ಮನೋರಂಜನೆ

ಸಲ್ಮಾನ್ ಖಾನ್ ‘ಲವ್ ರಾತ್ರಿ’ ಸಿನಿಮಾ ವಿರುದ್ಧ ಆಕ್ರೋಶಗೊಂಡ ಹಿಂದೂ ಸಂಘಟನೆಗಳು.

ಕಳೆದ ವರ್ಷ ಪದ್ಮಾವತ್ ಚಿತ್ರ ಬಹುಶಃ ಭಾರತೀಯ ಚಿತ್ರರಂಗದಲ್ಲಿಯೇ ಭಾರೀ ವಿವಾದ ಎಬ್ಬಿಸಿದ ಚಿತ್ರವಾಗಿ ದಾಖಲಾಗಿದೆ. ಆದರೆ ಆ ಚಿತ್ರ ಸೃಷ್ಟಿಸಿದ್ದ ವಿವಾದಕ್ಕೂ, ಪಡೆದುಕೊಂಡಿರೋ ಗೆಲುವಿಗೂ ಸೂತ್ರ ಸಂಬಂಧವಿಲ್ಲ. ಆ ಪಾಟಿ ವಿವಾದ ಮಾಡಿದ್ದ ಈ ಚಿತ್ರ ಅದಕ್ಕಿಂತಲೂ ದೊಡ್ಡದಾಗಿ ಗೆಲುವು ಕಂಡಿತ್ತು. ಈ ಚಿತ್ರದ ಮೂಲಕ ಬಾಲಿವುಡ್ ಮಂದಿ ಖರ್ಚಿಲ್ಲದೆ ಪ್ರಚಾರ ನಡಸುವುದಕ್ಕೆ ಹೊಸಾ ರೂಟು ಕಂಡುಕೊಂಡಿರೋದಂತೂ ಸತ್ಯ. ಮಾಮೂಲಾಗಿ ಒಂದು ಚಿತ್ರದ ಪ್ರಚಾರಕ್ಕೆ ಅದರ ಒಟ್ಟಾರೆ ಬಜೆಟ್ಟಿಗೆ ಸರಿಸಮನಾದ ಕಾಸು ಖರ್ಚು ಮಾಡಬೇಕಾಗುತ್ತೆ. ಆದರೆ ಚಿತ್ರದಲ್ಲಿ ಒಂದು ಗುಂಪು ಕೆರಳುವಂಥಾ ಸನ್ನಿವೇಶಗಳನ್ನು ಸೃಷ್ಟಿಸಿ ಬಿಟ್ಟರೆ ಪ್ರಚಾರವೆಂಬುದು ಹೋದಲ್ಲಿ ಬಂದಲ್ಲಿ ಹಿಂಬಾಲಿಸಿಕೊಂಡು ಬರುತ್ತದೆ. ಇಂಥಾದ್ದೇ ಒಂದು ಫಾರ್ಮುಲಾವನ್ನು ಸಲ್ಮಾನ್ ಖಾನ್ ನಿರ್ಮಾಣದಲ್ಲಿ ಭೂದಿಬರುತ್ತಿರುವ ‘ಲವ್ ರಾತ್ರಿ’ ಎಂಬ ಹೆಸರಿನ ಚಿತ್ರವೂ ಅನುಸರಿಸಲು ಮುಂದಾಗಿದೆಯಾ ಎಂಬ ಅನುಮಾನ ಪ್ರೇಕ್ಷಕರ ವಲಯದಲ್ಲಿ ದಟ್ಟವಾಗಿದೆ.

 

 

ಸಲ್ಮಾನ್ ಖಾನ್ ಚಿತ್ರವೊಂದನ್ನು ನಿರ್ಮಾಣ ಮಾಡುತ್ತಿದ್ದು ಅದಕ್ಕೆ ‘ಲವ್‌ರಾತ್ರಿ’ ಎಂಬ ಶೀರ್ಷಿಕೆಯಿಟ್ಟಿದ್ದಾರೆ. ಇನ್ನು ಈ ಚಿತ್ರವನ್ನು ನವರಾತ್ರಿ ಹಬ್ಬದ ವೇಳೆ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಸಲ್ಮಾನ್ ಖಾನ್ ಸಿನಿಮಾಗೆ ‘ಲವ್‍ರಾತ್ರಿ’ ಎಂಬ ಹೆಸರಿಟ್ಟು ಅದನ್ನು ‘ನವರಾತ್ರಿ’ ಹಬ್ಬದ ವೇಳೆ ರಿಲೀಸ್ ಮಾಡುವ ಮೂಲಕ ‘ಹಿಂದೂ’ಗಳ ಭಾವನೆಗೆ ಧಕ್ಕೆ ತರುವ ಹೊಂಚಾಕಿದ್ದಾರೆ ಎಂದು ಹಿಂದೂ ಸಂಘನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿವೆ.. ಚಿತ್ರದಲ್ಲಿ ನವರಾತ್ರಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗುತ್ತಿದೆ.

“ಇದೀಗ ಚಿತ್ರದ ಟ್ರೈಲರ್ ಕೂಡ ಲಾಂಚ್ ಆಗಿದ್ದು ಅದರಲ್ಲಿಯೂ ಬಿಡುಗಡೆ ದಿನಾಂಕವನ್ನು ನವರಾತ್ರಿಯ ವೇಳೆಗೆ ಎಂದು ಹೇಳಲಾಗಿದೆ, ಚಿತ್ರದಲ್ಲಿ ನವರಾತ್ರಿಗೆ ಅವಮಾನ ಮಾಡಲಾಗಿದೆ. ಚಿತ್ರದ ಬಿಡುಗಡೆಗೆ ಕೋರ್ಟ್ ತಡೆಯೊಡ್ಡಬೇಕು” ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ

ಅಕ್ಟೋಬರ್ 5ರಂದು ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದು ಈ ಹಿಂದೆ ‘ಸುಲ್ತಾನ್’ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಅಭಿರಾಜ್ ಮಿನವಾಲ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಈ ಚಿತ್ರದ ನಾಯಕ. ಒಟ್ಟಿನಲ್ಲಿ ‘ಲವ್ ರಾತ್ರಿ’ ಚಿತ್ರತಂಡ ತಮ್ಮ ಸಿನಿಮಾ ಬಿಡುಗಡೆಯ ದಿನಾಂಕವನ್ನು ಬದಲಿಸುತ್ತದೆಯಾ? ಅಥವಾ ಪದ್ಮಾವತಿ ರೀತಿ ಮತ್ತೊಂದಷ್ಟು ರಾಡಿ ಎಬ್ಬಿಸಲು ಅನುವು ಮಾಡಿಕೊಡುತ್ತದಾ ಎಂಬುದನ್ನು ಕಾದು ನೋಡ ಬೇಕಿದೆ!

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top