ 222 ರನ್ ಗಳ ಬೃಹತ್ ಟಾರ್ಗೆಟ್ ಅನ್ನು ಕೇವಲ 16 ಓವರ್ ಗಳಲ್ಲಿ ಮುಗಿಸಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಆರೋನ್ ಫಿಂಚ್ ಜೊತೆ ಬ್ಯಾಟಿಂಗ್ ಮಾಡಿದ ಇನ್ನೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ಜಾಸನ್ ರಾಯ್ 37 ಎಸೆತಗಳಲ್ಲಿ 7 ಬೌಂಡರಿ,7 ಸಿಕ್ಸರ್ ಸಹಿತ 84 ರನ್ ಸಿಡಿಸಿದರು. ಈ ಟೂರ್ನಿಯಲ್ಲಿ 6 ಪಂದ್ಯವಾಡಿರುವ 240 ಎಸೆತಗಳಲ್ಲಿ 462 ರನ್​ಗಳಿಸಿದ್ದಾರೆ. 192.50 ಸ್ಟ್ರೈಕ್ ರೇಟ್​ನಲ್ಲಿ 2 ಶತಕ, 2 ಅರ್ಧಶತಕ ಸಿಡಿಸಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top