ಸಮಾಚಾರ

ದಂಡಪಿಂಡ ಪತಿರಾಯನಿಗೆ ಬಾಳೆ ಹಣ್ಣು ತರದಿದ್ರೆ 100,ಟಿವಿ ನೋಡಿದ್ರೆ 500 ರೂ ಕೊಟ್ಟು ಕೊಟ್ಟು ಬೇಸತ್ತ ಹೆಂಡತಿಯ ಕಥೆ

ಮದುವೆಯಾದ ಬಳಿಕ ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಅತಿ ಹೆಚ್ಚಾಗಿ ಮಹಿಳೆಯರ ಶೋಷಣೆಗೆ ಕಾರಣ ಆಗಿರುವ ಪಿಡುಗು. ಇದನ್ನು ನಿಯಂತ್ರಿಸುವುದಕ್ಕಾಗಿ ಅನೇಕ ನಿಯಮ ಈ ಹಿಂದೆಯೇ ಬಂದಿದ್ದರು ಕೂಡ ಈ ಪಿಡುಗು ನಿರಂತರವಾಗಿ ನಡೆಯುತ್ತಲೇ ಇದೆ. ಇದೆ ರೀತಿಯ ಪಿಡುಗನ್ನು ಇನ್ನೊಂದು ವಿಚಿತ್ರ ಮಹಾರಾಷ್ಟ ರಾಜ್ಯದ ಮಹಿಳೆಯೊಬ್ಬಳು ಅನುಭವಿಸಿದ್ದಾಳೆ.

ಇದು ವರದಕ್ಷಿಣೆ ಪಿಡುಗಲ್ಲ ಬದಲಾಗಿ ವಿಭಿನ್ನವಾದ, ವಿಚಿತ್ರವಾದ ಪಿಡುಗು. ಪತ್ನಿ ಶ್ವೇತಾ ಏನೇ ತಪ್ಪು ಮಾಡಿದರೆ ಗಂಡ ಅನಿಲ್ ದಂಡ ವಿಧಿಸುತ್ತಾನೆ. ಮಾರ್ಕೆಟ್ ನಿಂದ ಬಾಳೆಹಣ್ಣು ತಂದಿಲ್ಲ ಎನ್ನುವ ಕಾರಣಕ್ಕೆ 100 ರೂಪಾಯಿ ದಂಡ ವಿಧಿಸುತ್ತಾನಂತೆ. ಮನೆಯಲ್ಲಿ ಟಿವಿ ಹಚ್ಚಿದರೆ 500 ರೂಪಾಯಿ ದಂಡ ನೀಡಬೇಕಂತೆ. ಮಕ್ಕಳನ್ನು ಟ್ಯೂಷನ್ ನಿಂದ ಕರೆತರಲು ತಡವಾದ್ರೆ 2 ಸಾವಿರ ರೂಪಾಯಿ ದಂಡ ನೀಡಬೇಕಂತೆ. ಮನೆಯ ಯಾವುದೇ ಕರೆಂಟ್ ಸ್ವಿಚ್ ಆನ್ ಆಗಿದ್ರೆ 50 ರೂಪಾಯಿ ನೀಡಬೇಕು. ಹೀಗೆ ದಿನವಿಡೀ ಆ ಕಾರಣ ಈ ಕಾರಣ ಕೇಳಿ ತನ್ನ ಪತ್ನಿಯ ಬಳಿ ದಂಡ ವಸೂಲು ಮಾಡುತ್ತಿದ್ದಾನೆ.

 

ಗಂಡನ ಈ ಕಟ್ಟುನಿಟ್ಟಿನ ಕ್ರಮಗಳಿಂದ ಪತ್ನಿ ನರಕ ಯಾತನೆ ಅನುಭವಿಸುತ್ತಿದ್ದಾಳೆ. ಪತಿಯ ವರ್ತನೆಯಿಂದ ಬೇಸತ್ತಿರುವ ಮಹಿಳೆ ಪತಿ ವಿರುದ್ಧ ದೂರು ದಾಖಲಿಸಿದ್ದಾಳೆ ಎಂದು ತಿಳಿದು ಬಂದಿದೆ. ಇವರಿಬ್ಬರು ಪ್ರೀತಿಸಿ 14 ವರ್ಷಗಳ ಹಿಂದೆ ಮದುವೆ ಆಗಿದ್ದರು. ಮೊದಲಿಗೆ ಸರಿಯಾಗಿದ್ದ ಪತಿ ನಂತರದ ದಿನಗಳಲ್ಲಿ ಈ ರೀತಿ ವರ್ತನೆ ತೋರಲು ಶುರು ಮಾಡಿದ್ದಾನೆ ಎನ್ನಲಾಗಿದೆ. ಶ್ವೇತಾ ಬಳಿಯಿದ್ದ ಎಲ್ಲವಸ್ತುವನ್ನು ತೆಗೆದುಕೊಂಡು ಪತಿ ಅವಳನ್ನು ಹೊರಹಾಕಿದ್ದಾನೆ ಎಂದು ತಿಳಿದು ಬಂದಿದೆ

ಮಹಿಳೆಯ ಪತಿ ಅನಿಲ್ ಹೋಟೆಲ್ ಮ್ಯಾನೇಜೆಮೆಂಟ್ ಕೋರ್ಸ್ ಮಾಡಿದ್ದೂ ಸದ್ಯ ತಿಂಗಳಿಗೆ 1 ಲಕ್ಷ 10 ಸಾವಿರ ಸಂಬಳ ಪಡೆಯುತ್ತಿದ್ದಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top