ಸಮಾಚಾರ

ರಾಮನಂತೆ ಇರುವ ದೂತ್ಪೇಡಾ ದಿಗಂತ್ಗೆ ಐಂದ್ರಿತಾ ಸೀತೆ ಅಲ್ವಂತೆ ,ಏನ್ ಇದು ರಾಮ ಸೀತೆ ಕಥೆ ,ನೋಡಿ .

ಸ್ಯಾಂಡಲ್ ವುಡ್ ನಲ್ಲಿ ಆನ್ ಸ್ಕ್ರೀನ್ ಹಾಗು ಆಫ್ ಸ್ಕ್ರೀನ್ ನಲ್ಲಿಯೂ ಕ್ಯೂಟ್ ಜೋಡಿ ಎನ್ನಿಸಿಕೊಂಡಿರುವ ದಿಗಂತ್ ಮತ್ತು ಐಂದ್ರಿತಾ ರೇ ಆಗಾಗ ಸುದ್ದಿಯಲ್ಲಿರುತ್ತಾರೆ. ಇಡೀ ಕನ್ನಡ ಚಿತ್ರರಂಗದಲ್ಲಿ ಸ್ವೀಟ್​, ಕ್ಯೂಟೆಸ್ಟ್​ ಜೋಡಿ​ ಅಂದ್ರೆ ಅದು ದೂತ್​ಪೇಡಾ ದಿಗಂತ್​ ಮತ್ತು ಐಂದ್ರಿತಾ ಅಂತಾರೆ. ಮುದ್ದಾದ ಜೋಡಿ ಇವರು ಎಂದು ಬೆರಳು ಮಾಡುತ್ತಾರೆ.

ಸದ್ಯ ಐಂದ್ರಿತಾ ಬಾಲಿವುಡ್ ನಲ್ಲಿ ರೈ ಸೀತೆಯ ಪಾತ್ರದಲ್ಲಿ ಅಭಿನಯ ಮಾಡುತ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಈಗ ಹೊಸ ಸುದ್ದಿಯೊಂದು ಬಂದಿದ್ದು ಬಾಲಿವುಡ್ ನಲ್ಲಿ ದಿಗಂತ್ ರಾಮನ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಬಾಲಿವುಡ್ ನಲ್ಲಿ ರಾಮ ಸೀತೆ ಪಾತ್ರದಲ್ಲಿ ಅಭಿನಯ ಮಾಡಲು ಈ ಜೋಡಿ ಸಜ್ಜಾಗಿದೆ. ಆದರೆ ಇದರಲ್ಲಿ ಟ್ವಿಸ್ಟ್ ಇದೆ ಐಂದ್ರಿತಾ ಬೇರೆ ರಾಮನಿಗೆ ಸೀತೆಯಾದ್ರೆ, ದಿಗಂತ್ ಬೇರೆ ಸೀತೆಗೆ ರಾಮನಾಗಿದ್ದಾರೆ..ಮುಂದೆ ಓದಿ

 

 

ಹೌದು ಇಬ್ಬರು ಬೇರೆ ಬೇರೆ ಸಿನಿಮಾದಲ್ಲಿ ಸೀತೆ ಹಾಗು ರಾಮನ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ. ನಿರ್ದೇಶಕ ಕುನಾಲ್​​ ಕೊಹ್ಲಿ,ಈಗ ರಾಮಾಯಣ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಮನ ಪಾತ್ರಕ್ಕೆ ತುಂಬಾ ಹುಡುಕಾಟ ನಡೆಸಿದ್ದ ಕುನಾಲ್​​ ಕೊಹ್ಲಿಗೆ ದಿಗಂತ್​​ ಸಿಕ್ಕಿದ್ದಾರೆ. ಇನ್ನು ಈಗಾಗಲೆ ರಾಮಾಯಣ ಕಥೆ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಗೊತ್ತಿರುವುದನ್ನೇ ಭಿನ್ನವಾಗಿ ತೋರಿಸೋಕೆ ಕುನಾಲ್​​ ಹೊರಟಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಸದ್ಯದಲ್ಲೇ ದಿಗಂತ್ ಹಾಗು ಐಂದ್ರಿತಾ ರೈ ನಿಶ್ಚಿತಾರ್ಥದ ಬಗ್ಗೆ ಮಾತು-ಕಥೆ ನಡೆಯಲಿದೆ. ಯಶ್ -ರಾಧಿಕಾ, ಮೇಘನಾ-ಚಿರಂಜೀವಿ ಸರ್ಜಾ ಜೋಡಿಯ ಸಾಲಿಗೆ ದಿಗಂತ್ ಮತ್ತು ಐಂದ್ರಿತಾ ರೇ ಕೂಡ ಇನ್ನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top