fbpx
ಹೆಚ್ಚಿನ

ದ್ವಾಪರಯುಗದಲ್ಲಿ ಶ್ರೀ ಕೃಷ್ಣನ ಬಳಿ ಇದ್ದ ವಿಶಿಷ್ಟ ಗುಣಗಳನ್ನು ಹೊಂದಿದ ಅತ್ಯಂತ ಬೆಲೆ ಬಾಳುವ ಶಮಂತಕಮಣಿ ಈಗ ಎಲ್ಲಿದೆ,ಏನ್ ಆಯಿತು ,ಇದರ ಹಿಂದೆ ಇರುವ ರೋಚಕ ಕಥೆ ಆದ್ರೂ ಏನು ,ನೋಡಿ ನೀವೇ.

ಅದೊಂದು ಬೆಲೆ ಕಟ್ಟಲಾಗದ ಅನರ್ಘ್ಯ ರತ್ನ. ಕಳೆದ ಎಂಟು ಶತಮಾನಗಳಿಂದ ಅದಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಭಾರತದಲ್ಲಿ ಮುಕುಟ ಮಣಿಯಾದ ಈ ವಸ್ತು ಇದೀಗ ಬ್ರಿಟನ್ ರಾಣಿಯ ಬಳಿ ಇದೆ .ಬೆಲೆಕಟ್ಟಲಾಗದ ಕೊಹಿನೂರ್ ವಜ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ಒಂದಷ್ಟು ಮಾಹಿತಿಗಳು ಇಲ್ಲಿವೆ.

ಕೊಹಿನೂರ್ ಈ ವಜ್ರದ ಬಗ್ಗೆ ಸಾಕಷ್ಟು ಕಥೆಗಳಿವೆ. ಇದನ್ನು ದ್ವಾಪರಯುಗದಲ್ಲಿ ಕಾಣಿಸಿಕೊಂಡ ಶಮಂತಕ ಮಣಿ ಎಂದು ಹೇಳಲಾಗುತ್ತದೆ. ರಾಜ ಸತ್ರಾಜಿತ ಸೂರ್ಯನನ್ನು ಕುರಿತು ತಪಸ್ಸು ಮಾಡಿ ಸೂರ್ಯ ಭಗವಂತನಿಂದ ಆ ಮಣಿಯನ್ನು ಪಡೆದುಕೊಂಡಿದ್ದ.ಆ ಮಣಿಯನ್ನು ಶುಭ್ರವಾಗಿರುವವರು ಧರಿಸಬೇಕಿತ್ತು. ಯಾವುದೇ ರೀತಿಯ ಅನಾಚಾರಗಳು ಆ ಮಣಿಗೆ ಆಗಬಾರದಿತ್ತು. ಒಂದು ವೇಳೆ ಹಾಗೇನಾದರೂ ಆದರೆ ಆ ಮಣಿಯಿಂದ ಸಮಸ್ಯೆಗಳು ಉಂಟಾಗುತ್ತಿದ್ದವು.ಇದರ ಪ್ರಭಾವದಿಂದ ಶ್ರೀ ಕೃಷ್ಣ ಜಾಂಬುವಂತನ ಮೇಲೆ ಯುದ್ಧ ಮಾಡಬೇಕಾಯಿತು. ಆನಂತರ ಆ ಮಣಿ ಕೃಷ್ಣನ ಪಾಲಾಗಿತ್ತು.

ಅಂತಹ ಮಣಿ ಕಲಿಯುಗದಲ್ಲಿ ಕೊಹಿನೂರ್ ವಜ್ರದ ರೂಪದಲ್ಲಿ ಕಾಣಿಸಿಕೊಂಡಿದೆಯಂತೆ. ಅಂದ ಹಾಗೆ ಕೊಹಿನೂರ್ ಎನ್ನುವುದು ಒಂದು ಉರ್ದು ಪದ . ಬೆಳಕಿನ ಪರ್ವತ ಎನ್ನುವುದಕ್ಕೆ ಉರ್ದುವಿನಲ್ಲಿ ಕೊಹಿನೂರ್ ಎಂದು ಕರೆಯುತ್ತಾರೆ. ಈ ಹೆಸರು ಕೂಡ ಪರ್ಷಿಯಾದ ರಾಜ ನಾದಿರ್ ಶಾ ಕೊಟ್ಟಿದ್ದು ಎನ್ನುವ ವಿಚಾರವನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಇಂತಹ ಕೊಹಿನೂರ್ ವಜ್ರ ಸಿಕ್ಕಿದ್ದು ನಮ್ಮ ನಾಡಿನಲ್ಲಿ.ಹೌದು ಇವತ್ತಿನ ಆಂಧ್ರಪ್ರದೇಶದಲ್ಲಿರುವ ಗುಂಟೂರು ಪ್ರಸಿದ್ಧ ವಜ್ರಗಳು ಸಿಗುವ ಪ್ರದೇಶಗಳಲ್ಲಿ ಒಂದು.ಈ ಪ್ರದೇಶ ಕೃಷ್ಣ ನದಿಯ ದಂಡೆಯ ಮೇಲೆ ಇದೆ. ಈ ಪ್ರದೇಶದಲ್ಲಿಯೇ ಬೆಲೆಬಾಳುವ ವಜ್ರ ಸಿಕ್ಕಿದ್ದು. ಅಷ್ಟೇ ಅಲ್ಲ ಈ ಕೊಹಿನೂರ್ ವಜ್ರದ ಜೊತೆಗೆ ಮತ್ತೊಂದು ರತ್ನ ಕೂಡಾ ಸಿಕ್ಕಿತು. ಅದನ್ನು ದರಿಯಾ ಎಂದು ಅಂದರೆ ಬೆಳಕಿನ ಸಾಗರ ಎಂದು ಕರೆಯಲಾಗುತ್ತಿತ್ತು. ಇವೆರಡು ಒಟ್ಟಿಗೆ ಕಾಣಿಸಿಕೊಂಡ ರತ್ನಗಳು. ಹಾಗಾಗಿ ಇವುಗಳನ್ನು ರತ್ನಗಳ ರಾಜ ಎನ್ನುವ ಹೆಸರಿನಿಂದ ಕರೆಯುವುದು ಉಂಟು.

 

 

ಆದರೆ ಕಾಲಕ್ರಮೇಣ ಕೊಹಿನೂರ್ ಕಾಕತೀಯರ ಕೈಸೇರಿತ್ತು. ಅಲ್ಲಿಂದಲೇ ಇದರ ಅದ್ಭುತ ಶಕ್ತಿ ಅನಾವರಣಗೊಂಡಿದ್ದು. ಕ್ರಿಸ್ತಶಕ 11 ನೇ ಶತಮಾನದಲ್ಲಿ ಈಗಿನ ಆಂಧ್ರಪ್ರದೇಶದ ಭೂ ಭಾಗವನ್ನು ಆಳುತ್ತಿದ್ದ ಕಾಕತೀಯ ವಂಶದವರ ಬಳಿ ಇತ್ತು ಈ ಕೊಹಿನೂರ್. ಅಲ್ಲಿಂದ ಎರಡು ನೂರು ವರ್ಷಗಳ ಕಾಲ ಕಾಕತೀಯರು ಅದನ್ನು ಜೋಪಾನ ಮಾಡಿದ್ದರು. ಅಪಾರ ಪ್ರಮಾಣದ ಮುತ್ತು ರತ್ನಗಳನ್ನು ಹೊಂದಿದ್ದ ಶ್ರೀಮಂತ ರಾಜ ಮನೆತನಗಳಲ್ಲಿ ಒಂದಾದ ರತ್ನ ಎಂದೇ ಪರಿಗಣಿಸಿದ್ದರು. ಇಂತಹದೊಂದು ಅಪೂರ್ವ ವಜ್ರ ಕಾಕತೀಯರ ಬಳಿ ಇದೆ ಎಂದು ಭಾರತದಲ್ಲಿ ಆ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಸಾಕಷ್ಟು ರಾಜರಿಗೆ ಗೊತ್ತಿತ್ತು .ಹೀಗಾಗಿ ಅವರೆಲ್ಲ ಈ ಅಮೂಲ್ಯ ವಸ್ತುವಿನ ಮೇಲೆ ಕಣ್ಣಿಟ್ಟಿದ್ದರು.

1323 ರಲ್ಲಿ ಉಲುಫ ಖಾನ್ ಕಾಕತೀಯರ ಮೇಲೆ ಯುದ್ಧ ಸಾರಿದ್ದ . ಆ ದಾಳಿಯಲ್ಲಿ ಪ್ರತಾಪ ರುದ್ರನಿಗೆ ಸೋಲಾಯಿತು. ಕಾಕತೀಯ ಸಾಮ್ರಾಜ್ಯದ ತೋಘಲಕ್ ನ ವಶವಾಯಿತು. ಆಗ ಪ್ರತಾಪರುದ್ರನ ವಶದಲ್ಲಿದ್ದ ಅನರ್ಘ್ಯ ರತ್ನವು ತೋಘಲಕ್ ಬಂಡಾರ ಸೇರಿತು.ಅಲ್ಲಿಗೆ ಕೊಹಿನೂರ್ ವಜ್ರ ದೆಹಲಿಯ ಸುಲ್ತಾನರ ವಶವಾಯಿತು .ದೆಹಲಿ ಸುಲ್ತಾನರ ಬಳಿ ಇಂತಹದ್ದೊಂದು ವಜ್ರ ಇದೆ ಎನ್ನುವ ವಿಚಾರ ದೇಶ-ವಿದೇಶಗಳಲ್ಲಿ ವ್ಯಾಪಿಸಿತು. ಪ್ರತಿಯೊಂದು ರಾಜಮನೆತನವು ಆ ವಜ್ರವನ್ನು ಪಡೆದೇ ತೀರಬೇಕು ಎಂದು ನಿರ್ಧರಿಸಿ, ಸೂಕ್ತ ಸಮಯಕ್ಕಾಗಿ ವಂಚು ಹಾಕಿಕುಳಿತ್ತಿದ್ದರು. ತಮ್ಮ ವಶದಲ್ಲಿದ್ದ ವಜ್ರವನ್ನು ಸುಮಾರು ಎರಡು ಶತಮಾನಗಳಷ್ಟು ಕಾಲ ಉಳಿಸಿಕೊಂಡಿತು.

ಆದರೆ ಕ್ರಿಸ್ತಶಕ 1526 ರಲ್ಲಿ ನಡೆದ ಒಂದನೇ ಪಾಣಿಪಾತ್ ಯುದ್ಧದಲ್ಲಿ ಬಾಬರ್ ದೆಹಲಿಯ ಸುಲ್ತಾನ ಇಬ್ರಾಹಿಂ ಲೂದಿಯನ ಸೋಲಿಸಿದ . ಆ ನಂತರ ದೆಹಲಿ ಬಾಬರ್ ನ ವಶವಾಯಿತು. ಅನಂತರ ಜೊತೆಗೆ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ಸ್ಥಾಪನೆ ಕೂಡ ಆಗಿತ್ತು. ಅಂದಿನಿಂದ ಕೊಹಿನೂರ್ ವಜ್ರ ಮೊಗಲರ ಆಸ್ತಿ ಆಯಿತು .ಇಲ್ಲೂ ಕೂಡಾ ಕೋಹಿನೂರು ವಜ್ರದ ಆಯಸ್ಸು ಎರಡು ಶತಮಾನಗಳ ಆಗಿತ್ತು ಅಷ್ಟೇ. ಯಾಕೆಂದರೆ ಮೊಘಲ್ ಚಕ್ರವರ್ತಿ ಔರಂಗಜೇಬನ ನಂತರ ಇಡೀ ಸಾಮ್ರಾಜ್ಯವೇ ಅಧಪತನ ಕಂಡಿತ್ತು. 1739 ರಲ್ಲಿ ಇರಾನಿನ ದೊರೆ ನಾದಿರ್ ಶಾ ದೆಹಲಿಯ ದೊರೆಯ ಮೇಲೆ ದಾಳಿ ಮಾಡಿ ಮೊಘಲರ ದೊರೆಯನ್ನು ಸೋಲಿಸಿ ಈ ವಜ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ .

ಆಗಲೇ ನೋಡಿ ನಾದಿರ್ ಶಾ ನ ಪತ್ನಿ ಈ ವಜ್ರಕ್ಕೆ ಕೊಹಿನೂರ್ ಎಂದು ಕರೆದಿದ್ದು .ಹೀಗೆ ಎರಡು ವರ್ಷ ಕಳೆಯುವುದರಲ್ಲಿ ಅವನ ಕೊಲೆಯಾಗಿತ್ತು .ಕೋಹಿನೂರು ವಜ್ರದ ಉಸ್ತುವಾರಿ ನಾದಿರ್ ಶಾ ನ ಅಪ್ಘನ್ ಅಹಮದ್ ಶಾ ನ ಸೇನಾಧಿಪತಿ ಸುಪರ್ದಿಗೆ ಬಂತು. ಆದರೆ 1830 ರಲ್ಲಿ ಕೊಹಿನೂರ್ ವಜ್ರವನ್ನು ಕಳ್ಳತನದಿಂದ ತನ್ನ ವಶ ಮಾಡಿಕೊಂಡ ಅಫ್ಘನ ಪದಚ್ಯುತ ದೊರೆ ಪೂಜಾ ಶಾ ದೂರಾನಿ ಕೋಹಿನೂರ್ ವಜ್ರವನ್ನು ಲಾಹೋರಿಗೆ ತೆಗೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಸಿಕ್ಕದೊರೆ ರಣಜಿತ್ ಸಿಂಗ್ ಆ ರತ್ನವನ್ನು ತನಗೆ ಒಪ್ಪಿಸುವಂತೆ ಕೇಳಿದ್ದ. ಅದಕ್ಕೆ ಶೂರ್ಜಾ ಶಾ ಒಂದು ಷರತ್ತು ವಿಧಿಸಿ.
ಅಫ್ಘನ ಸಿಂಹಾಸನವನ್ನು ಗೆದ್ದು ಕೊಟ್ಟರೆ ನಿನಗೆ ಈ ವಜ್ರವನ್ನು ಕೊಡುವುದಾಗಿ ಹೇಳಿದ . ಮಾತಿನಂತೆ ರಣಜಿತ್ ಸಿಂಗ್ ಅಫ್ಘಾನ್ ಗೆದ್ದು ಕೊಹಿನೂರ್ ವಜ್ರವನ್ನು ತನ್ನ ವಶಕ್ಕೆ ಪಡೆದ. ಅಲ್ಲಿಗೆ ಐದು ನೂರು ವರ್ಷಗಳ ಕಾಲ ಪರಕೀಯರ ವಶದಲ್ಲಿದ್ದ ಕೊಹಿನೂರ್ ವಜ್ರ ಮತ್ತೆ ಭಾರತದ ಪಾಲಾಗಿತ್ತು.ಈ ಕೊಹಿನೂರ್ ವಜ್ರ ಸಿಕ್ಕ್ ಸಾಮ್ರಾಜ್ಯದಲ್ಲಿ ಇದ್ದದ್ದು ಕೇವಲ 20 ವರ್ಷಗಳ ಕಾಲ ಮಾತ್ರ.1849 ರಲ್ಲಿ ಬ್ರಿಟಿಷರ ಜೊತೆಯ ಯುದ್ದದಲ್ಲಿ ಸಿಕ್ಕ ಸಾಮ್ರಾಜ್ಯ ಸೋಲಬೇಕಾಯಿತು.ಅಲ್ಲಿಗೆ ಬ್ರಿಟಿಷರು ಲಾಹೋರ್ ಸಾಮ್ರಾಜ್ಯದ ಮೇಲೆ ತಮ್ಮ ದ್ವಜವನ್ನು ಹಾರಿಸಿದ್ದರು.ಆಗ ಕೊಹಿನೂರ್ ಮತ್ತೆ ಪರಕೀಯರ ಪಾಲಾಯಿತು.ಅಂದಿನಿಂದ ಇಂದಿನವರೆಗೆ ಅದು ಬ್ರಿಟಿಷರ ಸುಪರ್ದಿಯಲ್ಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top