ಸಮಾಚಾರ

ಮೀನು ಮಾರಾಟ ಮಾಡಿ ಜನರಿಂದ ಟ್ರೋಲ್ ಆದ ಈ ಹೆಣ್ಣುಮಗಳ ಬದುಕಿನ ಹಿಂದೆ ಇದೆ ಒಂದು ರೋಚಕ ಕಥೆ ,ನೋಡಿ ಏನ್ ಆ ಕರುಳು ಕಿತ್ತು ಬರುವ ಕಥೆ ಅಂತ

ಇತ್ತೀಚಿನ ದಿನಗಳಲ್ಲಿ ಟ್ರೋಲಿಗರ ಹಾವಳಿ ಹೆಚ್ಚುತ್ತಿದೆ. ಟ್ರೊಲ್ ಗೆ ಒಳಗಾಗುತ್ತಿರುವ ವ್ಯಕ್ತಿಯ ಸಮಸ್ಯೆ ಅರಿಯರೆ ನಾವು ಕೂಡ ಟ್ರೊಲ್ ಮಾಡುತ್ತಲೇ ಇರುತ್ತೇವೆ. ಇತ್ತೀಚಿಗೆ ಕೇರಳದ ಹನಾನ್ ಹಮಿದ್ ಎಂಬ 21 ವರ್ಷ ವಯಸ್ಸಿನ ಮೀನು ಮಾರುವ ಯುವತಿಯನ್ನು ಟ್ರೊಲ್ ಮಾಡಲಾಗಿತ್ತು. ಆ ಹೆಣ್ಣುಮಗಳ ಬದುಕಿನ ಹಿಂದೆ ಇದೆ ಒಂದು ರೋಚಕ ಕಥೆ ,ನೋಡಿ ಏನದು ಆ ಕರುಳು ಕಿತ್ತು ಬರುವ ಕಥೆ ಅಂತ.

ಕಾಲೇಜ್ ಯೂನಿಫಾರ್ಮ್ ಧರಿಸಿ ಮೀನು ಮಾರುತ್ತಿದ್ದ ಆ ಯುವತಿಯ ಚಿತ್ರ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಜೀವನೋಪಾಯಕ್ಕೆಂದು ಆಕೆ ಮಾಡುತ್ತಿದ್ದ ಕೆಲಸವನ್ನು ಆಡಿಕೊಂಡು ನಗಲಾಗಿತ್ತು.

 

ಹನಾನ್ ಹಮಿದ್ ಅವರು ಹೈಸ್ಕೂಲ್ ಓದುತ್ತಿರುವಾಗಲೇ ತಂದೆ-ತಾಯಿ  ವಿಚ್ಛೇದನ ಹೊಂದಿದ್ದರು. ಹನಾನ್ ಹಮಿದ್ ಅವರು ತಾಯಿಯ ಜೊತೆ ಇದ್ದರು ಈಕೆಯ ತಮ್ಮ ತಂದೆಯ ಜೊತೆಗಿದ್ದ. ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹನಾನ್ ಮೇಲೆ ಬಿತ್ತು. ಕಾಲೇಜು ಓದುತ್ತಲೇ ಚಿಕ್ಕ ಮಕ್ಕಳಿಗೆ ಟ್ಯೂಷನ್ ಹೇಳುವುದು. ಕರ ಕುಶಲ ಸಾಮಾನು ತಯಾರು ಮಾಡಿ ಮಾರುವುದು ಹೀಗೆ ಅನೇಕ ಕೆಲಸ ಮಾಡುತಿದ್ದಳು. ಆಮೇಲೆ ಕಂಪನಿ ಒಂದರಲ್ಲಿ ಪಾರ್ಟ್ ಟೈಮ್ ಕೆಲಸ ಗಿಟ್ಟಿಸಿಕೊಂಡ ಹನಾನ್ ಮಾರ್ನಿಂಗ್ ಶಿಫ್ಟ್, ಈವನಿಂಗ್ ಶಿಫ್ಟ್ ಕೆಲಸ ಮಾಡಿ ವಿದ್ಯಾಭ್ಯಾಸ ಕೂಡ ಮಾಡುತ್ತಿದ್ದಳು.

 

 

ಅವಳು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಹೆಚ್ಚಾದ ಶಬ್ದ ಮಾಲಿನ್ಯ ಇದ್ದದ್ದರಿಂದ ಆಕೆಗೆ ಶ್ರಾವಣ ದೋಷ ಶುರು ಆಯಿತು ಇದರಿಂದ ಕೆಲಸವನ್ನು ಕೂಡ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂತು. ನಂತರ ಇನ್ನೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಮೀನು ಮಾರುವ ವ್ಯಾಪಾರದಲ್ಲಿ ಒಂದಿಷ್ಟು ಹಣ ಗಳಿಸಬಹುದು ಎಂದು ಮೀನು ವ್ಯಾಪಾರ ಶುರು ಮಾಡಿದಳು. ಕಾಲೇಜು ಮುಗಿಸಿ ಮೀನಿನ ಮಾರುಕಟ್ಟೆಗೆ ಹೋಗುತ್ತಿದ್ದಳು.

 

ಹೀಗೆ ಒಂದು ದಿನ ಮೀನು ಮಾರುವಾಗ ಅವಳು ಕಾಲೇಜು ಡ್ರೆಸ್ ಧರಿಸಿದ್ದಳು ಇದನ್ನು ಕಂಡು ಕೆಲವು ಕೀಳು ಮನಸ್ಸಿನ ಜನ ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಟ್ರೊಲ್ ಮಾಡಿದರು ವಾಸ್ತವತೆ ಅರಿಯದೆ ಕೆಲವರು ಇವಳನ್ನು ನೋಡಿ ನಕ್ಕರು. ಈ ಘಟನೆ ಕೇರಳದ ಸರ್ಕಾರದ ಗಮನಕ್ಕೆ ಬಂತು. ಕೂಡಲೇ ಆದೇಶ ಹೊರಡಿಸಿ ಆಕೆಯ ವಿರುದ್ಧ ಟ್ರೊಲ್ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಗೆ ಮಾಡಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹನಾನ್ ಬೆಂಬಲಕ್ಕೆ ನಿಂತಿದ್ದಾರೆ. ಸದ್ಯ ಯುವತಿಗೆ ಸಿನೆಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top