ಸಮಾಚಾರ

ಬರೋಬ್ಬರಿ 10 ವರ್ಷಗಳ ನಂತರ ಕನ್ನಡಕ್ಕೆ ಬಂದ ‘ಜಿಂಕೆ ಮರಿ’ ನಂದಿತಾ.

2008ರಲ್ಲಿ ಲೂಸ್ ಮಾದ ಯೋಗಿ ಮುಖ್ಯ ಭೂಮಿಕೆಯಲ್ಲಿ ತೆರೆಗೆ ಬಂದಿದ್ದ ‘ನಂದ ಲವ್ಸ್ ನಂದಿತ’ ಸಿನಿಮಾದ ‘ಜಿಂಕೆ ಮರೀನಾ ಜಿಂಕೆ ಮರೀನಾ’ ಹಾಡಿಗೆ ಸೊಂಟ ಬಳುಕಿಸಿದ್ದ ಚೆಲುವೆ ನಟಿ ಶ್ವೇತಾ. ಆನಂತ್ರ ಕನ್ನಡ ಚಿತ್ರರಂಗದಿಂದ ಸಂಪೂರ್ಣ ಮಾಯವಾದಂತಿದ್ದ ಶ್ವೇತಾ ಇದೀಗ ಅಖಂಡ ಹತ್ತು ವರ್ಷಗಳ ನಂತರ ಮತ್ತೆ ಚಂದಾವನಕ್ಕೆ ಮರಳಿದ್ದಾಳೆ.. ಹೌದು, ರಾಕಿಂಗ್ ಸ್ಟಾರ್ ಯಶ್ ಅವರ ಮುಖ್ಯ ಭೂಮಿಕೆಯಲ್ಲಿ ಕಿರಾತಕ2 ಸಿನಿಮಾ ಬರಿಯುತ್ತಿದೆ ಎಂದು ಸುದ್ದಿಯಿದೆಯಲ್ಲಾ, ಆ ಸಿನಿಮಾಗೆ ಶ್ವೇತ ಯಶ್ ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ.

 

 

ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು ಅದರಲ್ಲಿ ಒಬ್ಬರಾಗಿ ‘ಶ್ವೇತಾ’ ನಟಿಸುತ್ತಿದ್ದರೇ ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಚಿತ್ರತಂಡ ತೀವ್ರ ಹುಡುಕಾಟ ನಡೆಸುತ್ತಿದೆ. ಉಳಿದಂತೆ ಇನ್ನಷ್ಟೇ ಉಳಿದ ಕಲಾವಿದರ ಮತ್ತು ತಾಂತ್ರಿಕ ವರ್ಗದವರ ಆಯ್ಕೆಗಳ ಪ್ರಕ್ರಿಯೆ ಆರಂಭಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆಯಂತೆ.

ರ್ಯಾಂಬೋ 2 ಸಿನಿಮಾ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ಅವ್ರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಜಯಣ್ಣ ಫಿಲಂಸ್‍ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಆಗಸ್ಟ್ 27ರಂದು ಸೆಟ್ಟೇರುತ್ತಿದ್ದು ಮೈಸೂರು ಸುತ್ತ ಮುತ್ತ ಹಾಗೂ ದುಬೈನಲ್ಲಿ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದ್ರೆ ಈ ಹಿಂದೆ ರಾಜಾಹುಲಿ, ಕಿರಾತಕ ಸಿನಿಮಾಗಳಲ್ಲಿ ಮಾಡಿದ್ದಂತಹ ಮಂಡ್ಯದ ಹುಡ್ಗನ ಶೈಲಿಯ ಪಾತ್ರವನ್ನೇ ಈ ಹೊಸ ಚಿತ್ರದಲ್ಲೂ ಯಶ್ ಮಾಡಲಿದ್ದಾರಂತೆ.. ಆರಂಭದಲ್ಲಿ ಈ ಚಿತ್ರಕ್ಕೆ ಕಿರಾತಕ-2 ಚಿತ್ರ ಇಡಲಾಗಿದೆ ಎಂದು ಸುದ್ದಿಯಾಗಿತ್ತು ಆದರೆ ಆ ಟೈಟಲ್ ಕಿರಾತಕ ಸಿನಿಮಾ ನಿರ್ದೇಶಿಸಿದ್ದ ಪ್ರದೀಪ್ ರಾಜ್ ಅವರ ಬಳಿ ಇರುವುದರಿಂದ ಯಶ್ ಚಿತ್ರಕ್ಕೆ “ಮೈ ನೇಮ್ ಇಸ್ ಕಿರಾತಕ” ಎಂದು ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top