fbpx
ದೇವರು

ಈ ದೇವರಿಗೆ ಸಂಕಲ್ಪ ಮಾಡಿ 1ತೆಂಗಿನ ಕಾಯಿ ಕಟ್ಟಿ 41ಪ್ರದಕ್ಷಣೆ ಹಾಕಿದರೆ ಸಾಕಂತೆ ,ನಿಮ್ಮ ಮನಸಿನ ಎಲ್ಲ ಕೋರಿಕೆಗಳು ಈಡೇರುತ್ತೆ,ಈ ದೇವರ ಮಹಿಮೆ ಗೊತ್ತಾದ್ರೆ ಖಂಡಿತಾ ನೀವು ಈ ದೇವಸ್ಥಾನಕ್ಕೆ ಹೋಗ್ಬರ್ತೀರ.

ಬೆಂಗಳೂರಿನ ಗಿರಿನಗರದ ಕಾರ್ಯಸಿದ್ದಿ ಆಂಜನೇಯ ಕ್ಷೇತ್ರದ ಮಹಿಮೆ ಏನೆಂದು ನಿಮಗೆ ಗೊತ್ತಾ ?

ಈ ಮಂದಿರವನ್ನು ಕಾರ್ಯಸಿದ್ದಿ ಹನುಮ ಕ್ಷೇತ್ರ ಎಂದು ಕರೆಯುತ್ತಾರೆ. ಆದರೆ ಇಲ್ಲಿನ ಮೂಲ ದೇವರು ಗುರು ದತ್ತಾತ್ರೇಯ ಸ್ವಾಮಿ. ಗುರುವಿನ ಸನ್ನಿಧಿಯಲ್ಲಿ ಹನುಮಂತ ದೇವರ ಉಪಾಸನೆ ಆಗುವಂತಹ ಒಂದು ವಿಶಿಷ್ಟವಾದ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಸಾಕಷ್ಟು ಅಂಶಗಳನ್ನು ತಿಳಿದುಕೊಳ್ಳುವುದು ಇದೆ. ಈ ದೇವಾಲಯವನ್ನು ನಿರ್ಮಾಣ ಮಾಡಿದವರು ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು .ದತ್ತ ದೇವರ ಉಪಾಸಕರಾದ ಸ್ವಾಮೀಜಿಯವರು, ಈ ಕ್ಷೇತ್ರದಲ್ಲಿ ದತ್ತಾಂಶ ಸಂಭೂತ ಹೊಂದಿರುವ ಆಂಜನೇಯನನ್ನು ಸ್ಥಾಪಿಸಿದ್ದಾರೆ .
ಇಲ್ಲಿಗೆ ಬರುವಂತಹ ಭಕ್ತರಿಗೆ ಮುಖ್ಯವಾಗಿ ಎರಡು ಅಂಶಗಳು ಗಮನ ಸೆಳೆಯುತ್ತವೆ . ಅವು ಯಾವುವು ? ಎಂದರೆ ಈ ದೇವಸ್ಥಾನದ ಹೊರಾಂಗಣದಲ್ಲಿ ತುಂಬಾ ತೆಂಗಿನಕಾಯಿಯನ್ನು ಕಟ್ಟಿರುವುದು ಕಂಡು ಬರುತ್ತದೆ ಮತ್ತು ಭಕ್ತರು ಹೀಗೆ ಅನವರತ ಪ್ರದಕ್ಷಿಣೆಯನ್ನು ಹಾಕುವಂತದ್ದು ಮತ್ತು ತೆಂಗಿನಕಾಯಿಯನ್ನು ಕಟ್ಟಿದ್ದಾರೆ, ರಕ್ಷಣೆಯನ್ನು ಮಾಡುತ್ತಿದ್ದಾರೆ ಎನ್ನುವುದು ನಾವು ತಿಳಿದುಕೊಳ್ಳಬೇಕಾಗಿರುವ ಪ್ರಮುಖವಾದ ಸಂಗತಿಯಾಗಿದೆ.

 

 

ಬಂದ ಭಕ್ತರು ಸಂಕಲ್ಪ ಮಾಡಿ, ಪ್ರದಕ್ಷಿಣೆಯನ್ನು ಹಾಕುತ್ತಾರೆ. 41 , 48, 108 ಹೀಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರದಕ್ಷಿಣೆಯನ್ನು ಪೂರೈಸುತ್ತಾರೆ. ಈ ದೇವಾಲಯದ ಒಳಗೆ ಪ್ರವೇಶ ಮಾಡಿದ ಕೂಡಲೇ ಕಣ್ಣಿಗೆ ಕಾಣಿಸುವುದು ದತ್ತಾತ್ರೇಯರು. ದತ್ತಾತ್ರೇಯರು ಒಟ್ಟಿಗೆ 16 ಅವತಾರಗಳನ್ನು ತಾಳಿದ್ದಾರೆ ಎಂದು ಹೇಳುತ್ತಾರೆ. ಅದರಲ್ಲಿ ಒಂದು ಅವತಾರ ದತ್ತ ಯೋಗಿರಾಜ ಸ್ವಾಮಿಯ ಅವತಾರ.ಈ ಅವತಾರದ ಮೂರ್ತಿಯನ್ನು ಇಲ್ಲಿ ಉಪಾಸನೆಯ ಮೂರ್ತಿಯನ್ನಾಗಿ ಸ್ಥಾಪನೆ ಮಾಡಿದ್ದಾರೆ. ಇದರ ಉದ್ದೇಶ ಇಲ್ಲಿ ದತ್ತಾತ್ರೇಯರು ಅನಘ ಸಮೇತವಾಗಿ ನೆಲೆಸಿದ್ದಾರೆ .ಅನಘ ಎಂದರೆ ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ. ದತ್ತಾತ್ರೇಯರು ಮೂಲತಃ ವಿಷ್ಣುವಿನ ಅಂಶ ಹೊಂದಿರುವವರು. ಆದ್ದರಿಂದ ಅನಘಾ ಎಂದರೆ ಲಕ್ಷ್ಮಿಯನ್ನು ಇಲ್ಲಿ ಸ್ಥಾಪನೆ ಮಾಡಿ ಪೂಜಿಸುವಂತಹ ಕ್ರಮಗಳು ಇಲ್ಲಿವೆ.
ಇಲ್ಲಿ ಹನುಮಂತ ದೇವನಿಗೆ ವೀಳ್ಯದೆಲೆಯ ಹಾರವನ್ನು ಸಮರ್ಪಿಸುತ್ತಾರೆ. ಹೀಗೆ ವೀಳ್ಯದೆಲೆಯ ಹಾರವನ್ನು ಹಾಕಿದರೆ ಹನುಮಂತನು ಸಂತೃಪ್ತನಾಗುತ್ತಾನೆ ಎನ್ನುವ ನಂಬಿಕೆ ಇದೆ . ಯಾಕೆ ಅಷ್ಟೊಂದು ಮಹತ್ವ ಇದಕ್ಕೆ ಇದೆ ? ಎನ್ನುವುದನ್ನು ತಿಳಿದುಕೊಳ್ಳೋಣ.

ವೀಳ್ಯದೆಲೆಯ ಹಾರ ಹನುಮಂತನಿಗೆ ಇಷ್ಟ. ಯಾಕೆಂದರೆ ಹನುಮಂತ ದೇವರು ಸೀತಾಮಾತೆಯ ದರ್ಶನಕ್ಕೆ ಎಂದು ಹೋದಾಗ ಸೀತಾಮಾತೆಯನ್ನು ಮಾತನಾಡಿಸಬೇಕು ಎಂದು ಸಮಯವನ್ನು ನೋಡುತ್ತಾ ಇರುತ್ತಾನೆ. ಆ ಸಮಯದಲ್ಲಿ ಆ ರಾವಣಾಸುರನ ಪರಿಚಾಲಕರು ಅಲ್ಲಿಗೆ ಪ್ರವೇಶ ಮಾಡುತ್ತಾರೆ . ಆಗ ಹನುಮಂತ ದೇವರು ಶಿಂಶುಪ ಎನ್ನುವ ವೃಕ್ಷದ ಮಧ್ಯ ನಿಂತು ತನ್ನನ್ನು ತಾನು ಮರೆಮಾಚಿ ಕೊಳ್ಳುತ್ತಾನೆ .ಆ ಶಿಂಶುಪ ವೃಕ್ಷದ ಎಲೆಗಳು ಕೂಡ ಈ ವೀಳ್ಯದ ಎಲೆಗಳ ರೀತಿಯಲ್ಲೇ ಇತ್ತಂತೆ .ಆ ಷಿಂಶುಪ ವೃಕ್ಷದ ಎಲೆಗಳು ಹನುಮಂತನಿಗೆ ರಕ್ಷಣೆ ಕೊಟ್ಟವು ಎನ್ನುವ ಕಾರಣಕ್ಕೆ ಹನುಮಂತ ದೇವರಿಗೆ ಅ ವೃಕ್ಷದ ಮೇಲೆ ಪ್ರೀತಿ ಹುಟ್ಟಿತ್ತಂತೆ.

ಆ ಷಿಂಶುಪ ವೃಕ್ಷದ ಎಲೆಗಳು ಈಗ ಸಿಗದೆ ಇರುವ ಕಾರಣಕ್ಕೂ ವೀಳ್ಯದೆಲೆಯ ವೃಕ್ಷದ ಎಲೆಯನ್ನು ಹೋಲುವ ಕಾರಣಕ್ಕೆ, ಹನುಮಂತನಿಗೆ ವೀಳ್ಯದೆಲೆಯ ಹಾರವನ್ನು ಮಾಡಿ ಸಮರ್ಪಣೆ ಮಾಡುತ್ತಾರೆ . ಹನುಮಂತ ದೇವರು ಲಂಕೆಗೆ ಹೋದಾಗ ಆ ಸೀತಾಮಾತೆಯು ತನ್ನ ಹಣೆಯಲ್ಲಿರುವ ಕುಂಕುಮವನ್ನು ಹನುಮಂತನಿಗೆ ರಕ್ಷಣೆಯಾಗಲಿ ಎಂದು ಇಡುತ್ತಾರಂತೆ. ಅದರ ಪ್ರಭಾವದಿಂದ ಮತ್ತು ಶಕ್ತಿಯಿಂದ ಹನುಮಂತನು ಲಂಕೆಯನ್ನು ದಹಿಸಿ, ಯಾವುದೇ ಪ್ರಯಾಸವಿಲ್ಲದೆ ಸುಖಕರವಾದ ಪ್ರಯಾಣವನ್ನು ಮಾಡುತ್ತಾನಂತೆ. ಹಾಗಾಗಿಯೇ ಹನುಮಂತ ದೇವರು ನಿರ್ಧರಿಸುತ್ತಾರಂತೆ ಒಂದು ಪುಟ್ಟ ಸಿಂಧೂರದಲ್ಲಿ ಎಂತಹ ಮಹಿಮೆ ಇದೆ ಎಂದು ಅರಿವಾಗಿ ಅದರ ಸಂಕೇತವಾಗಿ ಈ ಹನುಮಂತ ದೇವರಿಗೆ ಈಗ ಸಿಂಧೂರವನ್ನು ಲೇಪಿಸುತ್ತಾರೆ ಮತ್ತು ಬಂದಂತಹ ಭಕ್ತರಿಗೆ ರಕ್ಷೆಯಾಗಿ ಇವತ್ತಿಗೂ ಕೂಡ ಇಟ್ಟುಕೊಳ್ಳುವುದಕ್ಕೆ ಸಿಂಧೂರವನ್ನು ಕೊಡುತ್ತಾರೆ .

ಈ ದೇಗುಲದಲ್ಲಿ ತೆಂಗಿನಕಾಯಿಯನ್ನು ಕಟ್ಟುವಂತಹ ಪದ್ಧತಿ ಇದೆ. ಈ ತೆಂಗಿನ ಕಾಯಿಯನ್ನು ಯಾಕೆ ಕಟ್ಟುತ್ತಾರೆ ? ಹೇಗೆ ಕಟ್ಟುತ್ತಾರೆ ? ಎಷ್ಟು ದಿನ ಕಟ್ಟಬೇಕು ? ಎನ್ನುವುದನ್ನು ತಿಳಿದುಕೊಳ್ಳೋಣ .

 

 

ತೆಂಗಿನ ಕಾಯಿಯನ್ನು ಪೂರ್ಣಫಲ ಅಥವಾ ಶ್ರೀಫಲ ಎಂದು ಕೂಡ ಕರೆಯುತ್ತಾರೆ. ಈ ಶ್ರೀ ಫಲವನ್ನು ಸಮರ್ಪಣೆ ಮಾಡುವುದರ ಮೂಲಕ ಭಕ್ತಾದಿಗಳು ತಮ್ಮ ಕೋರಿಕೆಯನ್ನು ಇಲ್ಲಿ ಈಡೇರಿಸಿಕೊಳ್ಳುತ್ತಾರೆ. ಇಲ್ಲಿಗೆ ಬರುವ ಭಕ್ತರು ಕೌಂಟರ್ನಲ್ಲಿ ಒಂದು ಕಾಯಿಯನ್ನು ತೆಗೆದುಕೊಳ್ಳಬೇಕು. ಅಲ್ಲಿ ಕಾಯಿಯ ಮೇಲೆ ಅವರಿಗೆ ಕೊಟ್ಟಂತಹ ಸಂಖ್ಯೆ ಹಾಗೂ ದಿನಾಂಕಗಳನ್ನು ಬರೆಯುತ್ತಾರೆ. ಆ ಕಾಯಿಯನ್ನು ವಾಪಸ್ ಪಡೆದು ಹನುಮಂತ ದೇವರ ಮುಂದೆ ಸಂಕಲ್ಪಕ್ಕಾಗಿ ಕುಳಿತುಕೊಳ್ಳಬೇಕು. ಅಲ್ಲಿ ಅರ್ಚಕರು ಸಂಕಲ್ಪವನ್ನು ಮಾಡಿಸುತ್ತಾರೆ. ಸಂಕಲ್ಪ ಮುಗಿದ ಮೇಲೆ ಪ್ರದಕ್ಷಿಣೆಗೆ ಸಿದ್ಧವಾಗಬೇಕು. ಪ್ರದಕ್ಷಿಣೆಯನ್ನು ಪೂರೈಸಿದ ನಂತರ ಆ ಕಾಯಿಯನ್ನು ನಿಗದಿತ ಸ್ಥಳದಲ್ಲಿ ಕಟ್ಟಬೇಕು.

ಒಟ್ಟು 16 ದಿನದಲ್ಲಿ, ನಾಲ್ಕು ದಿನಗಳ ಕಾಲ ಬಂದು 41 ಪ್ರದಕ್ಷಿಣೆಗಳನ್ನು , ಆ ನಾಲ್ಕು ದಿನಗಳು ಕೂಡ ಹಾಕಿ ಒಟ್ಟಾಗಿ 120 ಪ್ರದಕ್ಷಿಣೆಯನ್ನು ಹಾಕಿ ಹದಿನಾರನೇ ದಿನ ಮರಳಿ ಈ ದೇವಸ್ಥಾನಕ್ಕೆ ಬಂದು ಕಟ್ಟಿದ ಕಾಯಿಯನ್ನು ಸ್ವೀಕರಿಸಿ, ಮನೆಗೆ ತೆಗೆದುಕೊಂಡು ಹೋಗಿ ಆ ಕಾಯಿಯಿಂದ ಸಿಹಿ ಮಾಡಿ ತಿನ್ನಬೇಕು ಎಂದು ಹೇಳುತ್ತಾರೆ. ಹಾಗೆ ಮಾಡಿದರೆ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ.
ಈ ಕ್ಷೇತ್ರಕ್ಕೆ ಶುಕ್ರವಾರದ ದಿನ ನೀವು ಹೋದರೆ ವಿಶೇಷ ಅನಘಾ ಪೂಜೆ ನಡೆಯುತ್ತದೆ. ಇಲ್ಲಿ ಮುತ್ತೈದೆಯರು ಭಾಗಿಯಾಗುವಂತಹ ಪೂಜೆ ಇದು . ನೀವು ಕೂಡ ಈ ದೇಗುಲಕ್ಕೆ ಒಮ್ಮೆ ಭೇಟಿ ನೀಡಿ.
ಈ ಗಿರಿನಗರದ ಕಾರ್ಯಸಿದ್ದಿ ಹನುಮ ಕ್ಷೇತ್ರಕ್ಕೆ ನೀವು ಬರುವುದಾದರೆ, ಬೆಂಗಳೂರಿಗೆ ಬಂದು ಅಲ್ಲಿ ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ಸುಗಳು 36b ,36e ಹೊರಡುತ್ತವೆ. ಅವಲಹಳ್ಳಿ ಬಸ್ ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಕ್ಷೇತ್ರಕ್ಕೆ, ಕೇವಲ ನಡೆದು ಹೋಗುವ ಹಾದಿಯಷ್ಟೇ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top