ಸಮಾಚಾರ

ಅನುಷ್ಕಾ ಟೀಮ್ ಇಂಡಿಯಾ ಉಪನಾಯಕಿಯೇ? ಏನಿದು ಹೊಸ ವಿವಾದ

ಭಾರತ ಹಾಗು ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವೆ ಈಗಾಗಲೇ 5 ಟೆಸ್ಟ್ ಪಂದ್ಯಗಳ ಸರಣಿ ಶುರು ಆಗಿದ್ದು, ಮೊದಲ ಪಂದ್ಯದಲ್ಲಿ ಭಾರತ 31ರನ್​ಗಳ ವಿರೋಚಿತ ಸೋಲು ಅನುಭವಿಸಿದೆ. ನಾಳೆಯಿಂದ ಲಾರ್ಡ್ಸ್​​ನಲ್ಲಿ 2ನೇ ಟೆಸ್ಟ್​ ಪಂದ್ಯ ಶುರು ಆಗಲಿದೆ ಎಂದು ತಿಳಿದು ಬಂದಿದೆ.

ಇತ್ತೀಚಿಗೆ ಬಿಸಿಸಿಐ ಹೊಸ ಆದೇಶ ಹೊರಡಿಸಿದ್ದು ಮೊದಲ 3 ಟೆಸ್ಟ್ ಪಂದ್ಯದ ವೇಳೆ ಆಟಗಾರರ ಜತೆ ಅವರ ಪತ್ನಿಯರು ಹಾಗೂ ಗೆಳತಿಯರು ಇರದಂತೆ ಸೂಚಿಸಿದೆ. ಆದರೆ ನಾಯಕ ವಿರಾಟ್​ ಕೊಹ್ಲಿ ಈ ನಿಯಮವನ್ನು ಗಾಳಿಗೆ ತೋರಿದಂತೆ ಕಾಣಿಸುತ್ತಿದೆ. ಏಕೆಂದರೆ ಮೊದಲ ಟೆಸ್ಟ್​ ಪಂದ್ಯದಲ್ಲಿ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ ಪತ್ನಿ ಇದೀಗ ಲಂಡನ್​​ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಗೆ ಭೇಟಿ ನೀಡಿರುವ ಭಾರತೀಯ ಕ್ರಿಕೆಟ್​ ತಂಡದ ಸದಸ್ಯರ ಗುಂಪಿನಲ್ಲೂ ಕಾಣಿಸಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.

 

 

ಸದ್ಯ ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿಯನ್ನು ಟ್ರೊಲ್ ಮಾಡಲಾಗುತ್ತಿದೆ. ಚಿತ್ರದಲ್ಲಿ ಮೊದಲನೇ ಸಾಲಿನಲ್ಲಿ ವಿರಾಟ್ ಹಾಗು ಅನುಷ್ಕಾ ನಿಂತಿದ್ದಾರೆ. ಮೊದಲನೆಯ ಸಾಲಿನಲ್ಲಿ ಕೊಹ್ಲಿ ಜೊತೆ ಉಪನಾಯಕ ಅಜಿಂಕ್ಯ ರಹಾನೆ ಇರಬೇಕಿತ್ತು ಆದರೆ ರಹಾನೆ ಸ್ಥಾನವನ್ನು ಅನುಷ್ಕಾ ಆಕ್ರಮಿಸಿಕೊಂಡಿದ್ದಾಳೆ. ಇದು ಅನೇಕ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

 

 

 

ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 9ರಿಂದ ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top