ಸಮಾಚಾರ

ಈ ಮೀನಿನ ಬೆಲೆ ಎಷ್ಟು ಗೊತ್ತಾ ,ಕೇಳಿದ್ರೆ ಖಂಡಿತಾ ಅಯ್ಯೋಯೋ ಅಷ್ಟ ಅಂತೀರಾ .

ಮುಂಬೈ ಸಮುದ್ರದಲ್ಲಿ ಸಿಕ್ಕಿದ್ದ ಆ ಮೀನು. ‘ಗೋಲ್’ ಜಾತಿಯ ಮೀನು. ಮುಂಬೈ ನಗರದ ಪಾಲ್ಘರ್ ಕಡಲತೀರದಲ್ಲಿ ಮೀನು ಹಿಡಿಯುತ್ತಿದ್ದ ಮೀನುಗಾರನ ಬಲೆಗೆ ಬಿದ್ದಿತ್ತು. ಇದರಲ್ಲೇನು ವಿಶೇಷ ಎಂದು ಹುಬ್ಬೇರಿಸಬೇಡಿ. ಒಳ್ಳೆ ಜಾತಿ ಮೀನಿನ ಬೆಲೆ ಎಷ್ಟು ಎಂದು ಪ್ರಶ್ನೆ ಕೇಳಿದರೆ ಸಾವಿರದೊಳಗೊಂದು ಸಂಖ್ಯೆ ಹೇಳ್ತೇವೆ. ಆದರೆ ಈ ಮೀನು 5.5 ಲಕ್ಷ ರೂಪಾಯಿಗೆ ಮಾರಾಟ ಆಗಿದೆ ಈ ಕಡಲತೀರದಲ್ಲಿ ಬಲೆಗೆ ಬಿದ್ದ ಅತ್ಯಂತ ದುಬಾರಿ ಮೀನು ಎಂಬ ಹೆಗ್ಗಳಿಗೆ ಈ ಮೀನಿನದ್ದು.

ಮೂಲಗಳ ಮಾಹಿತಿ ಪ್ರಕಾರ ಈ ಮೀನು 30 ಕೆಜಿ ತೂಕ ಇತ್ತು ಎನ್ನಲಾಗಿದೆ. ಈ ಮೀನು ಮಹೇಶ್ ಮೆಹೆರ್ ಮತ್ತು ಸಹೋದರ ಭರತ್ ಎಂಬವರ ಬಲೆಗೆ ಬಿದ್ದಿದೆ. ಕಳೆದ ಶುಕ್ರವಾರ ತಮ್ಮ ಪುಟ್ಟ ದೋಣಿ ‘ಲಕ್ಷ್ಮಿ’ಯಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ತೆರಳಿ ರವಿವಾರ ಮುರ್ಬ್ ತೀರಕ್ಕೆ ವಾಪಾಸ್ ಮರಳುತ್ತಿದ್ದಾಗ ಅವರ ಪಾಲಿನ ಅದೃಷ್ಟಲಕ್ಷ್ಮಿಯಾಗಿ ಬಲೆಗೆ ಬಿದ್ದಿದೆ.

 

 

 

ಈ ಮೀನು ಅತ್ಯಂತ ರುಚಿಕರವಾಗಿದೆ ಆದರೆ ಇಷ್ಟು ದುಬಾರಿ ಬೆಲೆ ತೆತ್ತು ಮೀನು ತಿಂತಾರಾ ಎಂದು ಯೋಚಿಸಬೇಡಿ. ಈ ಮೀನಿನಲ್ಲಿ ಔಷಧೀಯ ಗುಣಗಳಿವೆ. ಘೋಲ್ ಮೀನಿನ ಚರ್ಮವನ್ನು ಹಾಗೂ ಶ್ವಾಸಕೋಶವನ್ನು ಔಷಧಿಗೆ ಉಪಯೋಗ ಮಾಡುತ್ತಾರೆ. ಸೌಂದರ್ಯ ವರ್ಧಕವಾಗಿ ಕೂಡ ಇದನ್ನು ಬಳಸುತ್ತಾರೆ ಅದಕ್ಕಾಗಿಯೇ ಈ ಮೀನಿಗೆ ಅಪಾರವಾದ ಬೇಡಿಕೆ ಇದೆ ಎನ್ನಲಾಗಿದೆ.

ಈ ‘ಗೋಲ್’ ಮೀನನ್ನು “ಬಂಗಾರದ ಹೃದಯದ ಮೀನು” ಎಂದು ಕರೆಯಲಾಗುತ್ತದೆ. ಇದರಲ್ಲಿ ಚಿಕ್ಕ ಮೀನುಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾದರೆ ಅತ್ಯುತ್ಕೃಷ್ಟ ‘ಗೋಲ್’ ಮೀನುಗಳು ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ, ಹಾಂಕಾಂಗ್ ಮತ್ತು ಜಪಾನ್‌ಗೆ ರಫ್ತು ಆಗುತ್ತವೆ. ಘೋಲ್ ಮೀನಿನ ಎಲ್ಲ ಭಾಗವನ್ನೂ ಔಷಧಿಗಳಿಗೆ ಬಳಸುತ್ತಾರೆ. ಮೀನನ್ನು ಪಾಲ್ಗರ್ ಮೀನಿನ ಮಾರುಕಟ್ಟೆಗೆ ತಂದಿದ್ದ ಸಹೋದರರು ಆರಂಭದಲ್ಲಿಯೇ ಹೆಚ್ಚಿನ ಬೆಲೆಗೆ ಹರಾಜಿಗೆ ಇಟ್ಟಿದ್ದಾರೆ. ವಿಷ್ಯ ಇಡೀ ಪಾಲ್ಗರ್ ಗೆ ಗೊತ್ತಾಗಿ ಕೊನೆಗೆ ಮೀನು 5.5 ಲಕ್ಷ ರೂಪಾಯಿಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top