ಸಮಾಚಾರ

ಒಂದೊಳ್ಳೆ ಕೆಲಸಕ್ಕೆ ನಾ ಮುಂದು-ನೀ ಮುಂದು ಅಂತಾ ಕೂದಲು ದಾನ ಮಾಡಿದ ಕಾಲೇಜು ಹುಡ್ಗಿರು

ಮಾರಣಾಂತಿಕ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯವಾಗದ ಅನೇಕ ಪ್ರಕರಣಗಳು ನಮ್ಮ ಕಣ್ಣು ಮುಂದಿವೆ. ಇವುಗಳಲ್ಲಿ ಹೆಚ್ಚು ಭಯಾನಕ ಹುಟ್ಟಿಸುವ ಮತ್ತು ಹೆಚ್ಚು ಘಾಸಿಗೊಳಿಸುವ ಕಾಯಿಲೆ ಎಂದರೆ ಕ್ಯಾನ್ಸರ್. ಕ್ಯಾನ್ಸರ್ ರೋಗಿಗಳಿಗೆ ಕಿಮೋಥೆರಪಿ ಮಾಡಿದಾಗ ಅವರು ಕೂದಲು ಕಳೆದುಕೊಳ್ಳುತ್ತಾರೆ. ಕೂದಲು ಕಳೆದುಕೊಳ್ಳುವ ಅವರು ಖಿನ್ನತೆಗೆ ಒಳಲಾಗುತ್ತಾರೆ. ಕ್ಯಾನ್ಸರ್ ರೋಗಿಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಚೈತನ್ಯ ತುಂಬಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

 

 

ಬೆಂಗಳೂರು ನಗರದ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಉತ್ಸಾಹದಿಂದ ತಮ್ಮ ತಮ್ಮ ಒಂದು ತುಂಡು ಕೂದಲನ್ನ ದಾನ ಮಾಡಿದರು ಎಂದು ತಿಳಿದು ಬಂದಿದೆ. ಗಿಫ್ಟ್ ಹೇರ್, ಗಿಫ್ಟ್ ಕಾನ್ಫಿಡೆನ್ಸ್ ಎನ್ನುವ ಅಭಿನಯದ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಅನೇಕಕರು ತಮ್ಮ 8-10 ಇಂಚು ಕೂದಲನ್ನು ದಾನ ಮಾಡಿದರು. ಆದರೆ ಒಬ್ಬಳು ವಿದ್ಯಾರ್ಥಿನಿ ದೃತ್ತಿ ಎಂಬುವವರು ಸಂಪೂರ್ಣ ಕೂದಲನ್ನು ಬೋಳಿಸಿ ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ದೃತ್ತಿ ಮಾಡಿರುವ ಈ ಮಹಾನ್ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲೆ ಮೂಲೆಯಿಂದ ಅವಳಿಗೆ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ಅನೇಕ ವಿದ್ಯಾರ್ಥಿನಿಯರು ತಮ್ಮ ಸ್ವ ಇಚ್ಛೆಯಿಂದ ದಾನ ಮಾಡಿದ್ದ 8-10 ಕೂದಲನ್ನು ಚೆರಿಯನ್‌ ಫೌಂಡೇಶನ್ ಸಂಸ್ಥೆಗೆ ಹಸ್ತಾಂತರ ಮಾಡಲಾಯಿತು ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top