ಸಮಾಚಾರ

ವಿಮಾನ ಹೈಜಾಕರ ಮಗಳನ್ನು ಮದುವೆಯಾದ ಲಾಡೆನ್ ಮಗ, ಯಾರು ಆ ಹೈಜಾಕರ ನೀವೇ ನೋಡಿ

ಇಡೀ ಜಗತ್ತಿಗೆ ಕಂಟಕವಾಗಿದ್ದ ಅಲ್ –ಖೈದಾ ಭಯೋತ್ಪಾದನ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ನನ್ನ ಅಮೇರಿಕಾ ಸೇನೆ ಕೊಂದು ವರ್ಷಗಳೇ ಕೆಳೆದಿವೆ ಈಗ ಇವನ ಮಗ ಹಮ್ಜಾ ಬಿನ್ ಲಾಡೆನ್ ವಿವಾಹವಾಗಿದ್ದಾನೆ. ಹಮ್ಜಾ ಬಿನ್ ಲಾಡೆನ್ ಮದುವೆ ಈಗ ಚರ್ಚೆಯ ವಿಷ್ಯವಾಗಿದೆ. ಏಕೆ ಅಂತೀರಾ ಮುಂದೆ ಓದಿ.

ಏಕೆಂದರೆ ಒಸಾಮಾ ಬಿನ್ ಲಾಡೆನ್‌ ಮಗ ಹಮ್ಜಾ ಬಿನ್ ಲಾಡೆನ್‌ ವಿಮಾನ ಹೈಜಾಕರ್‌ ಮೊಹಮ್ಮದ್‌ ಅಟ್ಟಾನ ಮಗಳನ್ನು ಮದುವೆ ಆಗಿದ್ದಾನೆ ಎಂದು ತಿಳಿದು ಬಂದಿದೆ.

 

 

2001 ರಲ್ಲಿ ಸೆಪ್ಟೆಂಬರ್‌ನಲ್ಲಿ ಅಮೆರಿಕ ಮೇಲೆ ನಡೆದ ದಾಳಿಗೆ ವಿಮಾನ ಅಪಹರಣ ಮಾಡಿದ ಪ್ರಮುಖ ರೂವಾರಿಯೇ ಈ ಮೊಹಮ್ಮದ್‌ ಅಟ್ಟಾ. ಈಜಿಪ್ಟ್‌ ಪ್ರಜೆಯಾಗಿರುವ ಈತ ಅಮೆರಿಕನ್ ಏರ್‌ಲೈನ್ಸ್‌ ವಿಮಾನವನ್ನು ಅಪಹರಿಸಿ ವಿಶ್ವ ವಾಣಿಜ್ಯ ಕೇಂದ್ರದ ಉತ್ತರ ಗೋಪುರಕ್ಕೆ (ಟವರ್‌) ಡಿಕ್ಕಿ ಹೊಡೆಸಿದ್ದ ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ವಿಮಾನದೊಳಗಿದ್ದ ಎಲ್ಲ 92 ಮಂದಿ ಪ್ರಯಾಣಿಕರು ಹಾಗು ಕಟ್ಟಡದಲ್ಲಿದ್ದ 1,600ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ಮದುವೆ ನಡೆದಿರುವುದನ್ನು ಒಸಾಮಾ ಬಿನ್ ಲಾಡೆನ್‌ ಕುಟುಂಬದ ಅಹ್ಮದ್‌ ಮತ್ತು ಹಸನ್‌ ಅಲ್ ಅಟ್ಟಾಸ್‌ ನೀಡಿರುವ ಸಂದರ್ಶನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.  ಅಹ್ಮದ್‌ ಮತ್ತು ಹಸನ್‌ ಅಲ್ ಅಟ್ಟಾಸ್‌ ಗೆ ಹಮ್ಜಾ ಬಿನ್ ಲಾಡೆನ್‌ ಈಗ ಎಲ್ಲಿದ್ದಾನೆ ಎಂಬ ಮಾಹಿತಿ ಗೊತ್ತಿಲ್ಲ. ಅಪಘಾನಿಸ್ತಾನದಲ್ಲಿ ಇರಬಹುದು ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top