ಸಮಾಚಾರ

ಬಲವಂತವಾಗಿ ಪ್ರೇಯಸಿಯ ಮುಂದಿನ 2 ಹಲ್ಲುಗಳನ್ನೂ ಕಿತ್ತ ಪ್ರೇಮಿ ,ಕಾರಣ ಗೊತ್ತಾದ್ರೆ ಬಿದ್ದು ಬಿದ್ದು ನಗ್ತೀರಾ.

ಗುಜರಾತ್ ರಾಜ್ಯದ ಗಾಂಧಿನಗರ ಜಿಲ್ಲೆಯ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಯಾರ ಕಣ್ಣಿಗೂ ಸುಂದರವಾಗಿ ಕಾರಣಬಾರದು ಎಂದು ಆಕೆಯ ಎರಡು ಹಲ್ಲುಗಳನ್ನು ಕಿತ್ತಿರುವ ಅಮಾನವೀಯ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಗೀತಾಬೆನ್ ಪ್ರಿಯಕರಿನಿಂದ ಹಿಂಸೆ ಅನುಭವಿಸುತ್ತಿರುವ ಮಹಿಳೆ ಎಂದು ಗುರುತಿಸಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಗೀತಾಬೆನ್ ಅವರು 15 ವರ್ಷದ ಹಿಂದೆ ಆಟೋ ಚಾಲಕನನ್ನು ಪ್ರೀತಿ ಮಾಡಿ ಗಂಡ ಹಾಗು ಮಕ್ಕಳನ್ನು ಬಿಟ್ಟು ಆಟೋ ಚಾಲಕನ ಜೊತೆ ಓಡಿ ಹೋಗಿ ಅವನ ಜೊತೆಗೆ ಜೀವನ ಸಾಗಿಸುತ್ತಿದ್ದಳು. ಆದರೆ ಕೆಲವು ದಿನಗಳ ಹಿಂದೆ ಆತ ಆಕೆಯ ಮೇಲೆ ಅನುಮಾನ ಪಡಲು ಶುರು ಮಾಡಿದ, ಆತನ ಅನುಮಾನ ಅತಿರೇಕಕ್ಕೆ ಏರಿ ಕೊನೆಗೆ ಆಕೆ ಯಾರಿಗೂ ಸುಂದವಾಗಿ ಕಾಣಬಾರದು ಎಂದು ದುರಾಲೋಚನೆ ಮಾಡಿ ಆಕೆಯ ಹಲ್ಲು ಕಿತ್ತಿರುವ ಘಟನೆ ನಡೆದಿದೆ.

 

ಇಷ್ಟೇ ಅಲ್ಲದೆ ಆಕೆಗೆ ಕಿರುಕುಳ ನೀಡಿದ್ದಾನೆ. ನಾನು ಅವನ ಬಳಿ ಖೈದಿಯಂತೆ ಬದುಕುತ್ತಿದ್ದೇನೆ ಎಂದು ಗೀತಾಬೆನ್ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಆಕೆ ಕೆಲಸಕ್ಕೆ ಹೋಗುತ್ತಿದ್ದಳು ಅದಕ್ಕೂ ಕೂಡ ನಿರ್ಬಂಧ ಹೇರಿ ಆಕೆಯನ್ನು ಮನೆಯಲ್ಲೇ ಇರುವಂತೆ ಕಟ್ಟಪ್ಪಣೆ ಮಾಡಿದ್ದ. ಯಾರು ಆಕೆಯನ್ನು ನೋಡಬಾರದು ಎಂದು ಕಿಟಕಿ ಮತ್ತು ಬಾಗಿಲುಗಳಿಗೆ ಪ್ಲಾಸ್ಟಿಕ್ ಶೀಟನ್ನು ಹಾಕಿದ್ದ ಎನ್ನಲಾಗಿದೆ.

ಎಲ್ಲೇ ಹೋಗಬೇಕೆಂದರು ಆತನ ಜೊತೆಗೆ ಹೋಗಬೇಕಿತ್ತು. ಹೀಗೆ ಆಕೆಯನ್ನು ಆಟೋದಲ್ಲಿ ಕರೆದೊಯ್ಯುವಾಗ ಇವನ ಕಾಟಕ್ಕೆ ಬೇಸತ್ತು ಆಟೋದಿಂದ ಜಿಗಿದಿದ್ದಾಳೆ. ಅಲ್ಲಿದ್ದ ಸ್ಥಳೀಯರು 181 ಅಭಯಂ ಸಹಾಯವಾಣಿಗೆ ಕರೆ ಮಾಡಿ ಆಕೆಯನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಇಷ್ಟೆಲ್ಲಾ ಆದರೂ ಕೂಡ ಮಹಿಳೆ ಆತನ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ. ನಾನು ಅವನನ್ನು ಪ್ರೀತಿಸುತ್ತೇನೆ ದೂರು ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top