fbpx
ಹೆಚ್ಚಿನ

ಇಂದು ಕಾಮಿಕ ಏಕಾದಶಿಯ ದಿನ,ಈ ದಿನ ಹೀಗೆ ಮಾಡಿದರೆ ನಿಮ್ಮ ಎಲ್ಲ ಕಷ್ಟಗಳು ಪರಿಹಾರವಾಗುವುದು ಹಾಗೂ ಈ ದಿನದ ಮಹತ್ವದ ಬಗ್ಗೆ ತಿಳ್ಕೊಳ್ಳಿ .

ವರ್ಷದಲ್ಲಿ ಬರುವ ಪ್ರತಿಯೊಂದು ಏಕಾದಶಿಗೂ ಕೂಡ ತನ್ನದೇ ಆದ ವೈಶಿಷ್ಟ್ಯ ಮಹತ್ವ ಇದೆ .ಇಂದಿನ  ಏಕಾದಶಿಯೂ ಕೂಡ ಬಹಳಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈ ಆಷಾಢ ಮಾಸದಲ್ಲಿ ಬರುವ ಏಕಾದಶಿಯನ್ನು ಕಾಮಿಕ ಏಕಾದಶೀ ಎಂದು ಕರೆಯಲಾಗುತ್ತದೆ. ಈ ಕಾಮಿಕ ಏಕಾದಶಿಯ ದಿನ ಈ ದೀಪವನ್ನು ಬೆಳಗಿಸಿ ಉಪವಾಸವನ್ನು ಆಚರಿಸಿದರೆ ಸಮಸ್ತ ಅಭೀಷ್ಟಗಳು ಕೂಡ ನೆರವೇರುತ್ತವೆ.
ಒಮ್ಮೆ ಶ್ರೀಕೃಷ್ಣನಿಗೆ ಯುಧಿಷ್ಠಿರನು ಸ್ವಾಮಿ ಆಷಾಡ ಮಾಸದಲ್ಲಿ ಬರುವ ಈ ಕಾಮಿಕ ಏಕಾದಶಿ ಆಚರಣೆಯಿಂದ ಫಲಗಳು ಏನೇನು ? ಎಂದು ಕೇಳುತ್ತಾನೆ . ಆಗ ಸರ್ವಾಂತರ್ಯಾಮಿಯಾಗಿರುವ ಶ್ರೀ ಕೃಷ್ಣ ಪರಮಾತ್ಮನು, ಏಕಾದಶಿಯ ಬಗ್ಗೆ ಸವಿಸ್ತಾರವಾಗಿ ಹೇಳುತ್ತಾನೆ .ಈ ಆಷಾಡ ಮಾಸದ ಬಹುಳ ಏಕಾದಶಿಯನ್ನು ಕಾಮಿಕ ಏಕಾದಶಿ ಎಂದು ಕರೆಯುತ್ತಾರೆ . ಏಕಾದಶಿಯ ವ್ರತವನ್ನು ಆಚರಿಸುವ ಜೀವಿಯ ಸಕಲ ಪಾಪಗಳು ತೊಲಗಿಸುವ ಸಕಲ ಶಕ್ತಿ ಸಾಮರ್ಥ್ಯಗಳು ಇವೆ .

 

 

 

ಅಂತೆಯೇ ನಾರದ ಮುನಿಯು ಸಾಕ್ಷಾತ್ ಬ್ರಹ್ಮನಿಗೆ ಕಾಮಿಕ ಏಕಾದಶಿಯ ದಿನ ಯಾವ ರೀತಿ ಆಚರಿಸಬೇಕು ? ಏನೆಲ್ಲಾ ಮಾಡಬೇಕು ? ಎಂದು ಸವಿಸ್ತಾರವಾಗಿ ಹೇಳಿರಿ ತಿಳಿಸಬೇಕು ಎಂದು ಪ್ರಾರ್ಥಿಸುತ್ತಾನೇ. ಪುತ್ರ ನಾರದ ಈ ಕಾಮಿಕ ಏಕಾದಶಿಯು ಎಲ್ಲ ಏಕಾದಶಿಗಳಿಗಿಂತಲೂ ಅತ್ಯಂತ ಮಹತ್ವವಾದದ್ದು ಮತ್ತು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ .
ಶ್ರೀಮನ್ನಾರಾಯಣನ ಪಾದಪದ್ಮಗಳಿಗೆ ಶರಣಾಗಿ ಆತನನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿದರೆ, ಭೂದಾನ, ಗೋದಾನ ಮತ್ತು ಅಶ್ವ ದಾನ ಮಾಡಿದ ಪುಣ್ಯ ಫಲಗಳು ಒದಗಿ ಬರುತ್ತವೆ. ಪರಮ ಪುರುಷೋತ್ತಮನಾದ ಆ ಪರಮಾತ್ಮನನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸಿದರೆ ಸಿಗುವ ಲಾಭಗಳು ಅಷ್ಟಿಷ್ಟಲ್ಲ. ಈ ದಿನ ಯಾರು ಏಕಾದಶಿ ವ್ರತವನ್ನು ಮಾಡಿ, ಉಪವಾಸ ಜಾಗರಣೆ ಮಾಡಿ ಪುರುಷೋತ್ತಮನಾದ ಪರಮಾತ್ಮನನ್ನು ಪೂಜಿಸಿ ಪ್ರಾರ್ಥಿಸಿದರೆ ಕಾಶಿಯ ಗಂಗಾನದಿಯಲ್ಲಿ ಸ್ನಾನ ಮಾಡಿದಷ್ಟು ಫಲಿತಾಂಶ ಸಿಗುತ್ತದೆ.

ಅಷ್ಟೇ ಅಲ್ಲ ಹಿಮಾಲಯದಲ್ಲಿ ನೆಲೆಸಿರುವಂತಹ ಕೈಲಾಸಗಿರಿ ವಾಸನಾದ ಕೇದಾರನಾಥನನ್ನು ದರ್ಶನ ಮಾಡಿದ ಪುಣ್ಯ ಫಲ ಒದಗಿ ಬರುತ್ತದೆ . ಯಾವ ಸೋಮವಾರದಲ್ಲಿ ಗುರು, ಸಿಂಹ ಹಾಗೂ ಪೌರ್ಣಮಿ ಕಲೆತು ಬರುತ್ತದೋ ಅಂತಹ ಪುಣ್ಯ ದಿನದಂದು ಗೋದಾವರಿ ನದಿಯಲ್ಲಿ ಸ್ನಾನ ಮಾಡಿದಷ್ಟು ಒದಗಿ ಬರುತ್ತದೆ.

ಏಕಾದಶಿ ಆಚರಣೆ ಮಾಡಿ ಪೂಜಿಸುವುದರಿಂದ ಏನೆಲ್ಲಾ ಲಾಭಗಳು ?

ಏಕಾದಶಿಯ ಪ್ರಯುಕ್ತ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡುವುದು ಉತ್ತಮ .ಮುಕ್ಕೋಟಿ ದೇವತೆಗಳಿಗೂ ನಾವು ನಮ್ಮ ನಮನಗಳನ್ನು ಸಲ್ಲಿಸಿದಂತಾಗುತ್ತದೆ ಜೊತೆಗೆ ಸಹಸ್ರ ನಾಮಾರ್ಚನೆಯನ್ನು ಕೂಡ ಮಾಡುವುದು ಅತಿ ಅವಶ್ಯಕ ಹೀಗೆ ಅಲಂಕಾರ ಪ್ರಿಯನಾದ ಮಹಾವಿಷ್ಣುವನ್ನು ಅಲಂಕರಿಸಿ ಪೂಜಿಸಿ ಪ್ರಾರ್ಥಿಸಬೇಕು ಮುಖ್ಯವಾಗಿ ಏಕಾದಶಿ ಸಕಲ ಪಾಪಗಳನ್ನು ತೊಳೆಯುವ ಶಕ್ತಿಯುಳ್ಳ ದಿನವಾಗಿದೆ.
ಶ್ರೀಮನ್ನಾರಾಯಣನೇ ಈ ಕಾಮಿಕ ಏಕಾದಶಿಯ ಮಹತ್ವದ ಬಗ್ಗೆ ತಿಳಿಸಿದ್ದಾನೆ. ಸಾಮಾನ್ಯ ಏಕಾದಶಿ ಏಕಾದಶಿ ಆಚರಣೆಯು ಸಾಕಷ್ಟು ಪುಣ್ಯ ಪ್ರದಾಯಕವಾಗಿತ್ತು. ಇದನ್ನು ಆಚರಿಸುವವರಿಗೆ ಫಲ ದುಪ್ಪಟ್ಟಾಗಿ ದ್ವಿಗುಣವಾಗಿ ಲಭಿಸುತ್ತದೆ ಎಂದು ಮೋಕ್ಷ, ಸಂಪತ್ತು ,ಅಷ್ಟೇ ಅಲ್ಲ , ಆಯಸ್ಸು ಆರೋಗ್ಯ ಕೂಡ ಲಭಿಸುತ್ತದೆ. ಇದರಿಂದ ಆಕಸ್ಮಿಕ ಮೃತ್ಯು ಗಂಡಾಂತರಗಳು ಕೂಡ ತೊಲಗಿ ಹೋಗುತ್ತದೆ .

ಇನ್ನು ಮುಖ್ಯವಾಗಿ ಈ ಕಾಮಿಕ ಏಕಾದಶಿಯ ವ್ರತವನ್ನು ಆಚರಣೆ ಮಾಡುವವರಿಗೆ ಮುಂದಿನ ಜನ್ಮಗಳ ಪಾಪಗಳಷ್ಟೇ ಅಲ್ಲದೆ ,ಜನ್ಮ ಜನ್ಮಾಂತರಗಳ ನಂಟು ಇರುವುದಿಲ್ಲ. ಅಷ್ಟೆ ಅಲ್ಲ ಸರ್ವಪಾಪಗಳು ಕೂಡ ತೊಲಗಿ ಸದ್ಗತಿ ಪ್ರಾಪ್ತಿಯಾಗುತ್ತದೆ. ಈ ದಿನ ಸಾಕಷ್ಟು ಯೋಗಿ, ಮುನಿಗಳು ಕಾಮಿಕ ಏಕಾದಶಿಯ ವ್ರತವನ್ನು ಆಚರಿಸಿ ಆಧ್ಯಾತ್ಮಿಕ ಪ್ರಪಂಚದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ಹೀಗೆ ಅವರ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿ ಈ ದಿನ ಭಕ್ತಿ ಶ್ರದ್ಧೆಗಳಿಂದ ಏಕಾದಶಿಯ ವ್ರತವನ್ನು ಆಚರಿಸಿ ಎಂದು ಬ್ರಹ್ಮನು ನಾರದನಿಗೆ ಉಪದೇಶಿಸಿದನು.

ಇನ್ನೂ ಮುಖ್ಯವಾಗಿ ಶ್ರೀಮನ್ನಾರಾಯಣನಿಗೆ ಪ್ರೀತಿ ಪಾತ್ರವಾದ ತುಳಸಿ ದಳಗಳಿಂದ ಪೂಜಿಸಬೇಕು.ಈ ಕಾಮಿಕ ಏಕಾದಶಿಯ ದಿನ ತುಳಸಿ ಮಾಲೆಯನ್ನು ಶ್ರೀಮನ್ನಾರಾಯಣನಿಗೆ ಹಾಕಿ ಭಕ್ತಿ ಶ್ರದ್ಧೆಗಳಿಂದ ಪೂಜಿಸಬೇಕು . ಮುಖ್ಯವಾಗಿ ತಾವರೆಗೆ ನೀರು ಹೇಗೆ ತಗಲುವುದಿಲ್ಲವೋ ಹಾಗೆ ಜೀವನದಲ್ಲಿ ಸಂಸಾರದಲ್ಲಿ ಇದ್ದರೂ ಕೂಡ ಬಂಧನಗಳಿಂದ ಮುಕ್ತವಾಗಬಹುದು. ಹಾಗೆಯೇ ಪಾಪಗಳಿಂದ ವಿಮುಕ್ತಿ ಲಭಿಸುತ್ತದೆ .
ಮುತ್ತು, ರತ್ನ ,ವಜ್ರ, ವೈಡೂರ್ಯ ,ಗೋಮೇಧಿಕ, ಇತ್ಯಾದಿ ನವರತ್ನಗಳಿಂದ ಪೂಜಿಸಿದರೂ ಅಥವಾ ಕೇವಲ ಒಂದೇ ಒಂದು ತುಳಸಿದಳದಿಂದ ಪೂಜಿಸಿದರೂ ಕೂಡಾ ಶ್ರೀಮನ್ನಾರಾಯಣನು ಸಂಪೂರ್ಣವಾಗಿ ಅನುಗ್ರಹಿಸುತ್ತಾನೆ. ಕೇವಲ ತುಳಸಿದಳ ಮಾತ್ರದಿಂದಲೇ ಸಂಪೂರ್ಣ ಶ್ರೀಮನ್ನಾರಾಯಣನ ಅನುಗ್ರಹ ಪ್ರಾಪ್ತಿಯಾಗುತ್ತದೆ. ಭಕ್ತಿ ಶ್ರದ್ಧೆಯಿಂದ ತುಳಸಿಯನ್ನು ಸಮರ್ಪಿಸಿ ಆಚರಿಸಬೇಕು.

ಸರಿಯಾದ ಅನುಷ್ಠಾನವನ್ನು , ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಬೇಕು . ಹೀಗೆ ಕಾಮಿಕ ಏಕಾದಶಿಯ ದಿನ ತುಳಸಿಯ ಪೂಜೆ ಅತ್ಯಂತ ಉತ್ತಮ. ಏಕಾದಶಿಯ ದಿನ ತುಪ್ಪದ ದೀಪವನ್ನು ನಾರಾಯಣನಿಗೆ ಅರ್ಪಿಸಿ ಪ್ರಾರ್ಥಿಸಬೇಕು. ಒಂದೇ ಒಂದು ದೀಪದಿಂದಲೇ ಸಕಲ ಪಾಪಗಳು ಶ್ರೀಮನ್ನಾರಾಯಣನಿಗೆ ಅರ್ಪಿಸಬೇಕು .ಹೀಗೆ ಮಾಡುವುದರಿಂದ ಸಕಲ ಪಾಪಗಳು ಜನ್ಮಜನ್ಮಾಂತರದ ಪಾಪಗಳು ತೊಲಗಿ ಹೋಗಿ ಪುಣ್ಯವು ಲಭಿಸುತ್ತದೆ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top