ಸಮಾಚಾರ

ಹಿರಿಯ ನಟ ಲೋಕನಾಥ್ ನಾಗರಹಾವು ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಒಂದು ಅಹಿತಕರ ಘಟನೆಯ ಬಗ್ಗೆ ಹೇಳಿದು ಹೀಗೆ ,ಏನ್ ಅದು ಅಹಿತಕರ ಘಟನೆ,ನೀವೇ ನೋಡಿ

ಅಖಂಡ ನಲವತ್ತಾರು ವರ್ಷಗಳ ಹಿಂದೆ ರವಿಚಂದ್ರನ್ ತಂದೆ ವೀರಾಸ್ವಾಮಿ ನಿರ್ಮಾಣ ಮಾಡಿದ್ದ ನಾಗರಹಾವು ಚಿತ್ರವನ್ನು ರವೀಚಂದ್ರನ್ ​ಅವರ ಸಹೋದರ ಬಾಲಾಜಿ ಬಹಳ ಕಷ್ಟಪಟ್ಟು ಡಿಜಟಲೀಕರಣ ಮಾಡಿ ಮತ್ತೆ ತೆರೆ ಮೇಲೆ ತಂದಿದ್ದಾರೆ. ಈ ಸಿನಿಮಾದಲ್ಲಿ ಬರುವ ಎಲ್ಲ ಪಾತ್ರಗಳು ಇನ್ನು ಕಣ್ಣು ಮುಂದೆ ಹಾಗೆ ಇವೆ. ಎಲ್ಲ ಪಾತ್ರಗಳಲ್ಲೂ ವಿಶಿಷ್ಟವಾದ ತೂಕವನ್ನು ಇಟ್ಟಿದ್ದಾರೆ ನಿರ್ದೇಶಕರು. ಅಂದಹಾಗೆ ರಾಮಾಚಾರಿ ಸಿನಿಮಾದಲ್ಲಿ ಕಾಲೇಜು ಪ್ರಾಂಶುಪಾಲರಾಗಿ ಅಭಿನಯ ಮಾಡಿದ್ದ ಲೋಕನಾಥ ಪಾತ್ರದ ಬಗ್ಗೆ ನೋಡೋಣ ಬನ್ನಿ.

ಲೋಕನಾಥ – (ನಾಗರಹಾವು ಸಿನಿಮಾದಲ್ಲಿ ಕಾಲೇಜ್ ಪ್ರಾಂಶುಪಾಲರು)
ವಿದ್ಯೆಯು ತಲೆಗೆ ಹತ್ತದೆ ಮನೆಯವರ ಒತ್ತಾಯದ ಮೇರೆಗೆ ಪಾಸ್ ಆಗಲೇಬೇಕು ಎಂದು ಕಾಪಿ ಚೀಟಿಯನ್ನು ಇಟ್ಟು ಬರೆಯುತ್ತಿದ್ದ ರಾಮಾಚಾರಿಯನ್ನು ಹಿಡಿದು ಡಿಬಾರ್ ಮಾಡುವ ಈ ಪಾತ್ರ. ಉರಿಯುವ ಬೆಂಕಿಗೆ ತುಪ್ಪ ಹಾಕುತ್ತಾರೆ. ಆ ಸೇಡಿಗೆ ರಾಮಾಚಾರಿ ಇವರನ್ನು ಕಂಬಕ್ಕೆ ಕಟ್ಟಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರವಾದರೂ ರಾಮಾಚಾರಿಯ ಜೀವನಕ್ಕೆ ಒಂದು ತಿರುವು ಕೊಡುವಲ್ಲಿ ಮಹತ್ವ ಪಾತ್ರ ಆಗುತ್ತಾರೆ. ಮಾರ್ಗರೆಟ್ ಇವರ ಬಳಿ ದೂರು ನೀಡಿದಾಗ ಮೊದಲಿಗೆ ಸಿಡಿದು ಬೀಳುವ ನಂತರ ತಂಪಾಗುತ್ತಾರೆ. ಆದರೆ ಅಷ್ಟೊತ್ತಿಗೆ ರಾಮಾಚಾರಿಯ ದ್ವೇಷ ರೋಷದ ಊರಿಗೆ ಉರುವಲು ಹಾಕಿ ಬಿಟ್ಟಿರುತಾರೆ.

 

 

 

ಇತ್ತೀಚಿಗೆ ನಾಗರಹಾವು ಸುದ್ದಿಘೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಲೋಕನಾಥ ಅವರು ಸಿನಿಮಾ ಆಗುವಾಗ ತಮ್ಮ ಜೀವನದಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಹೇಳಿದ್ದಾರೆ. ” ಆಗ ಸಿನಿಮಾ ಶೂಟಿಂಗ್ ಮುಗಿದಿತ್ತು, ಲೋಕನಾಥ್ ಮನೆಗೆ ಬಂದಿದ್ದರು. ಲೋಕನಾಥ್ ಅವ್ರು ಸಿನಿಮಾ ಜೊತೆಗೆ ಕಾರ್ಖಾನೆ ಕೂಡ ನಡೆಸುತ್ತಿದ್ದರಂತೆ. ಸಿನಿಮಾ ತಂಡದ ಸದಸ್ಯರೊಬ್ಬರು ಲೋಕನಾಥ್ ಅವರು ಮನೆಗೆ ಬಂದು ಇನ್ನೊಂದು ಶಾಟ್ ಬಾಕಿ ಉಳಿದಿದೆ ನೀವು ಕೂಡಲೇ ಚಿತ್ರದುರ್ಗಕ್ಕೆ ಬರಬೇಕು ಎಂದು ಮನವಿ ಮಾಡಿದ್ದರು.

ಆಗ ಲೋಕನಾಥ್ ಚಿತ್ರದುರ್ಗಕ್ಕೆ ವಾಪಾಸ್ ಹೋಗಿದ್ದರಂತೆ. ಅವರ ಶಾಟ್ ಮುಗಿಯುವ ಹೊತ್ತಿಗೆ ರಾತ್ರಿ ಎರಡು ಕಳೆದಿತ್ತು. ಆದರೆ ಲೋಕನಾಥ್ ಫ್ಯಾಕ್ಟರಿ ಬೀಗದ ಕೈ ತಮ್ಮ ಜೊತೆ ತಂದಿದ್ದರಿಂದ ಬೆಂಗಳೂರಿಗೆ ಹೋಗುವ ಅನುವಾರ್ಯ ಇತ್ತಂತೆ. ಅವರ ಫ್ಯಾಕ್ಟರಿಗೆ ಬೆಳಿಗ್ಗೆ 6 ಘಂಟೆಗೆ ಕೆಲಸಗಾರರು ಬರುತ್ತಿದ್ದರು. ಆದ್ದರಿಂದ ಅವರು ಯಾವುದೊ ಒಂದು ಪೇಪರ್ ವ್ಯಾನ್ ನಲ್ಲಿ ಕುಳಿತು ಬೆಂಗಳೂರಿಗೆ ತೆರಳಿದ್ದರಂತೆ. ಆ ವ್ಯಾನ್ ನಲ್ಲಿ ಸಿಗರೇಟ್ ಸೇದುವ ವ್ಯಕ್ತಿಗಳಿಂದ ಲೋಕನಾಥ್ ತೊಂದರೆ ಅನುಭವಿಸಿದ್ದರು. ದಾರಿ ಮಧ್ಯದಲ್ಲಿ ತುಮಕೂರಿನಲ್ಲಿ ಚಹಾ ಕುಡಿಯಲು ವ್ಯಾನ್ ಚಾಲಕ ನಿಲ್ಲಿದಾಗ ಬೆಂಗಳೂರಿನ ಬಸ್ ಒಂದು ಅವರಿಗೆ ಕಂಡಿದೆ. ಕೂಡಲೇ ಅವರು ವ್ಯಾನ್ ಬಿಟ್ಟು ಬಸ್ ನಲ್ಲಿ ಹತ್ತಿ ಬೆಂಗಳೂರಿಗೆ ಹೋದರು.

ಮನೆಗೆ ಹೋಗಿ ಕಾರ್ಖಾನೆ ಕೆಲಸ ಮುಗಿಸಿಕೊಂಡು ಒಂದು ದಿನದ ನಂತರ ಪೇಪರ್ ಓದುವಾಗ ಅವರು ತುಮಕೂರಿನಲ್ಲಿ ಇಳಿದಿದ್ದ ವ್ಯಾನ್ ಮುಂದೆ ಹೋಗಿ ಅಪಘಾತವಾಗಿದ್ದ ಸುದ್ದಿ ಓದಿ ಒಂದು ಕ್ಷಣ ಶಾಕ್ ಆಗಿದ್ದರಂತೆ. ಆ ವ್ಯಾನ್ ನಲ್ಲಿದ್ದ 8 ಜನ ಸಾವನ್ನಪ್ಪಿದ್ದರು ಎಂದು ಲೋಕನಾಥ್ ಪೇಪರ್ ನಲ್ಲಿ ಓದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top