ಸಮಾಚಾರ

ಪಾಪ ನಿರ್ದೇಶಕ ಆಸ್ಪತ್ರೆಗೆ ಸೇರುವಂತೆ ಮಾಡಿದ ನಟಿ ಅಂಜಲಿ,ಹಾಗಾದ್ರೆ ಈ ನಟಿ ಮಾಡಿದಾದ್ರು ಏನು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಭಾರಿ ಬಜೆಟ್ ಸಿನಿಮಾ ‘ರಣವಿಕ್ರಮ’ ದಲ್ಲಿ ನಾಯಕಿಯಾಗಿ ಅಭಿನಯ ಮಾಡಿದ್ದ ಅಂಜಲಿ ಅವರು ಆಮೇಲೆ ಕಾಣದ ಸಿನೆಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅನೇಕ ತೆಲುಗು ಸಿನೆಮಾಗಳಲ್ಲಿ ಅಭಿನಯ ಮಾಡುತ್ತ ಹೆಸರು ಮಾಡಿದರು.

ಅಂಜಲಿ ತಮಿಳು ಸಿನಿಮಾದಲ್ಲಿ ಅಭಿನಯ ಮಾಡಿದ ಬಳಿಕ ಅವರಿಗೆ ಸಾಲು ಸಾಲು ಸಿನಿಮಾ ಗಳಲ್ಲಿ ಅಭಿನಯ ಮಾಡುವ ಅವಕಾಶ ಸಿಗುತ್ತಿದೆ. ಹೀಗಿರುವಾಗಲೇ ಕೆಲವು ದಿನಗಳ ಹಿಂದೆ ಅಂಜಲಿ ನಿರ್ದೇಶಕರೊಬ್ಬರನ್ನು ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. ಆದರೆ ಆಕೆ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ. ಸದ್ಯಕ್ಕೆ ಅಂಜಲಿ ’ಲಿಸಾ’ ಎಂಬ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಬರುವ ದೃಶ್ಯವೊಂದರಲ್ಲಿ ಅಂಜಲಿ ದೋಸೆ ಮಾಡುತ್ತಾ ಕೋಪದಿಂದ ದೋಸೆಹಲ್ಲೆಯನ್ನು ಜೋರಾಗಿ ಎಸೆಯಬೇಕಿರುತ್ತದೆ. ಆಗಲೇ ಅವಘಡ ನಡೆದಿದ್ದು, ಮುಂದೆ ಓದಿ.

 

 

ಹಾಗೆ ದೃಶ್ಯದಲ್ಲಿ ಎಸೆದ ದೋಸೆಹಲ್ಲೆ ಅಲ್ಲೇ ಕ್ಯಾಮೆರಾ ಬಳಿ ನಿಂತಿದ್ದ ನಿರ್ದೇಶಕರ ಹಣೆಗೆ ಬಿದ್ದಿದೆ ಇದರಿಂದ ಅವರ ಹಣೆಗೆ ಪೆಟ್ಟಾಗಿ ರಕ್ತ ಸುರಿದಿದೆ. ಕೂಡಲೇ ನಿದೇಶಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿ ಹೊಲಿಗೆ ಹಾಕಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಅಂಜಲಿ ತುಂಬಾ ಬೇಜಾರಾಗಿದ್ದರೆ ಎನ್ನಲಾಗಿದೆ. ನನ್ನ ತಪ್ಪಿಗೆ ಪಾಪ ನಿರ್ದೇಶಕರು ತೊಂದರೆ ಅನುಭವಿಸುವಂತಾಯಿತು ಎಂದು ಮರುಗಿದ್ದಾರೆ.

ಘಟನೆಯಿಂದ ಬೇಸರವಾಗಿರುವ ಅಂಜಲಿಗೆ ಅಭಿಮಾನಿಗಳು ಧೈರ್ಯ ಹೇಳಿದ್ದು ಶೂಟಿಂಗ್ ವೇಳೆ ಇಂತಹ ಅವಘಡಗಳು ನಡೆಯುವುದು ಸಾಮಾನ್ಯ ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top