ಮನೋರಂಜನೆ

ಯಶ್ ಗಡ್ಡಕ್ಕೆ ಕತ್ತರಿ ಬೀಳಲು ಡೇಟ್ ಫಿಕ್ಸ್.

ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಬಿಟ್ಟಿರುವ ಮಣಗಟ್ಟಲೆ ಗಡ್ಡಕ್ಕೆ ಕೊನೆಗೂ ಕತ್ತರಿ ಬೀಳುವ ಗಳಿಗೆ ಸನ್ನಾಹದಲ್ಲಿದೆ. ಕೆಜಿಎಫ್ ಚಿತ್ರಕ್ಕಾಗಿ ವರ್ಷಗಳ ಕಾಲದಿಂದಲೂ ಶೇವ್ ಮಾಡಿಸದೇ ಗಡ್ಡ ಬೆಳೆಸಿಕೊಂಡು ಬಂದಿದ್ದ ಯಶ್ ಕೆಜಿಎಫ್ ಚಿತ್ರದ ಚಿತ್ರೀಕರಣ ಮುಂದುವರಿದಷ್ಟೂ ಗಡ್ಡ ಬೆಳೆದುಕೊಳ್ಳುತ್ತಿತ್ತು.. ಚಿತ್ರದ ಮೇಲಿನ ನಿರೀಕ್ಷೆ ಯಶ್ ಬಿಟ್ಟಿರೋ ಉದ್ದ ಗಡ್ಡದ ಎಸಳಿನಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ ಮಾಧ್ಯಮದವರೂ ಒಳಗೊಂಡಂತೆ ಅನೇಕರು ಗಡ್ಡ ಯಾವಾಗ ತೆಗೆಯುತ್ತೀರಾ? ಎಂಬ ಸಾಮಾನ್ಯ ಪ್ರಶ್ನೆಯನ್ನು ಯಶ್’ಗೆ ಪದೇ ಪದೇ ಕೇಳುತ್ತಿದ್ದರು. ಈಗ ಅವರೆಲ್ಲಗೂ ಉತ್ತರ ಕೊಡಲು ರಾಕಿಂಗ್ ಸ್ಟಾರ್ ಸಜ್ಜಾಗಿದ್ದಾರೆ.

 

 

ಆಗಸ್ಟ್‌ 7 ರಿಂದ ಕೆಜಿಎಫ್‌ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣವಿದ್ದು, ಹಾಡಿನ ಶೂಟಿಂಗ್‌ ಮುಗಿದ ನಂತರ ಯಶ್‌ ಗಡ್ಡ ತೆಗೆಯಲಿದ್ದಾರೆ. ಕೆಜಿಎಫ್‌ ನಂತರ ಆರಂಭವಾಗುವ ಕಿರಾತಕ2 ಸಿನಿಮಾದಲ್ಲಿ ಯಶ್‌ ತಮ್ಮ ಲುಕ್ಕನ್ನು ಕೊಂಚ ಬದಲಾಯಿಸಿಕೊಳ್ಳಲಿದ್ದಾರಂತೆ. ನಂತರ ಯಶ್ ಅವರನ್ನು ಮೊದಲ ಕುರುಚಲು ಗಡ್ಡದ ಲುಕ್ ನಲ್ಲಿ ನೋಡಬಹುದು.

ಕೆಜಿಎಫ್ ನಂತರ ಯಶ್ ಅವರ ಚಿತ್ರಕ್ಕೆ “ಮೈ ನೇಮ್ ಇಸ್ ಕಿರಾತಕ” ಎಂದು ಹೆಸರನ್ನು ಇಡಲಾಗಿದ್ದು ಜಯಣ್ಣ ಫಿಲಂಸ್‍ ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಇಬ್ಬರು ನಾಯಕಿಯರಿರಲಿದ್ದು ಅವರ ಆಯ್ಕೆಯೂ ಅದಾಗಲೇ ಫೈನಲ್ ಆಗಿದೆ. ಮೈಸೂರು ಸುತ್ತ ಮುತ್ತ ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top