fbpx
ಸಮಾಚಾರ

ಆಕ್ಟಿಂಗ್ ಬಿಟ್ಟು ಬೀದಿಯಲ್ಲಿ ಮೂಸಂಬಿ ಜ್ಯೂಸ್ ಮಾರಲು ಶುರು ಹಚ್ಕೊಂಡ ಡಾಲಿ ಧನಂಜಯ್ ,ಏನ್ ಇದು ಟ್ವಿಸ್ಟ್ ,ನೀವೇ ನೋಡಿ.

ತಮ್ಮ ಅಮೋಘ ಅಭಿನಯದ ಹಿಟ್ ಸಿನಿಮಾ ನೀಡುತ್ತಾ ಏರುಮುಖದಲ್ಲಿ ಸಾಗುತ್ತಿರುವ ಸ್ಯಾಂಡಲ್ವುಡ್ ನಟ ಧನಂಜಯ್ ಈಗ ರಸ್ತೆ ಬದಿ ಮೋಸಂಬಿ ಜ್ಯೂಸ್ ಮಾರಲು ಶುರು ಮಾಡಿದ್ದಾರೆ, ನಿಮ್ಮ ತಲೆಯಲ್ಲೇ ಏಕೆ? ಎಂಥಾ? ಎಂಬ ವಿಚಾರಗಳು ಸಾಮಾನ್ಯವಾಗಿ ಬಂದಿರುತ್ತವೆ. ತೆಲುಗು ಸಿನಿಮಾ ಕೂಡ ಮಾಡ್ತಿದ್ದ ಈ ಯಪ್ಪಾ ಇದ್ದಕ್ಕಿದ್ದ ಹಾಗೆ ಮೋಸಂಬಿ ಜ್ಯೂಸ್ ಮಾರಲು ಭಲವಾದ ಕಾರಣವಿದೆ. ಮುಂದೆ ಓದಿ.

ಕನ್ನಡದ ಖ್ಯಾತ ಚಾನೆಲ್ ಉದಯ ವಾಹಿನಿಯಲ್ಲಿ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮ ಇದೇ ಜುಲೈ 15 ರಿಂದ ರವಿವಾರದಿಂದ ಶುರು ಆಗಿದೆ. ಜನಪ್ರಿಯ ಸೆಲಬ್ರಿಟಿಗಳು ಜನ ಸಾಮಾನ್ಯರಂತೆ ಕೆಲಸ ಮಾಡಿ, ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವುದೇ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದ ವಿಶೇಷ. ಈ ವಾರದ ಸಂಚಿಕೆಯಲ್ಲಿ ಆಗಮಿಸಿ ಟಗರು ಖ್ಯಾತಿಯ ಧನಂಜಯ್ ಅವರು ತಾವೇ ಮೋಸಂಬಿ ಜ್ಯೂಸ್ ತಯಾರಿಸಿ ಅದನ್ನು ಮಾರಾಟ ಮಾಡಿ ಕಷ್ಟದಲ್ಲಿ ಕುಟುಂವೊಂದಕ್ಕೆ ಸಹಾಯ ಮಾಡಿದ್ದಾರೆ. ಆ ಕುಟುಂಬ ಯಾವುದು ತಿಳಿಯಲು ಮುಂದೆ ಓದಿ.

 

 

 

ಮೀನು ಹಿಡಿದು ಜೀವನ ನಡೆಸುತ್ತಿದ್ದ ಯಜಮಾನ ರವಿ ಪಾರ್ಶ್ವವಾಯು ನಿಂದ ಬಲಗೈ ಸ್ವಾಧೀನ ಕಳೆದು ಕೊಂಡ ಕಾರಣ ಅವರ ಇಬ್ಬರು ಹೆಣ್ಣು ಮಕ್ಕಳೇ ತಂದೆಯ ಹಾಗೆ ಬೆಳಗಿನ ಜಾವ ಐದು ಗಂಟೆಗೆ ಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿದು ಮಾರಿ ಅದರಿಂದ ಬಂದ ಹಣದಿಂದ ತಂದೆಯ ಚಿಕಿತ್ಸೆ ಮತ್ತು ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದರ ಜೊತೆಗೆ ತಮ್ಮಿಬ್ಬರ ವಿದ್ಯಾಭ್ಯಾಸವನ್ನು ಬಿಡದೆ ಸಂಸಾರವನ್ನು ನಡೆಸುತ್ತಾ ಬರುತ್ತಿದ್ದಾರೆ. ಈ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲು ಟಗರು ಖ್ಯಾತಿಯ ಧನಂಜಯ್ ಈ ವಾರದ ‘ಸದಾ ನಿಮ್ಮೊಂದಿಗೆ’ ಕಾರ್ಯಕ್ರಮದಲ್ಲಿ ಮೋಸಂಬಿ ಜ್ಯೂಸ್ ಮಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top