ಸಮಾಚಾರ

ಪ್ರಿಯಕರ ರಣವೀರ್ ನ ಈ ಫೋಟೋ ನೋಡಿ ಫಿದಾ ಆದ ಪ್ರೇಯಸಿ ದೀಪಿಕಾ,ಯಾವುದು ಆ ಫೋಟೋ ಗೊತ್ತಾ

ಬಾಲಿವುಡ್ ನ ಹಾಟ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಮದುವೆ ಈಗಾಗಲೇ ಖಾತರಿಯಾಗಿದೆ. ಇನ್ನು 4 ತಿಂಗಳಿನಲ್ಲಿ ಈ ಜೋಡಿ ಹಸೆಮಣೆ ಏರಲಿದೆ ಎಂದು ಅವರ ಕುಟುಂಬದ ಅಧಿಕೃತ ಮೂಲಗಳು ಮಾಹಿತಿ ನೀಡಿದೆ. ಈ ಜೋಡಿಗೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಕಮೆಂಟ್ ಮಾಡುತ್ತ ಇರುತ್ತಾರೆ. ಇವರು ಮಾಡುವ ಕಾಮೆಂಟ್ ಅನೇಕರ ಗಮನ ಸೆಳೆಯುತ್ತದೆ.

ಆಗಾಗ ಸಾಮಾಜಿಕ ಜಾಲತಾಣದಲ್ಲಿ ಲೇಟೆಸ್ಟ್ ಫೋಟೋ ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳಿಗೆ ದರ್ಶನ ನೀಡುವ ರಣವೀರ್ ಕಪೂರ್ ಅವರು ಇತ್ತೀಚಿಗೆ ನೀಲಿ ಬಣ್ಣದ ಸೂಟ್ ನಲ್ಲಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದರು. ಅನೇಕ ಅಭಿಮಾನಿಗಳು ಈ ಫೋಟೋಗೆ ಕಾಮೆಂಟ್ ಮಾಡಿದರು. ಇನ್ನು ದೀಪಿಕಾ ಕೂಡ ನಾನೇಕೆ ಸುಮ್ಮನೆ ಕುಳಿತುಕೊಳ್ಳಲಿ ಎಂದು ತಾನು ಕಾಮೆಂಟ್ ಮಾಡಿದ್ದಾಳೆ.

 

 

 

ರಣವೀರ್ ಚಿತ್ರಕ್ಕೆ “Monday Blues?” ಎಂದು ಶೀರ್ಷಿಕೆ ಹಾಕಿದ್ದ. ಇದಕ್ಕೆ ದೀಪಿಕಾ “uffff!!!never!!!?” ಎಂದು ಕಮೆಂಟ್ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

ಸದ್ಯ ದೀಪಿಕಾ ಇದೀಗ ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡುತ್ತಿರುವ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಹಾಗೆಯೇ ರಣವೀರ್ ತಾವು ಝೋಯಾ ಅಖ್ತರ್ ನಿರ್ದೇಶಿಸುತ್ತಿರುವ ಗಲ್ಲಿ ಬಾಯ್ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top