ಸಮಾಚಾರ

ಸಾಫ್ಟ್ ವೇರ್ ಇಂಜಿನಿಯರ್ ಒಬ್ರು ಜಿಲ್ಲಾಧಿಕಾರಿಯಾದ ಯಶೋಗಾಥೆ

ಐಎಎಸ್‌, ಐಎಫ್ಎಸ್‌, ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ರಾಜ್ಯ ಸರ್ಕಾರ ಮುಂದಾಗಿದ್ದು ಅನೇಕ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಪೊಮ್ಮಲ ಸುನೀಲ್‍ ಕುಮಾರ್ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ಆಗಿ ನೇಮಕ ಮಾಡಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಎಂ.ಕನಗವಲ್ಲಿ ರವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪೊಮ್ಮಲ ಸುನೀಲ್‍ ಕುಮಾರ್ ಅವರು 2011 ರಲ್ಲಿ ಐಎಎಸ್ ಪಾಸ್ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ಸಾಫ್ಟ್ ವೆರ್ ಇಂಜಿನಿಯರ್ ಆಗಿದ್ದರು ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶ ರಾಜ್ಯದ ಕಡಪ ಜಿಲ್ಲೆಯವರಾದ ಪೊಮ್ಮಲ ಸುನೀಲ್‍ ಕುಮಾರ್ ಅವರು ಇಲೆಕ್ಟ್ರಿಕ್ ಇಂಜಿನಿಯರ್ ವಿಭಾಗದಲ್ಲಿ ಪದವಿ ಮುಗಿಸಿದ್ದಾರೆ. ತಮ್ಮ ಇಂಜಿನಿಯರಿಂಗ್ ಮುಗಿದ ಬಳಿಕ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಮೊದಲು ಚೆನೈ ನಲ್ಲಿ ಕೆಲಸ ಮಾಡಿ ಬಳಿಕ ಪ್ರಮೋಷನ್ ಹೊಂದಿ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಕೂಡ ಕೆಲಸ ಮಾಡಿದರು. 7 ವರ್ಷ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿದರು.

 

 

 

7 ವರ್ಷದ ಬಳಿಕ ಸಾಫ್ಟ್ವೇರ್ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್‍ಸಿ ಪರೀಕ್ಷೆ ಬರೆಯಬೇಕೆಂಬ ಯೋಚನೆ ಮಾಡಿದರು. ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ಮಾಡಿ 2011 ರಲ್ಲಿ ಯುಪಿಎಸ್‍ಸಿ ಪಾಸಾದರು. ತಮ್ಮ ಟ್ರೇನಿಂಗ ಮುಗಿಸಿ ಮೊದಲಿಗೆ ಹಾಸನ ಜಿಲ್ಲೆಯಲ್ಲಿ ಐಎಎಸ್ ಟ್ರೈನಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು ಎಂದು ತಿಳಿದು ಬಂದಿದೆ.

ಇದಾದ ಬಳಿಕ ಕರ್ನಾಟಕದ ವಿವಿಧ ಇಲಾಖೆಗಳಲ್ಲಿ ಜನತೆಗೆ ಅಮ್ಮ ಅಮೂಲ್ಯ ಸೇವೆ ಸಲ್ಲಿಸಿರುವ ಪೊಮ್ಮಲ ಸುನೀಲ್‍ ಕುಮಾರ್ ಅವರನ್ನು ಸದ್ಯ ಕೊಪ್ಪಳ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top