ಸಮಾಚಾರ

ವೈರಲ್ ಆಯಿತು ಎತ್ತುಗಳ ಜತೆ ಈ ರೈತನ ಕಿಕಿ ಡ್ಯಾನ್ಸ್,ನೋಡಿ ನೀವು ಆ ವಿಡಿಯೋ

ಜಗತ್ತಿನಾದ್ಯಂತ ಕಿಕಿ ಚಾಲೆಂಜ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಶ್ವದ ಅನೇಕ ದೇಶಗಳ ಜನತೆ ಈ ಸವಾಲನ್ನು ಸ್ವೀಕಾರ ಮಾಡುತ್ತಿದ್ದು, ಕಾರಿನಿಂದ ಇಳಿದು ಡ್ರೇಕ್‌ರ ‘ಇನ್ ಮೈ ಫೀಲಿಂಗ್ಸ್‌’ ಹಾಡಿಗೆ ಡ್ಯಾನ್ಸ್ ಮಾಡುತ್ತ ಕಿಕಿ ಚಾಲೆಂಜ್ ಮಾಡುತ್ತಿದ್ದಾರೆ. ಆದರೆ, ಈ ಚಾಲೆಂಜ್ ಸ್ವೀಕರಿಸಿದ ತೆಲಂಗಾಣದ ಇಬ್ಬರು ರೈತರು ಸಾಮಾಜಿಕ ಜಾಲತಾಣದಲ್ಲಿ ತುಂಬ ಖ್ಯಾತಿ ಪಡೆದಿದ್ದಾರೆ.

ತೆಲಂಗಾಣ ರಾಜ್ಯದ ರೈತ ಸೋದರರಿಬ್ಬರು ವಿಭಿನ್ನವಾಗಿ ಹಾಗು ಸುರಕ್ಷಿತವಾಗಿ ‘ಕೀ ಕಿ ಚಾಲೆಂಜ್’ ಆಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗದ್ದೆಯಲ್ಲಿ ಎತ್ತುಗಳೊಂದಿಗೆ ಉಳುಮೆ ಮಾಡುತ್ತ ಇವರು ‘ಕಿಕಿ ಚಾಲೆಂಜ್’ ಸ್ವೀಕರಿಸುವ ದೃಶ್ಯಗಳು ವೈರಲ್ ಆಗಿವೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಲಂಬಿಡಿಪಳ್ಳಿಯ ಗೀಲಾ ಅನಿಲ್ ಕುಮಾರ್ (24) ಹಾಗೂ ಅವರ ಅಣ್ಣ ಪಿಳ್ಳಿ ತಿರುಪತಿ (28) ರವರೇ ಈ ಸವಾಲನ್ನು ಸ್ವೀಕರಿಸಿ ಮೆಚ್ಚುಗೆಗೆ ಪಾತ್ರರಾದರು.

ಈ ಬಗ್ಗೆ ಆ ವೀಡಿಯೋ ಮಾಡಿದ ರೈತರ ಪೋಷಕರು ಅಚ್ಚರಿ ಆಗಿದ್ದರೆ ಎಂದು ತಿಳಿದು ಬಂದಿದೆ. ರೈತ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಗೀಲಾ ಅನಿಲ್‌ನ ಪೋಷಕರು ನಿರ್ಮಲಾ ಮತ್ತು ಮಲ್ಲೇಶನ್ ತಮ್ಮ ಮಕ್ಕಳನ್ನು ಈಗ ಲಂಬಾಡಿಪಲ್ಲಿ ಗ್ರಾಮದ ಹೊರಗೂ ಗುರುತಿಸುತ್ತಿದ್ದಾರೆ ಎಂದು ಅಚ್ಚರಿಗೆ ಒಳಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

 

ಈ ವಿಡಿಯೋ ನೋಡಿ:

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೈತರು ಇದು ಸಾಮಾನ್ಯ ಡ್ಯಾನ್ಸ್ ಆಗಿದ್ದು ನಾವು ಜಮೀನಿನಲ್ಲಿ ಹಲವು ಬಾರಿ ತಯಾರಿ ನಡೆಸಿ ನಂತರ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದೇವು. ಸಮತಟ್ಟಾದ ರಸ್ತೆಯಲ್ಲಿ ಡ್ಯಾನ್ಸ್ ಮಾಡುವುದು ಸುಲಭ. ಆದರೆ ಗದ್ದೆಯಲ್ಲಿ ಎತ್ತುಗಳ ಜತೆ ಡ್ಯಾನ್ಸ್ ಮಾಡುವುದು ಕಷ್ಟ ಎಂದು ಅವರು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top