fbpx
ಹೆಚ್ಚಿನ

ಆಗಸ್ಟ್ 11 ನೇ ತಾರೀಖು ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ,ಇದರಿಂದ ಆಗುವ ಪರಿಣಾಮ ಹಾಗೂ ಅದಕ್ಕೆ ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ತಿಳ್ಕೊಳ್ಳಿ

ಈ ವರ್ಷದ ಕೊನೆಯ ಗ್ರಹಣ ಮತ್ತು ಎರಡನೇ ಸೂರ್ಯಗ್ರಹಣ ಇದೇ ಆಗಸ್ಟ್ 11 ನೇ ತಾರೀಖು,ಶನಿವಾರ, ಅಮಾವಾಸ್ಯೆ ಮತ್ತು ಸೂರ್ಯಗ್ರಹಣ.

ಕಳೆದ ಪೌರ್ಣಮಿಯ ದಿನ ಚಂದ್ರ ಗ್ರಹಣ ಮುಕ್ತಾಯವಾಯಿತು ಮತ್ತೆ ಬರುವ ಅಮಾವಾಸ್ಯೆಯಲ್ಲಿ ಆಗಸ್ಟ್ 11 ನೇ ತಾರೀಖಿನಂದು ಸೂರ್ಯ ಗ್ರಹಣ ಇರುವುದು ತುಂಬಾ ವಿಶೇಷ. ಇದು ಈ ವರ್ಷದ ಕೊನೆಯ ಗ್ರಹಣವಾಗಿದೆ. ಸೂರ್ಯ ಗ್ರಹಣ ಇದೆ. ಆದರೆ ನಮ್ಮ ಭಾರತದಲ್ಲಿ ಗೋಚರಿಸುವುದಿಲ್ಲ.
ಈ ಸೂರ್ಯ ಗ್ರಹಣವು ವಿಳಂಭಿ ನಾಮ ಸಂವತ್ಸರದ ಆಷಾಡ ಬಹುಳ ಅಮಾವಾಸ್ಯೆಯ ದಿನ ಸೂರ್ಯ ಗ್ರಹಣ ಇದೆ ಎಂದು ಪಂಚಾಂಗಗಳಲ್ಲಿ ಉಲ್ಲೇಖಿತವಾಗಿದೆ.ಅದರೆ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಅದ್ದರಿಂದ ಯಾವುದೇ ರೀತಿಯ ಪರಿಹಾರಗಳನ್ನು ಮಾಡುವ ಅವಶ್ಯಕತೆ ಇಲ್ಲ. ಅಗಸ್ಟ್ 11 ನೇ ತಾರೀಖು ಸೂರ್ಯಗ್ರಹಣದ ಮುಂಚಿತವಾಗಿ ನಾವು ಮಾಡಬೇಕಾದ ಕೆಲಸ ಏನೆಂದರೆ ?

 

 

ಯಾರು ಕಳೆದ ಸಂಪೂರ್ಣ ಚಂದ್ರ ಗ್ರಹಣದಲ್ಲಿ ಪರಿಹಾರಗಳನ್ನು ಮಾಡಿಕೊಳ್ಳಲು ಆಗಿಲ್ಲವೋ ಅವರು ಈ ಅಮಾವಾಸ್ಯೆಯ ಒಳಗೆ ಅಂದರೆ ನಕ್ಷತ್ರ ತಿರುಗಿ ಬರುವಷ್ಟರಲ್ಲಿ ಪೌರ್ಣಮಿಯ ದಿನ ಉತ್ತಾರಾಷಾಡ ನಕ್ಷತ್ರದಲ್ಲಿ ಗ್ರಹಣ ಸಂಭವಿಸಿದ್ದರಿಂದ ಉತ್ತರಾಷಾಡ ನಕ್ಷತ್ರ ಮತ್ತೆ ಇಪ್ಪತ್ತೇಳು ದಿನಗಳ ಒಳಗಾಗಿ ಬರುವುದರಿಂದ ಅಷ್ಟರೊಳಗೆ ಪರಿಹಾರಗಳನ್ನು ಮಾಡಿಕೊಳ್ಳಬಹುದು. ಉತ್ತರಾಷಾಢ ,ಶ್ರವಣ, ಧನಿಷ್ಠ, ಭರಣಿ,ಕೃತಿಕ,ಉತ್ತರಾ ,ಅರಿದ್ರ, ಪುಷ್ಯ ,ಆಶ್ಲೇಷ ,ಪೂರ್ವ ಭಾದ್ರಪದ ನಕ್ಷತ್ರ, ರೋಹಿಣಿ ,ಹಸ್ತ ,ಚಿತ್ತ ,ವಿಶಾಖ, ಜೇಷ್ಠ,, ಮೂಲಾ ನಕ್ಷತ್ರದವರ .

ಈ ಎಲ್ಲಾ ನಕ್ಷತ್ರಗಳು ಆಗಸ್ಟ್ 11 ನೇ ತಾರೀಖು ಶನಿವಾರ ಸೂರ್ಯಗ್ರಹಣದ ಒಳಗೆ ಅಮಾವಾಸ್ಯೆ ಮುಗಿಯುವಷ್ಟರಲ್ಲಿ ಎಲ್ಲಾ ನಕ್ಷತ್ರದವರು ಪರಿಹಾರ ಮಾಡಿಕೊಂಡರೆ ತುಂಬಾ ಒಳ್ಳೆಯದು. ಸೂರ್ಯ ಗ್ರಹಣದಿಂದ ಯಾವುದೇ ರೀತಿಯ ಆಚರಣೆ ಮಾಡದೇ ಇದ್ದರೂ , ಹಿಂದಿನ ಚಂದ್ರಗ್ರಹಣದ ದೋಷಗಳನ್ನು 11 ನೇ ತಾರೀಖು ಅಮಾವಾಸ್ಯೆಯ ಒಳಗೆ ಮಾಡಿದರೆ ಸಂಪೂರ್ಣ ಚಂದ್ರಗ್ರಹಣದ ದೋಷಗಳು ನಿವಾರಣೆಯಾಗುತ್ತವೆ.
ಶನಿವಾರ ಅಗಸ್ಟ್ 11 ನೇ ತಾರೀಖು ,ಶನಿವಾರ 2018ರಂದು ಈ ವರ್ಷದ ಮೂರನೆಯ ಸೂರ್ಯಗ್ರಹಣ ಮತ್ತು ಈ ವರ್ಷ ಗ್ರಹಣಗಳು ಸಂಭವಿಸುವುದರಿಂದ ನಿಯಮಗಳನ್ನು ಪಾಲಿಸಲೇಬೇಕು ಎಂದೇನೂ ಇಲ್ಲ.ಈ ಸೂರ್ಯ ಗ್ರಹಣದ ಸಮಯ ಸ್ಪರ್ಶ ಕಾಲ 2 ಗಂಟೆ 29 ನಿಮಿಷದಿಂದ ಮೋಕ್ಷಕಾಲ 3 ಗಂಟೆ 46 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top