fbpx
ಸಮಾಚಾರ

ನೋಡಿ ಈ ಊರಿನಲ್ಲಿ ಮದುವೆ ಆಗಿಲ್ಲ ಅಂದ್ರು ಹುಡುಗ-ಹುಡುಗಿ, ಹೀಗೆ ಬಾಳಬಹುದಂತೆ,ಏನ್ ಇದು ವಿಚಿತ್ರ ಅನ್ಕೊಂಡ್ರಾ ,ನೋಡಿ ನೀವೇ .

ನಮ್ಮ ದೇಶ ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ. ಆದರೆ ಕೆಲವೆಡೆ ಇರುವ ಸಂಪ್ರದಾಯಗಳು ವಿಚಿತ್ರ ಎನಿಸಬಹುದು. ಇನ್ನೂ ಕೆಲವು ಪವಿತ್ರತೆಯ ಪ್ರತೀಕವಾಗಿರುವುದು. ವಿವಿಧ ಜಾತಿ, ಜನಾಂಗದವರನ್ನು ಹೊಂದಿರುವ ನಮ್ಮ ರಾಷ್ಟ್ರದಲ್ಲಿ ಕಂಡು ಕೇಳರಿಯದಂತಹ ಸಂಪ್ರದಾಯಗಳು ಮತ್ತು ಪದ್ಧತಿಗಳಿವೆ.

ರಾಜಸ್ಥಾನದಲ್ಲಿ ಇರುವ ವಿಚಿತ್ರ ಸಂಪ್ರದಾಯದ ಬಗ್ಗೆ ನೋಡೋಣ ಬನ್ನಿ. ರಾಜಸ್ಥಾನದ ವಾಯುವ್ಯ ರಾಜ್ಯದ ಗ್ಯಾರೇಸಿ ಬುಡಕಟ್ಟು ಜನಾಂಗದವರು ಮದುವೆ ಆಗದೆ ಸಂಬಂಧದಲ್ಲಿ ಇರುತ್ತಾರೆ. ಇದರ ಕುರಿತು ಅಥವಾ ಅವರ ಸಂಬಂಧಗಳ ಕುರಿತು ಯಾರೂ ಯಾರನ್ನೂ ಪ್ರಶ್ನೆ ಮಾಡುವಂತಿಲ್ಲ ಎಂದು ಹೇಳಲಾಗುತ್ತದೆ. ಈ ಬುಡಕಟ್ಟು ಜನಾಂಗದವರ ಪದ್ಧತಿಯು 1000 ವರ್ಷಗಳಿಂದಲೂ ನಡೆದುಕೊಂಡು ಬಂದ ಪದ್ಧತಿ ಎನ್ನುತ್ತಾರೆ.

 

 

ಇಲ್ಲಿ ಜೋಡಿಗಳಿಗೆ ಮದುವೆ ಆಗದೆ ಮಗು ಹುಟ್ಟಿಸುವ ಅವಕಾಶ ಕೂಡ ಇರುತ್ತದೆ . ಗ್ಯಾರೇಸಿಯ ಬುಡಕಟ್ಟಿನ ಜೋಡಿಗಳು ಒಟ್ಟಿಗೆ ವಾಸಿಸುತ್ತಾರೆ. ಪುರುಷರು ತಾವು ಉತ್ತಮ ಸಂಪಾದನೆಯನ್ನು ಮಾಡಿದ ಬಳಿಕ ತಮ್ಮ ಸಂಗತಿಯನ್ನು ವಿವಾಹವಾಗುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ 70 ವರ್ಷದ ನಾನಿಯಾ ಗಾರಸ್ಯ ಎನ್ನುವವನು ತನ್ನೊಂದಿಗೆ ಇಷ್ಟು ದಿನ ಇದ್ದ 60 ವರ್ಷದ ಕಾಲಿ ಎನ್ನುವವರನ್ನು ವಿವಾಹವಾದರು. ಇವರಿಗೆ ವಿವಾಹವಾಗದೆಯೇ ಮಕ್ಕಳು ಹುಟ್ಟಿದ್ದಾರೆ.

ಇಲ್ಲಿನ ಅದೆಷ್ಟೋ ಜೋಡಿಗಳು ಜೀವನದುದ್ದಕ್ಕೂ ಮದುವೆ ಅಗದೆಯೇ ಒಂದಾಗಿ ಜೀವನ ನಡೆಸುತ್ತಿದ್ದಾರೆ. ಗ್ಯಾರೇಸಿಯ ಬುಡಕ್ಕಟ್ಟು ಜನನಾಂಗದವರು ಅನೇಕ ವರ್ಷಗಳಿಂದ ಈ ಪದ್ಧತಿ ಅನುಸರಿಸುತ್ತ ಬಂದಿದ್ದಾರೆ. ಅನೇಕ ಪಾಶ್ಚ್ಯಾತ್ಯ ದೇಶಗಳಲ್ಲಿ ಈ ರೀತಿಯ ಲಿವಿಂಗ್ ಇನ್ ರಿಲೇಶನ್ ಪದ್ಧತಿ ಇದೆ. ಆದರೆ ಭಾರತದಲ್ಲಿ ಇದಕ್ಕೆ ಪರ ಹಾಗು ವಿರೋಧಗಳು ಇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top