ಸಮಾಚಾರ

ಪವಿತ್ರ ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಈ ನಟಿಯನ್ನು ರಕ್ಷಿಸಿದ ನಿರ್ದೇಶಕ

ಸಿನಿಮಾ ಚಿತ್ರೀಕರಣ ಮಾಡುವಾಗ ಎಷ್ಟೇ ಮುಂಜಾಗೂರತೆ ತೆಗೆದುಕೊಂಡರು ಕೆಲವೊಂದು ಬಾರಿ ಚಿತ್ರತಂಡದ ಸದಸ್ಯರ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಗಂಗಾ ನದಿಯಲ್ಲಿ ಮುಳುಗುತ್ತಿದ್ದ ಹಾಲಿವುಡ್ ನಟಿಯೊಬ್ಬಳು ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ ಎಂದು ತಿಳಿದು ಬಂದಿದೆ. ಸಿನಿಮಾ ಶೂಟಿಂಗ್ ನಿಮಿತ್ಯ ಗಂಗಾ ನದಿಯ ಬಳಿ ತೆರಳಿದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

 

 

ಖ್ಯಾತ ನಿರ್ದೇಶಕ ಅತುಲ್ ಗಾರ್ಗ್ ಅವರ ‘ದಿ ಲೆಜೆಂಡ್ ಆಫ್ ಪಿಕಾಕ್’ ಸಿನಿಮಾ ಚಿತ್ರೀಕರಣದ ಬನಾರಸ್ ನಲ್ಲಿ ಜೋರಾಗಿಯೇ ನಡೆಯುತಿತ್ತು. ಚಿತ್ರ ತಂಡದ ಎಲ್ಲ ಸದಸ್ಯರು ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ನಿರ್ದೇಶಕರಿಗೆ ಟಾಮಿ, ಗಂಗಾ ನದಿಯಲ್ಲಿ ಮುಳುಗ್ತಿದ್ದಾಳೆಂಬ ಸಂದೇಹ ಬಂದಿದೆ. ತಕ್ಷಣ ತಂಡದ ನೆರವಿನಿಂದ ಟಾಮಿಯನ್ನು ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಸುರಕ್ಷಿತವಾಗಿ ಮೇಲೆ ಬಂದ ನಟಿ ಟಾಮಿ ನಂತರ ಮಾತನಾಡಿ ತನಗೆ ರಕ್ಷಣೆ ಮಾಡಿದ ಎಲ್ಲರಿಗು ಧನ್ಯವಾದ ತಿಳಿಸಿದ್ದಾರೆ. ನಿರ್ದೇಶಕ ಅತುಲ್, ‘ದಿ ಲೆಜೆಂಡ್ ಆಫ್ ಪಿಕಾಕ್’ ಮೂಲಕ ಹಾಲಿವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಬನಾರಸ್ ನಲ್ಲಿ ಸಿನಿಮಾದ ಶೇಕಡಾ 45 ರಷ್ಟು ಚಿತ್ರೀಕರಣ ಮುಗಿದಿದೆ. ಉಳಿದ ಶೂಟಿಂಗ್ ಅಮೆರಿಕಾ ಹಾಗೂ ಟರ್ಕಿಯಲ್ಲಿ ನಡೆಯಲಿದೆ. ಡಿಸೆಂಬರ್ ನಲ್ಲಿ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top